ಕರ್ನಾಟಕ

karnataka

ETV Bharat / sukhibhava

ಭಾರತದಲ್ಲಿ ಬಳಕೆಯಾಗುವ ಶೇ 47ರಷ್ಟು ಆ್ಯಂಟಿಬಯೋಟಿಕ್ ಅನುಮೋದಿತವಲ್ಲ: ಲ್ಯಾನ್ಸೆಟ್ ಅಧ್ಯಯನ​ - etv bharat kannada

ಅನುಮೋದಿತವಾಗದ ಫಾರ್ಮುಲೇಶನ್​ಗಳ ಪೈಕಿ ಸೆಫಾಲೊಸ್ಪೊರಿನ್ಸ್​, ಮ್ಯಾಕ್ರೊಲೈಡ್ಸ್ ಮತ್ತು ಪೆನಿಸಿಲಿನ್​ಗಳು ಉನ್ನತ ಮೂರು ಸ್ಥಾನಗಳಲ್ಲಿವೆ. ಆ್ಯಂಟಿಬಯೋಟಿಕ್​ಗಳ ನಿಗಾ ಪಟ್ಟಿಯಲ್ಲಿ ಶೇ 72.7 ರಷ್ಟು ಅನುಮೋದಿತವಾಗದ ಮತ್ತು ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ ಶೇ 48.7 ರಷ್ಟು ಔಷಧಿಗಳಿವೆ.

ಭಾರತದಲ್ಲಿ ಬಳಕೆಯಾಗುವ ಶೇ 47ರಷ್ಟು ಆ್ಯಂಟಿಬಯಾಟಿಕ್ ಅನುಮೋದಿತವಲ್ಲ:
antibiotic formulations

By

Published : Sep 7, 2022, 4:05 PM IST

ನವದೆಹಲಿ:2019 ರಲ್ಲಿ ಭಾರತದ ಖಾಸಗಿ ವಲಯದಲ್ಲಿ ಬಳಸಲಾದ ಶೇಕಡಾ 47 ಕ್ಕಿಂತ ಹೆಚ್ಚು ಆಂಟಿಬಯೋಟಿಕ್ ಸೂತ್ರೀಕರಣಗಳನ್ನು ಕೇಂದ್ರ ಔಷಧ ನಿಯಂತ್ರಕ ಅನುಮೋದಿಸಿಲ್ಲ ಎಂದು ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್-ಆಗ್ನೇಯ ಏಷ್ಯಾದಲ್ಲಿ ಪ್ರಕಟವಾದ ಅಧ್ಯಯನವೊಂದು ತಿಳಿಸಿದೆ. 2019ರಲ್ಲಿ ಅಜಿಥ್ರೊಮೈಸಿನ್ 500mg ಟ್ಯಾಬ್ಲೆಟ್ ಭಾರತದಲ್ಲಿ ಹೆಚ್ಚು ಸೇವಿಸಿದ ಆ್ಯಂಟಿಬಯೋಟಿಕ್ ಔಷಧಿಯಾಗಿದ್ದು (ಶೇ. 7.6), ನಂತರದ ಸ್ಥಾನದಲ್ಲಿ ಸೆಫಿಕ್ಸೈಮ್ (cefixime) 200 mg ಟ್ಯಾಬ್ಲೆಟ್ (6.5 ಪ್ರತಿಶತ) ಇದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಬೋಸ್ಟನ್ ವಿಶ್ವವಿದ್ಯಾಲಯ, ದೆಹಲಿಯ ಅಮೆರಿಕ ಅಂಡ್ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಸಂಸ್ಥೆಗಳ ಸಂಶೋಧಕರು ಖಾಸಗಿ ವಲಯದ ಆಂಟಿಬಯೋಟಿಕ್ ಬಳಕೆಯನ್ನು ಪರಿಶೀಲಿಸಿದ್ದು, ಇದು ಭಾರತದಲ್ಲಿ ಒಟ್ಟು ಆ್ಯಂಟಿ ಬಯೋಟಿಕ್ ಬಳಕೆಯ ಶೇಕಡಾ 8590 ರಷ್ಟಾಗುತ್ತದೆ. ಅಂದಾಜು 5,000 ಔಷಧ ಕಂಪನಿಗಳ ಉತ್ಪನ್ನಗಳನ್ನು ಮಾರಾಟ ಮಾಡುವ 9,000 ಸ್ಟಾಕಿಸ್ಟ್‌ಗಳಿಂದ ಡೇಟಾವನ್ನು ಸಂಗ್ರಹಿಸಲಾಗಿದೆ. ಆದಾಗ್ಯೂ, ಈ ಡೇಟಾವು ಸಾರ್ವಜನಿಕ ಸೌಲಭ್ಯಗಳ ಮೂಲಕ ವಿತರಿಸಲಾದ ಔಷಧಿಗಳನ್ನು ಒಳಗೊಂಡಿಲ್ಲ.

