ಕರ್ನಾಟಕ

karnataka

ETV Bharat / sukhibhava

ಕೋವಿಡ್​ ಉಪತಳಿಗಳಲ್ಲಿ ಓಮ್ರಿಕಾನ್ ಬಿಎ.5 ಹೆಚ್ಚು ಮಾರಣಾಂತಿಕ; ​ಅಧ್ಯಯನ

ಅಧ್ಯಯನವೊಂದರ ಪ್ರಕಾರ, ಕೋವಿಡ್​ 19 ಅಥವಾ ಜ್ವರಕ್ಕಿಂತಲೂ ಓಮ್ರಿಕಾನ್​ ಬಿಎ.5 ತಳಿಯ ಸೋಂಕಿನಿಂದ ಚಿಕಿತ್ಸೆಗೆ ದಾಖಲಾದವರಲ್ಲೇ ಸಾವಿನ ಪ್ರಮಾಣ ಹೆಚ್ಚಿದೆ.

By ETV Bharat Karnataka Team

Published : Jan 4, 2024, 2:01 PM IST

Etv Bharat
Etv Bharat

ನ್ಯೂಯಾರ್ಕ್​: ಕೋವಿಡ್​ 19 ಅಥವಾ ಜ್ವರದ ರೋಗಿಗಳಿಗಿಂತ ಓಮ್ರಿಕಾನ್​ ಬಿಎ.5 ತಳಿಯ ಸೋಂಕಿಗೆ ತುತ್ತಾಗಿರುವವರಲ್ಲಿ ಸಾವಿನ ಸಾಧ್ಯತೆ ಹೆಚ್ಚಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ (ಸಿಡಿಸಿ) ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದೆ.

ಈ ಅಧ್ಯಯನದ ಬಗ್ಗೆ ಓಪನ್​ ಫೋರಂ ಇನ್ಫೆಕ್ಷನ್​ ಡಿಸೀಸ್​​ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ 2021 ಮತ್ತು 2022 ರಲ್ಲಿ ಕೋವಿಡ್​ 19 ಮತ್ತು ಇನ್ಫುಯೆಂಜಾದಿಂದ ಐಸಿಯುನಲ್ಲಿ ದಾಖಲಾಗಿರುವ ರೋಗಿಗಳ ಪ್ರಮಾಣವನ್ನು ಪರಿಗಣಿಸಲಾಗಿದೆ.

ಕೋವಿಡ್​ 19 ಅವಧಿಯಲ್ಲಿ ಐಸಿಯುಗೆ ದಾಖಲಾದ ಪ್ರಮಾಣವೂ ಇನ್ಫುಯೆಂಜಾ ಅವಧಿಗೆ ಸಮವಾಗಿದೆ. ಓಮ್ರಿಕಾನ್​ ಬಿಎ. 5 ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳ ಸಾವಿನ ಸಂಖ್ಯೆ ಇನ್ಫುಯೆಂಜಾದಿಂದ ಆಸ್ಪತ್ರೆಗೆ ದಾಖಲಾದ ಸಾವಿನ ಪ್ರಮಾಣಕ್ಕಿಂತ ಹೆಚ್ಚಿದೆ ಎಂದು ಅಧ್ಯಯನ ಹೇಳಿದೆ.

ವಯಸ್ಕರಲ್ಲಿ 18 ರಿಂದ 49 ವರ್ಷದವರಲ್ಲಿ ಆಸ್ಪತ್ರೆಯಲ್ಲಿನ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಕೋವಿಡ್​​ 19 ಮತ್ತು ಇನ್ಫುಯೆಂಜಾದಿಂದ ಸಾವನ್ನಪ್ಪಿದ ವಯಸ್ಕರಲ್ಲಿ ಯಾವುದೇ ಗಮನಾರ್ಹ ವಿಭಿನ್ನತೆ ಇಲ್ಲ.

'ಕೋವಿಡ್​ 19 ವೈರಸ್​ ಮುಂದುವರೆದಿದೆ. ನಮ್ಮ ದತ್ತಾಂಶದ ಪ್ರಕಾರ ಡೆಲ್ಟಾ ಪ್ರಾಬಲ್ಯ ಹಾಗೂ ಓಮ್ರಿಕಾನ್​ ಬಿಎ.5 ಪ್ರಾಬಲ್ಯದ ನಡುವಿನ ಅವಧಿಯಲ್ಲಿ ಸೋಂಕಿತು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲಿ ಕುಸಿತ ಆಗಿದೆ ಎಂದು ಜಾರ್ಜಿಯಾದಲ್ಲಿನ ಸಿಡಿಸಿ ಇನ್ಫುಯೆಂಜಾ ವಿಭಾಗದ ನೋಹಾ ಕೊಜಿಮಾ ತಿಳಿಸಿದ್ದಾರೆ.

ಈ ಸಂಶೋಧನೆಯಲ್ಲಿ 5,777 ಕೋವಿಡ್​ ಬಾಧಿತರು ಮತ್ತು 2,363 ಜ್ವರ ಇರುವವರನ್ನೂ ಕೂಡ ಅಧ್ಯಯನ ನಡೆಸಲಾಗಿದೆ. 2021 ರ ಅಕ್ಟೋಬರ್​​ ಮತ್ತು ಡಿಸೆಂಬರ್​ನ ಸಮಯದ ಡೆಲ್ಟಾ ವೆರಿಯೆಂಟ್​​ ಪೂರ್ವ ಪ್ರಾಬಲ್ಯದ ಅವಧಿಯಲ್ಲಿ 1,632 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು.

2021-22 ರಲ್ಲಿ ಜ್ವರದಿಂದ 2,363 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದಾಗ್ಯೂ, ಈ ಅಧ್ಯಯನದ ಅವಧಿಯಲ್ಲಿ ಕೋವಿಡ್​ 19 ನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕುಸಿತಗೊಂಡಿತ್ತು. ಒಟ್ಟಾರೆ ಓಮ್ರಿಕಾನ್​ ನಂತರದ ಉಪತಳಿ (ಬಿಎ.2 ಮತ್ತು ಬಿಎ.5) ಅವಧಿಯಲ್ಲಿ ಸೋಂಕಿನ ತೀವ್ರತೆ ಸಾಮಾನ್ಯವಾಗಿದೆ​. ಈ ತೀವ್ರತೆಯ ಬಗ್ಗೆ ಮೇಲ್ವಿಚಾರಣೆ ಮುಂದುವರೆಸಲಾಗಿದ್ದು, ಬಿಎ.5 ಪ್ರಾಬಲ್ಯವೂ ಬಹು ಅಂಶಗಳಿಂದ ಕೂಡಿದೆ. (ಐಎಎನ್​ಎಸ್​)

ಇದನ್ನೂ ಓದಿ: ಆತಂಕ, ನಿದ್ರೆಯಲ್ಲಿ ತೊಡಕು: ಜೆಎನ್ 1 ಸೋಂಕಿನ ಹೊಸ ಲಕ್ಷಣಗಳು

ABOUT THE AUTHOR

...view details