ನವದೆಹಲಿ: ಮಾನಸಿಕ ಗೊಂದಲದಂತಹ ಬೈಪೋಲಾರ್ ಸಮಸ್ಯೆ ಹೊಂದಿರುವ ಜನರು ಅಪಘಾತ, ಹಿಂಸೆ ಮತ್ತು ಆತ್ಮಹತ್ಯೆಯಂತಹ ಕಾರಣಗಳಿಂದಾಗಿ ಅಕಾಲಿಕವಾಗಿ ಸಾವನ್ನಪ್ಪುವ ಸಂಖ್ಯೆ 6 ಪಟ್ಟು ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ. ಬಿಎಂಜೆ ಮೆಂಟಲ್ ಹೆಲ್ತ್ನಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಲಾಗಿದೆ. ಜೊತೆಗೆ ಹೃದಯ ಅಥವಾ ಶ್ವಾಸಕೋಶ ಅಥವಾ ಕ್ಯಾನ್ಸರ್ನಂತಹ ದೈಹಿಕ ಅನಾರೋಗ್ಯ ಸಮಸ್ಯೆಗಳಿಂದ ಬೈಪೋಲಾರ್ ಸಮಸ್ಯೆ ಹೊಂದಿರುವವರು ಸಾಯುವ ಸಂಖ್ಯೆ ದುಪ್ಪಟ್ಟಾಗಿದ್ದು, ಇದರಲ್ಲಿ ಆಲ್ಕೋಹಾಲ್ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಲಾಗಿದೆ. ಪಿನಿಷ್ ಜನಸಂಖ್ಯೆ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಗಿದೆ.
ಬೈಪೋಲಾರ್ ಸಮಸ್ಯೆ ಹೊಂದಿರುವ ಜನರು ಅಕಾಲಿಕ ಸಾವನ್ನು ಹೆಚ್ಚಾಗಿ ಕಾಣುತ್ತಾರೆ. ಆದಾಗ್ಯೂ, ದೈಹಿಕ ಅನಾರೋಗ್ಯದಂತಹ ವಿಚಾರಗಳು ಅಸ್ಪಷ್ಟವಾಗಿದೆ. ಈ ಅಧ್ಯಯನವೂ ಹೆಚ್ಚಿನದನ್ನು ಅರ್ಥ ಮಾಡಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಫಿನ್ಲ್ಯಾಂಡ್ ಮತ್ತು ಸ್ವೀಡನ್ ಹಾಗೂ ಯುಕೆ ಸಂಶೋಧಕರು ತಿಳಿಸಿದ್ದಾರೆ. ಈ ಅಧ್ಯಯನಕ್ಕಾಗಿ ಬೈಪೋಲಾರ್ ಸಮಸ್ಯೆ ಹೊಂದಿರುವ 47,0187 ಜನರನ್ನು 2014 ರಿಂದ 2018ರ ವರೆಗೆ ಸರಾಸರಿ 38 ವರ್ಷದ ವಯೋಮಾನದ ಜನರನ್ನು ಟ್ರ್ಯಾಕ್ ಮಾಡಲಾಗಿದೆ. ಅವರ ದತ್ತಾಂಶವನ್ನು ರಾಷ್ಟ್ರಮಟ್ಟದ ವೈದ್ಯಕೀಯ ಮತ್ತು ಸಾಮಾಜಿಕ ವಿಮಾ ದಾಖಲಾತಿಗಳನ್ನು ಪಡೆಯಲಾಗಿದೆ. ಇದರಲ್ಲಿ ಅರ್ಧದಷ್ಟು ಮಹಿಳೆಯರು (ಶೇ 57ರಷ್ಟು) ಎಂಬುದು ಪತ್ತೆಯಾಗಿದೆ.
ನಿರ್ವಹಣೆ ಅವಧಿಯಲ್ಲೇ ಸಾಮಾನ್ಯ ಆರೋಗ್ಯದ ಜನಸಂಖ್ಯೆ ಸಾವಿನ ಸಂಖ್ಯೆಗೆ ಹೋಲಿಕೆ ಮಾಡಿದರೆ, ಈ ಸಮಸ್ಯೆ ಹೊಂದಿರುವ ಒಟ್ಟಾರೆ 3,300 (ಶೇ 7ರಷ್ಟು) ಮಂದಿ ಸಾವನ್ನಪ್ಪಿದ್ದಾರೆ. ಬಾಹ್ಯ ಕಾರಣಗಳಿಂದ ಸಾವಿನ ಅಪಾಯವು 6 ಪಟ್ಟು ಮತ್ತು ದೈಹಿಕ ಕಾಯಿಲೆಗಳಿಂದ 2 ಪಟ್ಟು ಹೆಚ್ಚಾಗುತ್ತದೆ. ಸಾವನ್ನಪ್ಪಿದವರ ಸರಾಸರಿ ವಯೋಮಿತಿ 50 ವರ್ಷ ಆಗಿದ್ದು, ಮೂರರಲ್ಲಿ ಎರಡು ಸಾವುಗಳಲ್ಲಿ ಪುರುಷರಾಗಿದ್ದಾರೆ. 3,300 ಸಾವಿನದಲ್ಲಿ ಶೇ 61ರಷ್ಟು ಅಂದರೆ 2027 ಮಂದಿ ದೈಹಿಕ ಕಾರಣದಿಂದ ಶೇ 39ರಷ್ಟು ಅಂದರೆ 1273 ಮಂದಿ ಇತರೆ ಕಾರಣದಿಂದ ಸಾವನ್ನಪ್ಪಿದ್ದಾರೆ.