ಬೆಂಗಳೂರು: ಪ್ರತಿ ವರ್ಷ ಸೆಪ್ಟೆಂಬರ್ 8 ಅನ್ನು ಜಾಗತಿಕ ಸಮುದಾಯ ವಿಶ್ವ ಭೌತಿಕ ಚಿಕಿತ್ಸಾ ದಿನವೆಂದು (World Physical Therapy Day) ಆಚರಿಸುತ್ತದೆ. ಜಗತ್ತಿನಾದ್ಯಂತ ಪ್ರತಿಯೊಬ್ಬರ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಭೌತಿಕ ಚಿಕಿತ್ಸೆ ಎಂಬುದು ಪ್ರಮುಖ ಪಾತ್ರ ವಹಿಸಿದೆ. ಈ ದಿನದಂದು ಅನೇಕ ವೇದಿಕೆಗಳು ಜನಜೀವನದಲ್ಲಿ ದೈಹಿಕ ಚಿಕಿತ್ಸೆಯ ಪ್ರಯೋಜನ ಮತ್ತು ಅದರ ಸಕಾರಾತ್ಮಕ ಪ್ರಭಾವಗಳ ಕುರಿತು ಜಾಗೃತಿ ಮೂಡಿಸುತ್ತವೆ.
ಇತಿಹಾಸ:ವಿಶ್ವ ಭೌತಿಕ ಚಿಕಿತ್ಸಾ ದಿನವನ್ನು ವಿಶ್ವ ಪಿಟಿ ದಿನ ಎಂದು ಕರೆಯಲಾಗುತ್ತದೆ. 1951ರ ಸೆಪ್ಟೆಂಬರ್ 8ರಂದು ಈ ದಿನವನ್ನು ಸ್ಥಾಪಿಸಲಾಯಿತು. ಆದಾಗ್ಯೂ, ಈ ದಿನ ಅಧಿಕೃತವಾಗಿ ಜಾರಿಗೆ ಬಂದಿದ್ದು ಸೆಪ್ಟೆಂಬರ್ 8, 1996.
ಭೌತಿಕ ಚಿಕಿತ್ಸೆ ಮಹತ್ವ:ಭೌತಿಕ ಚಿಕಿತ್ಸೆಗಳು ಜೀವನದ ಗುಣಮಟ್ಟವನ್ನು ಸುಧಾರಿಸುವ ಜೊತೆಗೆ ಅವರ ಸ್ವಾತಂತ್ರವನ್ನು ಮರಳಿ ಪಡೆಯಲು ಅಧಿಕಾರ ನೀಡುತ್ತದೆ. ಗಾಯದಿಂದ ಗುಣಮುಖವಾಗಲು ಅಥವಾ ದೀರ್ಘ ಆರೋಗ್ಯ ಪರಿಸ್ಥಿತಿ ನಿರ್ವಹಣೆ ಅಥವಾ ಚಲನಶೀಲತೆ ಹೆಚ್ಚಿಸಲು ದೈಹಿಕ ಸವಾಲುಗಳಿಂದ ಹೊರಬರಲು ಈ ಚಿಕಿತ್ಸೆಗಳು ಸಾಕಷ್ಟು ಸಹಾಯ ಮಾಡುತ್ತದೆ.
ಅಪಘಾತ, ಸರ್ಜರಿ ಅಥವಾ ಅನಾರೋಗ್ಯದಲ್ಲಿ ಈ ದೈಹಿಕ ಚಿಕಿತ್ಸೆಗಳು ಪುನರ್ಜೀವನದ ಸಾಧನವಾಗಿದೆ. ರೋಗಿಗಳಿಗೆ ಶಕ್ತಿ, ಚಲನಶೀಲತೆ ಮತ್ತು ಕಾರ್ಯವನ್ನು ಮರಳಿ ಪಡೆಯಲು ನೆರವಾಗುತ್ತದೆ. ಜಾಗತಿಕವಾಗಿ ದೀರ್ಘಕಾಲಿಕ ನೋವುಗಳಿಂದ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ದೈಹಿಕ ಚಿಕಿತ್ಸಕರು ತಮ್ಮ ತಂತ್ರ, ಸ್ವಯಂಚಿಕಿತ್ಸೆ ಮತ್ತು ವ್ಯಾಯಾಮದ ಮೂಲಕ ಈ ನೋವುಗಳನ್ನು ಪರಿಹರಿಸಿ, ರೋಗಿಗಳ ಯೋಗಕ್ಷೆಮಕ್ಕೆ ಸಹಾಯ ಮಾಡುತ್ತಾರೆ. ಇದು ನೋವಿನ ಔಷಧಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಭೌತಿಕ ಚಿಕಿತ್ಸಕರು ಅನೇಕ ಆರೋಗ್ಯ ಸಮಸ್ಯೆ ತಡೆಯಲು ಸಲಹೆ ನೀಡುತ್ತಾರೆ. ಅವರು ಪ್ರತಿಯೊಬ್ಬರಿಗೂ ಕುಳಿತುಕೊಳ್ಳುವ ಸರಿಯಾದ ಭಂಗಿ, ಜೀವನ ಶೈಲಿಯ ಬದಲಾವಣೆಯಿಂದ ಗಾಯಗಳ ತಡೆಗಟ್ಟುವಿಕೆ ಮತ್ತು ದೈಹಿಕ ಆರೋಗ್ಯ ನಿರ್ವಹಣೆ ಕುರಿತು ಶಿಕ್ಷಣ ನೀಡುತ್ತಾರೆ. ಭೌತಿಕ ಚಿಕಿತ್ಸಕರು ಅನೇಕ ವಿಷಯದಲ್ಲಿ ತಜ್ಞತೆ ಹೊಂದಿರುತ್ತದೆ. ಮಕ್ಕಳ ಚಿಕಿತ್ಸೆಯಿಂದ ದೊಡ್ಡವರ ಆರೈಕೆಯವರೆಗೆ ಅವರು ವಿಶಾಲ ಚಿಕಿತ್ಸಾ ವಿಧಾನ ಹೊಂದಿದ್ದಾರೆ. ಈ ವೈವಿಧ್ಯತೆಯಿಂದ ಎಲ್ಲಾ ವಯೋಮಾನದ ಜನರು ಕೂಡ ಪರಿಸ್ಥಿತಿ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆ ಪಡೆಯಬಹುದು.