ಹೆಣ್ಣಿಗೆ ಕೆಲವೊಂದು ಸಮಸ್ಯೆಗಳು ಕಿರಿಕಿರಿ ಅನಿಸಿಬಿಡುತ್ತದೆ. ಅದರಲ್ಲೂ ಪ್ರತಿ ತಿಂಗಳು ಕಾಡುವ ಮುಟ್ಟಿನ ಸಮಸ್ಯೆಯಂತೂ ಭಯಾನಕವಾಗಿರುತ್ತದೆ. ದೇಹದಲ್ಲಾಗುವ ಬದಲಾವಣೆಗಳಿಗೆ ಹುಡುಗಿಯರು, ಮಹಿಳೆಯರು ಹೊಂದಿಕೊಳ್ಳಬೇಕಾಗುತ್ತದೆ. ಪ್ರತಿ ಹೆಣ್ಣು ಕೂಡ ಈ ಪ್ರಕ್ರಿಯೆಯನ್ನು ಅನುಭವಿಸುತ್ತಾಳೆ ಮತ್ತು ಇದು ಪ್ರಬುದ್ಧತೆಯ ವಿಶಿಷ್ಟ ಅಂಶವಾಗಿದೆ. ಈ ಸಮಯದಲ್ಲಿ ಕೆಲವೊಂದು ಸಲಹೆಗಳನ್ನು ಪಾಲಿಸುವುದು ಉತ್ತಮ. ಅವುಗಳಲ್ಲಿ ಪ್ರಮುಖವಾಗಿ ಕಷ್ಟಕರವಲ್ಲದ ಮತ್ತು ಹಿತಕರವಾಗಿರುವ 5 ನಿಯಮಗಳನ್ನು ಅನುಸರಿಸುವುದು ಒಳ್ಳೆಯದು.
'ಅಗತ್ಯ ವಸ್ತುಗಳನ್ನು ಇರಿಸಿಕೊಳ್ಳಿ..'ತಿಂಗಳು ಮುಟ್ಟಿನ ದಿನ ಸಮೀಪಿಸುವ ಸಮಯಕ್ಕೆ ಮನೆಯಲ್ಲಿ ಅಥವಾ ನಿಮ್ಮ ಬ್ಯಾಗ್ನಲ್ಲಿ ಸುಲಭವಾಗಿ ಸಿಗುವಂತೆ ಸ್ಯಾನಿಟರಿ ನ್ಯಾಪ್ಕಿನ್ ಅಥವಾ ಟ್ಯಾಂಪೂನ್ಗಳನ್ನು ಇಟ್ಟುಕೊಂಡಿದ್ದೀರಾ? ಎಂಬುದನ್ನು ಮೊದಲಿಗೆ ಖಚಿತಪಡಿಸಿಕೊಳ್ಳಬೇಕು. ಸರಿಯಾದ ರೀತಿಯಲ್ಲಿ ಈ ಕ್ರಮವನ್ನು ಅನುಸರಿಸಿದರೆ, ನಿಮ್ಮ ಮನಸ್ಸಿಗೆ ಸ್ಪಲ್ಪ ನೆಮ್ಮದಿ ಅನಿಸುತ್ತದೆ. ಅಲ್ಲದೇ ನಿಮ್ಮ ಅವಧಿಯನ್ನು ಆತ್ಮವಿಶ್ವಾಸದಿಂದ ನಿರ್ವಹಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ನೋವು ನಿವಾರಕ ಟ್ಯಾಬ್ಲೆಟ್ ಅನ್ನು ಇಟ್ಟುಕೊಳ್ಳುವುದರಿಂದ ಅಸ್ವಸ್ಥತೆ ಅಥವಾ ಸೆಳೆತವನ್ನು ನಿವಾರಿಸಬಹುದು.
'ತಿಂಗಳ ದಿನಾಂಕವನ್ನು ನೆನಪಿಟ್ಟುಕೊಳ್ಳಿ..'ನಿಮ್ಮ ಋತುಚಕ್ರದ ದಿನಾಂಕದ ಬಗ್ಗೆ ನಿಗಾ ಇಡಬೇಕು. ಹಾಗಿದ್ದಲ್ಲಿ ಮುಂದಿನ ತಿಂಗಳ ದಿನಾಂಕ ಯಾವುದೆಂದು ಊಹಿಸಲು ಸುಲಭವಾಗುತ್ತದೆ. ಇದು ಮುಂಚಿತವಾಗಿ ತಯಾರಿಗಳನ್ನು ಮಾಡಿಕೊಳ್ಳಲು ಸಹಕಾರಿ. ದಿನಾಂಕ ನೆನಪಿಟ್ಟುಕೊಳ್ಳಲು ಸುಲಭ ಕ್ರಮವನ್ನು ಅನುಸರಿಸಬಹುದು, ಅದಕ್ಕಾಗಿ ನೀವು ಟ್ರ್ಯಾಕಿಂಗ್ ಅಪ್ಲಿಕೇಶನ್ ಅನ್ನು ಬಳಸಬಹುದು. ಇಲ್ಲವಾದಲ್ಲಿ ಕ್ಯಾಲೆಂಡರ್ ಇರಿಸಿಕೊಳ್ಳಿ ಅಥವಾ ಪ್ರತಿ ತಿಂಗಳು ನಿಮ್ಮ ಅವಧಿಗಳ ಪ್ರಾರಂಭ ಮತ್ತು ಅಂತ್ಯದ ದಿನಾಂಕವನ್ನು ಟಿಪ್ಪಣಿ ಮಾಡಿಟ್ಟುಕೊಳ್ಳಿ.
'ಸೆಳೆತ ಕಡಿಮೆ ಮಾಡಲು ಇದನ್ನು ಬಳಸಿ..'ಮುಟ್ಟಿನ ಸೆಳೆತವು ಅಹಿತಕರವಾಗಿರುತ್ತದೆ ಮತ್ತು ಕೆಲವೊಮ್ಮೆ ನಮ್ಮನ್ನು ದುರ್ಬಲಗೊಳಿಸುತ್ತದೆ. ಸೆಳೆತವನನ್ನು ಕಡಿಮೆ ಮಾಡಲು ಸಹಾಯ ಮಾಡುವ ಅನೇಕ ನೋವು ನಿವಾರಕಗಳಿವೆ. ಹೆಚ್ಚುವರಿಯಾಗಿಯಾಗಿ ಹೀಟಿಂಗ್ ಪ್ಯಾಡ್, ಬೆಚ್ಚಗಿನ ಸ್ನಾನ ಅಥವಾ ಶಾಟ್ ವಾಟರ್ ಬಾಟಲ್ ಸಹ ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ.