ಹೈದರಾಬಾದ್:ಹೊಸ ಅಧ್ಯಯನದ ಪ್ರಕಾರ ಕೋವಿಡ್ -19 ಸಾಂಕ್ರಾಮಿಕವು ಯುಎಸ್ನಲ್ಲಿ ಗರ್ಭಿಣಿಯರಿಗೆ ಮತ್ತು ಪ್ರಸವಾನಂತರದ ಮಹಿಳೆಯರಿಗೆ ಗರ್ಭಧಾರಣೆಯ ಒತ್ತಡವನ್ನು ಹೆಚ್ಚಿಸಿದೆ ಎಂದು ತಿಳಿದುಬಂದಿದೆ.
ಮಗು ರೋಗಕ್ಕೆ ತುತ್ತಾಗಬಹುದು ಎಂಬುವುದು ತಾಯಂದಿರ ಅತಿದೊಡ್ಡ ಚಿಂತೆಯಾಗಿದೆ. ಕೆಲವು ಮಹಿಳೆಯರು ಹೆರಿಗೆಗೆ ಆಸ್ಪತ್ರೆಗೆ ಹೋಗುವುದರಿಂದ ಅವರಿಗೆ ವೈರಸ್ ಬರಬಹುದು ಮತ್ತು ನಂತರ ತಮ್ಮ ಮಗುವಿಗೂ ಹರಡಬಹುದು ಅಥವಾ ಮಕ್ಕಳನ್ನು ಪ್ರತ್ಯೇಕವಾಗಿ ಇಡಬೇಕಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು.
"ಗರ್ಭಿಣಿ ಮಹಿಳೆಯರು ಕೋವಿಡ್ -19 ತುತ್ತಾಗುವ ಭಯ ಹೊಂದಿದ್ದಾರೆ" ಎಂದು ಯುಎಸ್ನ ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿ ಹೆಲ್ತ್ ಸೈನ್ಸಸ್ ಸ್ಪೋಕೇನ್ನ ಪ್ರಮುಖ ಲೇಖಕಿ ಸೆಲೆಸ್ಟಿನಾ ಬಾರ್ಬೊಸಾ-ಲೀಕರ್ ಹೇಳಿದ್ದಾರೆ.