ಕರ್ನಾಟಕ

karnataka

ETV Bharat / sukhibhava

ದೀರ್ಘಕಾಲದ ಕೋವಿಡ್​ನಿಂದ ಹೃದಯಾಘಾತ, ಪಾರ್ಶ್ವವಾಯು ಹೆಚ್ಚಳ: ಅಧ್ಯಯನ ವರದಿ - ಈಟಿವಿ ಭಾರತ ಕನ್ನಡ

ಒಂದು ವರ್ಷ ಅಥವಾ ಅದಕ್ಕೂ ಮೇಲ್ಪಟ್ಟು ಅವಧಿಯಲ್ಲಿನ ಲಕ್ಷಾಂತರ ರೋಗಿಗಳ ಡೇಟಾ ಅಧ್ಯಯನ ಮಾಡಿದ್ದು, ಸಾಮಾನ್ಯ ಜನತೆಗೆ ಹೋಲಿಸಿದಾಗ ಇವರಲ್ಲಿ ಹೃದಯಾಘಾತದ ಪ್ರಕರಣಗಳು ಶೇ 60ರಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ.

ದೀರ್ಘಕಾಲದ ಕೋವಿಡ್​ನಿಂದ ಹೃದಯಾಘಾತ
ದೀರ್ಘಕಾಲದ ಕೋವಿಡ್​ನಿಂದ ಹೃದಯಾಘಾತ

By

Published : Sep 6, 2022, 3:37 PM IST

Updated : Sep 6, 2022, 6:14 PM IST

ನವದೆಹಲಿ: ದೀರ್ಘಕಾಲದವರೆಗೆ ನಿರಂತರವಾದ ಕೋವಿಡ್ ಸೋಂಕು ಇದ್ದಾಗ ಮತ್ತು ಸೋಂಕು ಸೌಮ್ಯವಾಗಿದ್ದರೂ ಸಹ ರೋಗಿಗಳಲ್ಲಿ ಹೃದಯಾಘಾತ ಮತ್ತು ಮೆದುಳಿನ ಪಾರ್ಶ್ವವಾಯುಗಳ ಘಟನೆಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಸೆಪ್ಟೆಂಬರ್ 5 ರಂದು ಹಿರಿಯ ಆರೋಗ್ಯ ತಜ್ಞರು ಹೇಳಿದ್ದಾರೆ.

ಅಧ್ಯಯನವು ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳ ಘಟನೆಗಳಲ್ಲಿ ಶೇಕಡಾ 60 ರಷ್ಟು ಹೆಚ್ಚಳವಾಗಿರುವುದನ್ನು ಕಂಡುಹಿಡಿದಿದೆ ಎಂದು ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಮತ್ತು ಆರೋಗ್ಯ ತಜ್ಞ ಡಾ. ಅಶೋಕ್ ಸೇಠ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಸೇಠ್, ಪಾಶ್ಚಿಮಾತ್ಯ ದೇಶಗಳ ಬಹುದೊಡ್ಡ ಡೇಟಾ ನಮ್ಮ ಬಳಿಯಿದೆ. ಒಂದು ವರ್ಷ ಅಥವಾ ಅದಕ್ಕೂ ಮೇಲ್ಪಟ್ಟು ಅವಧಿಯಲ್ಲಿನ ಲಕ್ಷಾಂತರ ರೋಗಿಗಳ ಡೇಟಾ ಅಧ್ಯಯನ ಮಾಡಿದ್ದು, ಸಾಮಾನ್ಯ ಜನತೆಗೆ ಹೋಲಿಸಿದಾಗ ಇವರಲ್ಲಿ ಹೃದಯಾಘಾತದ ಪ್ರಕರಣಗಳು ಶೇ 60ರಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ.

ದೀರ್ಘಕಾಲದ ಕೋವಿಡ್​ನಿಂದ ಹೃದಯಾಘಾತ, ಪಾರ್ಶ್ವವಾಯು ಹೆಚ್ಚಳ

ಅಲ್ಲದೆ ಪಾರ್ಶ್ವವಾಯು ಪ್ರಕರಣಗಳೂ ಹೆಚ್ಚಾಗಿವೆ. ಅಂದರೆ ಕೋವಿಡ್ ಸೌಮ್ಯವಾಗಿ ಇದ್ದರೂ ಕೂಡ ಅದು ಸುಮಾರು ಒಂದು ವರ್ಷದವರೆಗೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಹೃದಯಾಘಾತ ಮತ್ತು ಪಾರ್ಶ್ವವಾಯು ಉಂಟಾಗುವ ಸಾಧ್ಯತೆಗಳನ್ನು ಹೆಚ್ಚಿಸಬಹುದು ಎಂದು ಹೇಳಿದರು.

ಇದನ್ನೂ ಓದಿ:ವ್ಯಾಕ್ಸಿನ್ ಪಡೆದು ಓಮಿಕ್ರಾನ್​ ಸೋಂಕಿಗೊಳಗಾದವರಿಗೆ ಕೋವಿಡ್​ನಿಂದ ನಾಲ್ಕು ಪಟ್ಟು ಹೆಚ್ಚು ರಕ್ಷಣೆ

Last Updated : Sep 6, 2022, 6:14 PM IST

ABOUT THE AUTHOR

...view details