ವೃದ್ಧಾಪ್ಯದಲ್ಲಿ ಹೆಚ್ಚಾಗಿ ಕಂಡು ಬರುವ ಪಾರ್ಕಿನ್ಸನ್ ಕಾಯಿಲೆ ಮೆದುಳಿನ ಅಸ್ವಸ್ಥತೆಯಾಗಿದೆ. ಈ ಮಾರಣಾಂತಿಕ ಕಾಯಿಲೆ ಬಗ್ಗೆ ಇಂದಿಗೂ ಅನೇಕ ಮಂದಿಗೆ ಮಾಹಿತಿ ಕೊರತೆ ಇದೆ. ಈ ಹಿನ್ನೆಲೆ ಈ ರೋಗದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಏಪ್ರಿಲ್ 11ರಂದು ಪಾರ್ಕಿಸನ್ ದಿನವಾಗಿ ಜಗತ್ತಿನಾದ್ಯಂತ ಆಚರಿಸಲಾಗುವುದು. ಈ ದಿನದಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಯತ್ನ ನಡೆಸಲಾಗುವುದು. ಈ ವರ್ಷ "#Take6forPD" ಎಂಬ ಘೋಷವಾಕ್ಯದ ಅಡಿಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ.
ಮೆದುಳಿನ ಸಮಸ್ಯೆ: ಮೆದುಳಿನ ನಿರ್ದಿಷ್ಟ ಕೋಶಗಳಿಗೆ ಹಾನಿಯಾಗುವುದರಿಂದ ಈ ಪಾರ್ಕಿನ್ಸನ್ ಕಾಯಿಲೆ ಉಂಟಾಗುತ್ತದೆ. ಇದರಿಂದಾಗಿ ಕೈ ಮತ್ತು ಪಾದಗಳಲ್ಲಿ ನಡುಕ ಉಂಟಾಗುತ್ತದೆ. ಅಲ್ಲದೇ, ಸ್ನಾಯು ಬಿಗಿಯುವಂತೆ ಆಗುತ್ತದೆ. ಇದರಿಂದ ದೇಹದ ಸಮತೋಲನ ಕಾಪಾಡುವುದು ಕಷ್ಟವಾಗುತ್ತದೆ. ಇದನ್ನು ನ್ಯೂರೋ ಡಿಜೆನರೇಟಿವ್ ಡಿಸಾರ್ಡರ್ ಎಂದೂ ಕರೆಯಲಾಗುವುದು. ಈ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಸೂಕ್ತ ಆಹಾರ ಮತ್ತು ಪೋಷಣೆಯಿಂದ ಇದನ್ನು ನಿರ್ವಹಣೆ ಮಾಡಬಹುದು. ಪ್ರತಿ ಆರು ನಿಮಿಷಕ್ಕೊಮ್ಮೆ ಈ ರೋಗ ಪತ್ತೆಯಾಗುತ್ತಿದ್ದು, ಇದರ ಬಗ್ಗೆ ಮುಂಜಾಗ್ರತೆ ವಹಿಸಬೇಕಿದೆ.
ಪಾರ್ಕಿನ್ಸನ್ ಕಾಯಿಲೆಯು ನ್ಯೂರೋ ಡಿಜೆನರೇಟಿವ್ ಡಿಸಾರ್ಡರ್ ಆಗಿದೆ. ಪಾರ್ಕಿನ್ಸನ್ ಡಾಟ್ ಆರ್ಗ್ ಪ್ರಕಾರ, ಮೆದುಳಿನ ನಿರ್ದಿಷ್ಟ ಭಾಗದಲ್ಲಿ ಸಬ್ಸ್ಟಾಂಟಿಯಾ ನಿಗ್ರಾದಲ್ಲಿ ಡೋಪಮೈನ್-ಉತ್ಪಾದಿಸುವ ನ್ಯೂರಾನ್ಗಳ ಮೇಲೆ ಪರಿಣಾಮ ಬೀರುತ್ತದೆ. ಈ ರೋಗದ ಲಕ್ಷಣಗಳು ನಿಧಾನವಾಗಿ ಬೆಳವಣಿಗೆ ಕಂಡು ಗೋಚರವಾಗುತ್ತವೆ. ಅಲ್ಲದೇ ಇದರ ಲಕ್ಷಣ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ.
ವಿಶ್ರಾಂತಿಯ ಸಮಯದಲ್ಲಿಯೂ ಕೈಕಾಲುಗಳು ನಡುಗುವುದು.
ಚಲನೆ ನಿಧಾನವಾಗುವುದು
ಕೈಕಾಲುಗಳಲ್ಲಿ ಬಿಗಿತ.