ನವದೆಹಲಿ: ಕೋವಿಡ್ -19 ಲಸಿಕೆಗಳ ಸುತ್ತಲು ಹಬ್ಬುವ ತಪ್ಪು ಮಾಹಿತಿ, ಸುಳ್ಳು ಸುದ್ದಿಯಂತಹ ಸಮಸ್ಯೆ ನಿಭಾಯಿಸಲು ಹಾಗೂ ಜನರಲ್ಲಿನ ಅಪನಂಬಿಕೆ ತೊಡೆದು ಹಾಕಲು ಸಾಮಾಜಿಕ ಮಾಧ್ಯಮಗಳ ಮುಖೇನ ಅವುಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು 100ಕ್ಕೂ ಅಧಿಕ ವಿಜ್ಞಾನಿಗಳು ಕೈಜೋಡಿಸಿದ್ದಾರೆ.
ಕೋವಿಡ್ -19 ಲಸಿಕೆಗಳ ಸುತ್ತಲಿನ ತಪ್ಪು ಮಾಹಿತಿ ಎದುರಿಸುವ ಗುರಿಯನ್ನು ಟೀಮ್ ಹ್ಯಾಲೊವನ ವಹಿಸಿಕೊಳ್ಳಲಿದೆ. ವಿಶ್ವಸಂಸ್ಥೆಯು ಲಂಡನ್ ವಿಶ್ವವಿದ್ಯಾಲಯದ ಲಸಿಕೆ ಬಗ್ಗೆ ವಿಶ್ವಾಸ ಹೊಂದಿದ್ದು, ಈ ಯೋಜನೆಗೆ ಸಹಕರಿಸಿದೆ.
ಇಂಪೀರಿಯಲ್ ಕಾಲೇಜ್ ಲಂಡನ್, ಹಾರ್ವರ್ಡ್ ಮೆಡಿಕಲ್ ಸ್ಕೂಲ್, ಸಾವೊ ಪಾಲೊ ವಿಶ್ವವಿದ್ಯಾಲಯ, ಬಾರ್ಸಿಲೋನಾ ವಿಶ್ವವಿದ್ಯಾಲಯ ಮತ್ತು ಇತರ ಹಲವು ಉನ್ನತ ಸಂಸ್ಥೆಗಳು ಕೊರೊನಾ ವೈರಸ್ ಲಸಿಕೆ ಅಭಿವೃದ್ಧಿ ಓಟದಲ್ಲಿ ಭಾಗಿಯಾಗಿರುವ ವಿಜ್ಞಾನಿಗಳು ಈ ಅಭಿಯಾನ ಬೆಂಬಲಿಸಲಿದ್ದಾರೆ.
ಭಾರತದಲ್ಲಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಕೆಲವು ಆಸ್ಪತ್ರೆಗಳ ಪ್ರಸಿದ್ಧ ಸಂಸ್ಥೆಗಳ 22ಕ್ಕೂ ಹೆಚ್ಚು ವಿಜ್ಞಾನಿಗಳ ತಂಡ ಹ್ಯಾಲೊ ಸೇರ್ಪಡೆ ಆಗಲಿದ್ದಾರೆ. ಪಿಜಿಐಎಂಆರ್, ನಿಜಾಮ್ಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಐಐಟಿ ಇಂದೋರ್, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್, ಎಸ್ಆರ್ಎಂ ರಿಸರ್ಚ್ ಇನ್ಸ್ಟಿಟ್ಯೂಟ್ ಹಾಗೂ ಡೀಪ್ ಚಿಲ್ಡ್ರನ್ಸ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್ ಇದರಲ್ಲಿವೆ.
ಭಾರತ ಹೊರತಾಗಿ ಬ್ರಿಟನ್, ಅಮೆರಿಕ, ದಕ್ಷಿಣ ಆಫ್ರಿಕಾ, ಕತಾರ್, ಯುಎಇ, ಫ್ರಾನ್ಸ್, ಸ್ಪೇನ್, ಪೆರು, ಕೆನಡಾ, ಬ್ರೆಜಿಲ್ ಸೇರಿದಂತೆ ಇತರೆ ವಿಜ್ಞಾನಿಗಳು ಸಹ ಕೈಜೋಡಿಸಲಿದ್ದಾರೆ.