ಆ್ಯಂಟಿ ಬಯೋಟಿಕ್ ಬಳಕೆಯ ಪ್ರಮಾಣದಲ್ಲಿ ಇಳಿಕೆ:ಹಿಂದಿನ ಅಂದಾಜುಗಳಿಗೆ ಹೋಲಿಸಿದರೆ ಈಗಿನ ಆ್ಯಂಟಿ ಬಯೋಟಿಕ್ ಬಳಕೆಯ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೂ ವಿಶಾಲ ಶ್ರೇಣಿಯ ಆ್ಯಂಟಿ ಬಯೋಟಿಕ್​ಗಳನ್ನು ಪರಿಗಣಿಸಿದಾಗ ಬಳಕೆ ದೊಡ್ಡ ಪ್ರಮಾಣದ್ದಾಗಿರುವುದು ಕಂಡು ಬರುತ್ತದೆ. ಒಟ್ಟಾರೆ ಪ್ರತಿದಿನದ ನಿರ್ದಿಷ್ಟ ಡೋಸ್ (defined daily dose -DDD ಅಂದರೆ ವಯಸ್ಕರಲ್ಲಿ ಪ್ರತಿದಿನ ಸರಾಸರಿ ನಿರ್ವಹಣಾ ಡೋಸ್ ನೋಡಿದಲ್ಲಿ, 2019 ರಲ್ಲಿ ಇದು 5071 ಡೋಸ್ (10.4 DDD/1,000/day) ಆಗಿತ್ತು.

ಅನುಮೋದಿತವಾಗದ ಫಾರ್ಮುಲೇಶನ್​ಗಳ ಪೈಕಿ ಸೆಫಾಲೊಸ್ಪೊರಿನ್ಸ್​, ಮ್ಯಾಕ್ರೊಲೈಡ್ಸ್ ಮತ್ತು ಪೆನಿಸಿಲಿನ್​ಗಳು ಉನ್ನತ ಮೂರು ಸ್ಥಾನಗಳಲ್ಲಿವೆ. ಆ್ಯಂಟಿಬಯಾಟಿಕ್​ಗಳ ನಿಗಾ ಪಟ್ಟಿಯಲ್ಲಿ ಶೇ 72.7 ರಷ್ಟು ಅನುಮೋದಿತವಾಗದ ಮತ್ತು ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ ಶೇ 48.7 ರಷ್ಟು ಔಷಧಿಗಳಿವೆ.

ಬೇಕಾಬಿಟ್ಟಿ ಉಪಯೋಗವೇ ಕಾರಣ:ನಿಗಾ ಪಟ್ಟಿಯು ನಿರ್ದಿಷ್ಟ ಲಕ್ಷಣಗಳಿಗೆ ಮಾತ್ರ ಉಪಯೋಗಿಸುವಂಥ ಹೆಚ್ಚಿನ ಸಾಧ್ಯತೆಗಳಿರುವ ಬ್ರಾಡ್ ಸ್ಪೆಕ್ಟ್ರಮ್ ಆ್ಯಂಟಿ ಬಯಾಟಿಕ್​ಗಳನ್ನು ಒಳಗೊಂಡಿದೆ. ಭಾರತದಲ್ಲಿ ಆ್ಯಂಟಿ ಬಯೋಟಿಕ್ ನಿರೋಧಕ ಗುಣ ಉತ್ಪತ್ತಿಯಾಗಲು ಅವುಗಳ ಬೇಕಾಬಿಟ್ಟಿ ಉಪಯೋಗವೇ ಕಾರಣವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಔಷಧ ಅಂಗಡಿಗಳಲ್ಲಿ ಆ್ಯಂಟಿಬಯೋಟಿಕ್​ಗಳನ್ನು ನೇರವಾಗಿ ಮಾರಾಟ ಮಾಡುವುದು, ಅವುಗಳ ತಯಾರಿಕೆ ಮತ್ತು ಮಾರಾಟ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಧ್ಯದ ನಿಯಂತ್ರಕ ಮಾರ್ಗಸೂಚಿಗಳ ಸಮಸ್ಯೆಯಿಂದ ಆ್ಯಂಟಿಬಯಾಟಿಕ್​ಗಳ ಲಭ್ಯತೆ, ಮಾರಾಟ ಮತ್ತು ಬಳಕೆಯನ್ನು ಕ್ಲಿಷ್ಟಕರವಾಗಿಸಿವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಈ ಸಂಶೋಧನೆಯಲ್ಲಿ ತಿಳಿದು ಬಂದ ವಿಷಯಗಳು ಕೆಲ ಮಿತಿಗಳಿಗೆ ಒಳಪಟ್ಟಿವೆ ಎಂದು ಸಂಶೋಧಕರು ಹೇಳುತ್ತಾರೆ. ಇದರಲ್ಲಿ ಬಳಸಲಾದ ಡೇಟಾಸೆಟ್ ಕೇವಲ ಖಾಸಗಿ ವಲಯಕ್ಕೆ ಸಂಬಂಧಿಸಿದ್ದಾಗಿದ್ದು, ಸರ್ಕಾರದ ಸಾರ್ವಜನಿಕ ವಲಯದ ಡೇಟಾವನ್ನು ಬಳಸಲಾಗಿಲ್ಲ. ಈ ಡೇಟಾವನ್ನು ಸ್ಟಾಕಿಸ್ಟ್​ಗಳ ಮಟ್ಟದಲ್ಲಿ ಸಂಗ್ರಹಿಸಲಾಗಿರುವುದರಿಂದ ಸಮುದಾಯ ಮತ್ತು ಆಸ್ಪತ್ರೆಗಳ ಮಟ್ಟದಲ್ಲಿ ಬಳಕೆಯಾದ ಔಷಧವನ್ನು ಪ್ರತ್ಯೇಕಿಸುವುದಿಲ್ಲ.

ಇದನ್ನು ಓದಿ:ಮೂಗಿನ ಮೂಲಕ ಕೊರೊನಾ ಲಸಿಕೆ.. ಭಾರತ್​ ಬಯೋಟೆಕ್​​ ವ್ಯಾಕ್ಸಿನ್​ಗೆ ಡಿಸಿಜಿಐ ಒಪ್ಪಿಗೆ

ABOUT THE AUTHOR

...view details