ಲಂಡನ್:ವಾಯು ಮಾಲಿನ್ಯಕ್ಕೆ ಹೆಚ್ಚು ಒಡ್ಡಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ ಎಂದು ಬ್ರಿಟನ್ ವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಸಮೀಕ್ಷೆಯಾಗಿದ್ದು, 'ಯುಕೆ ಬಯೋಬ್ಯಾಂಕ್'ನಲ್ಲಿ 3.6 ಲಕ್ಷ ಜನರ ಡೇಟಾವನ್ನು ಸಂಶೋಧನೆ ನಡೆಸಿದ್ದು. ಇದು ಪರೀಕ್ಷಾರ್ಥಿಗಳ ಆನುವಂಶಿಕ, ಜೀವನಶೈಲಿ ಮತ್ತು ಆರೋಗ್ಯ ಮಾಹಿತಿಯನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
36 ದೈಹಿಕ ಮತ್ತು ಐದು ಮಾನಸಿಕ ಆರೋಗ್ಯ ಸಮಸ್ಯೆಗಳ ಪ್ರಭಾವವನ್ನು ವಿಶ್ಲೇಷಿಸಲಾಗಿದ್ದು. ವಾಹನದ ಹೊಗೆ ಮತ್ತು PM 2.5 ಕಣಗಳು ಮತ್ತು ನೈಟ್ರೋಜನ್ ಡೈಆಕ್ಸೈಡ್ಗಳಿಂದ ಕನಿಷ್ಠ ಎರಡು ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಕಂಡುಬಂದಿದೆ.
ಅಂತಹವರಿಗೆ ನರರೋಗ, ಉಸಿರಾಟ, ಹೃದಯದ ತೊಂದರೆಗಳ ಅಪಾಯ ಹೆಚ್ಚು ಎಂದು ಕಂಡುಬರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಉಸಿರಾಟದ ಸಮಸ್ಯೆ ಜೊತಗೆ ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಅಸ್ವಸ್ಥತೆಗಳು ಸಹ ಸಾಧ್ಯವಿದೆ ಎಂದು ತಜ್ಞರು ಹೇಳುತ್ತಾರೆ.
ಜೀವಕ್ಕೆ ಅಪಾಯಕಾರಿ: ಗಾಳಿಯಲ್ಲಿರುವ ಕಣಗಳು ಶ್ವಾಸಕೋಶದಲ್ಲಿ ಉರಿಯನ್ನು ಉಂಟು ಮಾಡುತ್ತದೆ, ಆಕ್ಸಿಡೇಟಿವ್ ಒತ್ತಡ ಮತ್ತು ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯ ಅತಿಯಾದ ಪ್ರತಿಕ್ರಿಯೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಹೇಳಲಾಗಿದೆ. ಇದರಿಂದ ಮೆದುಳು, ಹೃದಯ, ರಕ್ತ, ಶ್ವಾಸಕೋಶ ಮತ್ತು ಕರುಳಿಗೆ ಹಾನಿಯಾಗುತ್ತದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ ಎಂದು ವಿಜ್ಞಾನಿಗಳು ವಿವರಿಸಿದರು.
ಇದನ್ನೂ ಓದಿ:ಕರುಳಿನ ಸೂಕ್ಷ್ಮಜೀವಿಗಳ ಮೇಲೆ ಕಡಲೆಕಾಯಿ, ಗಿಡಮೂಲಿಕೆಗಳಿಂದ ಅದ್ಭುತ ಪರಿಣಾಮ