ತಂಬಾಕು ಸೇವನೆ ಇಂದಿಗೂ ವಿಶೇಷ ಕಾಳಜಿಯ ವಿಷಯವೇ ಆಗಿದೆ. ಆತಂಕಕಾರಿ ಸಂಗತಿ ಎಂದರೆ ಈ ದುಶ್ಚಟಕ್ಕೆ ಅಪ್ರಾಪ್ತರೇ ಹೆಚ್ಚು ಒಳಗಾಗುತ್ತಿದ್ದಾರೆ. ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ (ಜಿವೈಟಿಎಸ್) ಅನುಸಾರ ಭಾರತದಲ್ಲಿ 13- 15 ರ ವರ್ಷದೊಳಗಿನ ಐವರು ಅಪ್ತಾಪ್ತರಲ್ಲಿ ಒಬ್ಬರು ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ.
ಸಮೀಕ್ಷೆಯ ಅನುಸಾರ ಶೇ 38 ರಷ್ಟು ಅಪ್ರಾಪ್ತರು ಸಿಗರೇಟ್ ಚಟಕ್ಕೆ ಬಲಿಯಾದರೆ, ಶೇ 47ರಷ್ಟು ಮಂದಿ ಬೀಡಿ ಮತ್ತು ಶೇ 52 ರಷ್ಟು ಜನ ಹೊಗೆರಹಿತ ತಂಬಾಕು ಸೇದಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಇವರೆಲ್ಲರೂ 10 ವರ್ಷ ದಾಟುವುದಕ್ಕೆ ಮುನ್ನವೇ ದುಶ್ಚಟಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಮಹತ್ವದ ಅಂಶ.
ಭಾರತದ ವಾಲೆಂಟರಿ ಹೆಲ್ತ್ ಅಸೋಸಿಯೇಷನ್ ಮುಖ್ಯ ಕಾರ್ಯದರ್ಶಿ ಭಾವನ ಬಿ.ಮುಖ್ಯೋಪಧ್ಯಾಯ ಹೇಳುವಂತೆ, 2016- 17ರ ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ ತಿಳಿಸುವಂತೆ, ಭಾರತದಲ್ಲಿ 27 ಕೋಟಿ ಮಂದಿ ತಂಬಾಕು ಸೇವನೆ ಮಾಡುತ್ತಿದ್ದಾರೆ. ಇದರಲ್ಲಿ 12 ಲಕ್ಷ ಮಂದಿ ಪ್ರತಿ ವರ್ಷ ತಂಬಾಕು ಸಂಬಂಧಿತ ಸಮಸ್ಯೆಗೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಭಾರತದಲ್ಲಿ ತಂಬಾಕು ಸೇವನೆಗೆ ಅಧಿಕೃತ ವಯಸ್ಸು 18.7 ವರ್ಷ. ಮಹಿಳೆಯರಿಗಿಂತ ಪುರುಷರು ಅತಿ ಸಣ್ಣ ವಯಸ್ಸಿನಲ್ಲಿ ತಂಬಾಕು ಬಳಕೆಗೆ ಮುಂದಾಗುತ್ತಿದ್ದಾರೆ.
ತಂಬಾಕು ದೇಹದಲ್ಲಿ 25 ರೀತಿಯ ರೋಗಕ್ಕೆ ಕಾರಣವಾಗುತ್ತದೆ. 40 ರೀತಿಯ ಕ್ಯಾನ್ಸರ್ಗೆ ಗುರಿಯಾಗಿಸುತ್ತದೆ. ಇದರಲ್ಲಿ ಪ್ರಮುಖವಾಗಿರುವುದು ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಹೊಟ್ಟೆ ಕ್ಯಾನ್ಸರ್ ಹಾಗೂ ಮಿದುಳಿನ ಕ್ಯಾನ್ಸರ್.
ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ಉಸಿರಾಟ ಚಿಕಿತ್ಸೆ ವಿಭಾಗದ ಮುಖ್ಯಸ್ಥೆ ಪ್ರೊ.ಸೂರ್ಯ ಕಾಂತ್ ಹೇಳುವಂತೆ, ತಂಬಾಕಿನ ಹೊಗೆ ಅನೇಕ ಹಾನಿಕಾರಕ ಗ್ಯಾಸ್ ಮತ್ತು ರಾಸಾಯನಿಕವನ್ನು ಹೊರ ಬಿಡುತ್ತದೆ. ಇದರಲ್ಲಿ ನಿಕೋಟಿನ್ ಮತ್ತು ಟಾರ್ ಮುಖ್ಯ. ಒಟ್ಟಾರೆಯಾಗಿ, 70 ರಾಸಾಯನಿಕ ಪದಾರ್ಥಗಳು ಕ್ಯಾನ್ಸರ್ ಕಾರಕ ಎಂದು ಕಂಡುಬಂದಿದೆ ಆದರೆ ತಂಬಾಕು ಸೇವಿಸುವವರು ಈ ಸತ್ಯಗಳನ್ನು ನಿರ್ಲಕ್ಷಿಸುತ್ತಾರೆ.
ಸಿಗರೇಟ್ಗಿಂತ ಬೀಡಿ ಸೇವನೆ ಮತ್ತಷ್ಟು ಹಾನಿಕಾರಕ. ಇದರಲ್ಲಿ ಕಡಿಮೆ ಪ್ರಮಾಣದ ನಿಕೋಟಿನ್ ಇರುವುದರಿಂದ ಮತ್ತೆ ಮತ್ತೆ ಇದನ್ನು ಸೇವಿಸುವಂತೆ ಪ್ರೇರಣೆ ನೀಡುತ್ತದೆ. ಚಟಕ್ಕೆ ಗುರಿಯಾಗುವಂತೆ ಮಾಡುತ್ತಿದೆ. ನಮ್ಮ ದೇಶದಲ್ಲಿ ಮಹಿಳೆಯರಿಗೆ ಹೋಲಿಕೆ ಮಾಡಿದರೆ, ಪುರುಷರು ಹೆಚ್ಚು ಬಲಿಯಾಗಿದ್ದಾರೆ ಎಂದು ಅಸೋಸಿಯೇಷನ್ ಆಫ್ ಇಂಟರ್ನ್ಯಾಷನಲ್ ಡಾಕ್ಟರ್ನ ಪ್ರಧಾನ ಕಾರ್ಯದರ್ಶಿ ಡಾ.ಅಭಿಷೇಕ್ ಶುಕ್ಲಾ ತಿಳಿಸಿದ್ದಾರೆ.
ಮಹಿಳೆಯರ ಫಲವತ್ತತೆ ಕಡಿಮೆಯಾಗಲು ಧೂಮಪಾನ ಕೂಡ ಒಂದು ಕಾರಣ. ಅವಧಿ ಪೂರ್ವ ಮಗುವಿನ ಜನನಕ್ಕೆ ತಂಬಾಕು ಸೇವನೆ ಕೂಡ ಒಂದಾಗಿದೆ ಎಂದಿದ್ದಾರೆ ಎಸ್ಸಿ ತ್ರಿವೇದಿ ಮೆಮೋರಿಯಲ್ ಟ್ರಸ್ಟ್ ಹಾಸ್ಪಿಟಲ್ನ ಹಿರಿಯ ಸ್ತ್ರಿರೋಗ ತಜ್ಞೆ ಡಾ.ಅಮಿತಾ ಶುಕ್ಲಾ.
ಯಾರಾದರೂ ಬೀಡಿ ಅಥವಾ ಸಿಗರೇಟ್ ಸೇವಿಸಿದಾಗ ಅದರಲ್ಲಿ ಶೇ 30ರಷ್ಟು ಹೊಗೆ ಶ್ವಾಸಕೋಶ ಸೇರುತ್ತದೆ. ಈ ವೇಳೆ ಶೇ 70-ರಷ್ಟು ಸುತ್ತಮುತ್ತಲಿನ ಪರಿಸರದಲ್ಲಿ ಉಳಿಯುತ್ತದೆ, ಇದು ನಿಷ್ಕ್ರಿಯ ಧೂಮಪಾನಿಗಳು ಅಥವಾ ಧೂಮಪಾನ ಮಾಡುವವರ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ:ವಿಶ್ವ ತಂಬಾಕು ರಹಿತ ದಿನ 2023: ತಂಬಾಕು ಮುಕ್ತ ಜಗತ್ತು ನಿರ್ಮಾಣಕ್ಕೆ ಕೈ ಜೋಡಿಸಿ..