ವಾಷಿಂಗ್ಟನ್: ಸರಿಸುಮಾರು 40 ಕೋಟಿ ಜನಸಂಖ್ಯೆ ಹೊಂದಿರುವ ಅಮೆರಿಕದ ಪ್ರತಿ ಮೂವರಲ್ಲಿ ಒಬ್ಬರು ಅನಾರೋಗ್ಯಕರ ಗುಣಮಟ್ಟದ ಪರಿಸರದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಸ್ಟೇಟ್ ಆಫ್ ದಿ ಏರ್ 2023ರ ವರದಿಯನುಸಾರ, ವಾಯು ಮಾಲಿನ್ಯ ಪ್ರದೇಶವನ್ನು ಶುಚಿಗೊಳಿಸುವ ದಶಕಗಳ ಪ್ರಯತ್ನಗಳ ಬಳಿಕವೂ 119.6 ಮಿಲಿಯನ್ ಅಮೆರಿಕನ್ನರು ಇಂದಿಗೂ ಅನಾರೋಗ್ಯಕರ ಮಟ್ಟದ ಓಜೋನ್ ಅಥವಾ ಮಾಲಿನ್ಯ ಪ್ರದೇಶದಲ್ಲಿಯೇ ಬದುಕುತ್ತಿದ್ದಾರೆ ಎಂದು ಕ್ಸಿನುಹಾ ನ್ಯೂಸ್ ಏಜೆನ್ಸಿ ಹೇಳುತ್ತದೆ. ಇದರ ಜೊತೆಗೆ ಪ್ರಗತಿಗೆ ಕಾಡ್ಗಿಚ್ಚಿನಂತಹ ಸಮಸ್ಯೆಯೂ ತೊಡಕುಂಟು ಮಾಡಿದೆ.
ವಾಯು ಗುಣಮಟ್ಟದ ಅಧ್ಯಯನ: ವರದಿಯಲ್ಲಿ ಸಂಶೋಧಕರು ಅನಾರೋಗ್ಯಕರ ವಾಯುಮಟ್ಟದಲ್ಲಿ ವಾಸಿಸುವ ಸಂಕಷ್ಟವನ್ನು ಸಮಾನವಾಗಿ ಹಂಚಿಕೊಂಡಿಲ್ಲ. ಅಮೆರಿಕದ ಹಳ್ಳಿಗಳಲ್ಲಿ ವಾಸಿಸುವ ಜನರಿಗಿಂತ 3.7 ಪಟ್ಟು ಜನರು ಇತರೆ ಬಣ್ಣ ಹೊಂದಿರುವವರು. ಅಮೆರಿಕದ ಜನಸಂಖ್ಯೆಯಲ್ಲಿ ಶೇ. 41 ರಷ್ಟು ಮಂದಿ ಇತರೆ ಬಣ್ಣದ ಜನರಿದ್ದಾರೆ. ವಾರ್ಷಿಕ ವರದಿಯು ಮೂರು ವಾಯು ಗುಣಮಟ್ಟದ ಕ್ರಮಗಳನ್ನು ಅಧ್ಯಯನ ನಡೆಸಿದೆ. ಕಣ ಮಾಲಿನ್ಯದ ದೈನಂದಿನ ಸರಾಸರಿ, ದೈನಂದಿನ ಸ್ಪೈಕ್‌ಗಳು ಮತ್ತು ಓಝೋನ್ ಮಟ್ಟಗಳು. ಇವುಗಳನ್ನು ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ (ಇಪಿಎ) ಟ್ರ್ಯಾಕ್ ಮಾಡಿದೆ.
ಕೆಟ್ಟ ಮಾಲಿನ್ಯ ಗುಣಮಟ್ಟ ಹೊಂದಿರುವ ಹಳ್ಳಿಗಳಲ್ಲಿ ಶೇ 28ರಷ್ಟು ಮಂದಿ ಬಿಳಿಯರಿದ್ದರೆ, ಶೇ 72 ಮಿಲಿಯನ್ ನಿವಾಸಿಗಳು ಬೇರೆ ಬಣ್ಣದ ಜನರಿದ್ದಾರೆ. ಕ್ಯಾಲಿಫೋರ್ನಿಯಾ ಸೇರಿದಂತೆ ಅಮೆರಿಕದ 10 ಪ್ರಮುಖ ನಗರಗಳು ಓಝೋನ್ ಮತ್ತು ವಾಯು ಮಾಲಿನ್ಯಕ್ಕೆ ತುತ್ತಾಗಿದೆ. ಲಾಸ್ ಏಂಜಲಿಸ್ ನಗರ ಕೆಟ್ಟ ಓಝೋನ್ ಮಾಲಿನ್ಯಕ್ಕೊಳಗಾಗಿದೆ. ಈ ನಗರವು 24 ವರ್ಷದ ಟ್ರಾಕ್ ರಿಪೋರ್ಟ್ ಹೊಂದಿದೆ. ವಾಯು ಮಾಲಿನ್ಯದ ಕಾರಣದಿಂದ ಕ್ಯಾಲಿಫೋರ್ನಿಯಾದ ಬೇಕರ್ಸ್ ಫೀಲ್ಡ್ ಅನ್ನು ಪ್ರೆಸ್ನೊಗೆ ಸ್ಥಳಾಂತರಿಸಲಾಗಿತ್ತು. ಬೇಕರ್ಸ್ಫೀಲ್ಡ್ ಈ ಬಾರಿ ಕೂಡ ಅತ್ಯಂತ ಕಳಪೆ ವಾಯುಗುಣ ಮಟ್ಟದ ನಗರವಾಗಿ ಹೊರಹೊಮ್ಮಿದೆ. ಇದಾದ ಬಳಿಕ ವಿಸಲೈ ಸ್ಥಾನ ಪಡೆದಿದೆ.
ಓಝೋನ್ ಮಾಲಿನ್ಯದ ಪರಿಣಾಮ: ಓಝೋನ್ ಮಾಲಿನ್ಯ ಅಸ್ತಮಾವನ್ನು ಉಲ್ಬಣಗೊಳಿಸಬಹುದು. ಆದರೆ ಇದು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಅಕಾಲಿಕ ಜನನದ ಅಪಾಯವನ್ನು ಹೆಚ್ಚಿಸುತ್ತದೆ. ಅಮೆರಿಕ ಜನರ ಆರೋಗ್ಯವನ್ನು ಸುಧಾರಿಸುವ ಮತ್ತು ಶ್ವಾಸಕೋಶ ಕಾಯಿಲೆಯನ್ನು ತಡೆಗಟ್ಟುವ ಉದ್ದೇಶದಿಂದ ಅಮೆರಿಕನ್ ಅಲಂಗ್ ಅಸೋಸಿಯೇಷನ್ ಈ ಸಮೀಕ್ಷೆ ನಡೆಸಿದೆ. ಅಮೆರಿಕದಲ್ಲಿನ ಶಿಕ್ಷಣ ಮತ್ತು ಸಂಶೋಧನೆ ಮೂಲಕ ರಾಜ್ಯದ ವಾಯುಗುಣವನ್ನು ಅಧಿಕೃತ ಗಾಳಿಯ ಗುಣಮಟ್ಟದ ಮಾನಿಟರ್ ದತ್ತಾಂಶಗಳಿಂದ ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ: ಅಧಿಕ ಅಂಟಾಸಿಡ್ ಮಾತ್ರೆ ಸೇವನೆಯಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