ಅನೇಕ ಮಂದಿ ಟಿವಿ ನೋಡುತ್ತಾ ಅಥವಾ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಾ ರಾತ್ರಿ ತಡವಾಗಿ ಮಲಗುತ್ತಾರೆ. ಒಂದು ಗಂಟೆ ತಡವಾಗಿ ಮಲಗಿದರೆ ಏನಾಗುತ್ತದೆ. ಇದರಿಂದ ಯಾವುದೇ ತೊಂದರೆ ಇಲ್ಲ ಎಂಬ ಭಾವನೆ ಹೊಂದಿರುತ್ತಾರೆ. ಆದರೆ, ಇದೇ ರೀತಿ ನಿರಂತರವಾಗಿ ತಡವಾಗಿ ಮಲಗುವ ಅಭ್ಯಾಸವೂ ನಿದ್ರೆಯ ಕೊರತೆಗೆ ಕಾರಣವಾಗುತ್ತದೆ. ಇದು ಹೃದಯ ಸಮಸ್ಯೆಗೆ ನಾಂದಿ ಆಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಮಧ್ಯಮ ವಯಸ್ಸಿನ ಮಹಿಳೆಯರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಅವರಲ್ಲಿ ನಿದ್ರೆಯ ಕೊರತೆ ಕಾಡುತ್ತಿದ್ದು, ತಡವಾಗಿ ಮಲಗುತ್ತಿದ್ದಾರೆ. ಈ ಹಿನ್ನಲೆ 7 ರಿಂದ 9 ಗಂಟೆಯ ನಿದ್ದೆ ಈ ವಯೋಮಾನದಲ್ಲಿ ಅಗತ್ಯವಾಗಿದೆ ಎಂದು ಕೊಲಂಬಿಯಾ ಯುನಿವರ್ಸಿಟಿ ಐರ್ವಿಂಗ್ ಮೆಡಿಕಲ್ ಸೆಂಟರ್ನ ಸಂಶೋಧಕರು ತಿಳಿಸುತ್ತಾರೆ. ಈ ಕುರಿತು ಅಧ್ಯಯನದಲ್ಲಿ ನಿದ್ದೆಯ ಕೊರತೆ ಹೊಂದಿರುವ ಜನರಲ್ಲಿ ಉರಿಯೂತದ ಜೊತೆಗೆ ಆಕ್ಸಿಡೆಟಿವ್ ಒತ್ತಡ ಹೆಚ್ಚಿದ್ದು, ರಕ್ತನಾಳದ ಒಳಗಿನ ಪದರದಲ್ಲಿನ ಕೋಶಗಳಿಗೆ ಹಾನಿಯಾಗಿರುವುದು ಕಂಡು ಬಂದಿದೆ. ಇನ್ನು ಈ ರೀತಿಯ ಉರಿಯೂತದ ಸಮಸ್ಯೆಗಳು ಸಮಯಕ್ಕೆ ಸರಿಯಾಗಿ ಮಲಗುವವರಲ್ಲಿ ಕಂಡು ಬಂದಿಲ್ಲ.
ಹೃದಯ ಮತ್ತು ನಿದ್ರೆಯೊಂದಿಗೆ ಇದೆ ನೇರ ಸಂಬಂಧ: ಇದೇ ಉದ್ದೇಶಕ್ಕಾಗಿ ಸರಿಯಾದ ಸಮಯಕ್ಕೆ ಮಲಗುವುದು. ನಿಯಮಿತವಾಗಿ 7 ರಿಂದ 9 ಗಂಟೆಗಳ ನಿದ್ರೆ ಅವಧಿ ಮಲಗುವುದು ಅವಶ್ಯ ಆಗಿದೆ ಎಂದಿದ್ದಾರೆ. ಈ ನಿದ್ದೆಯ ಅವಧಿಯನ್ನು ಅವರು ಸ್ಲಿಪ್ ಟ್ರ್ಯಾಕರ್ ಮೂಲಕ ಪತ್ತೆ ಮಾಡಿದ್ದಾರೆ. ಈ ವೇಳೆ, ಅವರ ಎಂಡೋಥೀಲಿಯಲ್ ಜೀವಕೋಶಗಳನ್ನು ಪರೀಕ್ಷಿಸಲಾಗಿದೆ. ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದವರಲ್ಲಿ ಶೇ 78ರಷ್ಟು ಆಕ್ಸಿಡೇಟಿವ್ ಒತ್ತಡಗಳು ಕಂಡು ಬಂದಿದೆ. ನಿದ್ದೆ ಕೊರತೆ ಹೊಂದಿರುವವರು ಮೇಲ್ನೋಟಕ್ಕೆ ಆರೋಗ್ಯವಾಗಿ ಕಂಡರೂ ದೀರ್ಘಕಾಲದ ಹೃದಯ ಸಮಸ್ಯೆ ಭವಿಷ್ಯದಲ್ಲಿ ಕಾಡಬಹುದು. ಅದಕ್ಕಿಂತ ಹೆಚ್ಚಾಗಿ ಸಂಶೋಧಕರು ನಿದ್ರೆ ಮತ್ತು ಹೃದಯದ ನಡುವಿನ ಅಪಾಯವನ್ನು ಸಂಶೋಧನೆ ವೇಳೆ ಗಮನಿಸಿದ್ದಾರೆ.
ಸಣ್ಣ ಕಾಲದ ನಿದ್ರಾಹೀನತೆ ನಂತರದ ಜೀವನದಲ್ಲಿ ಹೃದಯ ರೋಗದ ಸಮಸ್ಯೆ ಅಭಿವೃದ್ಧಿಯ ಅಪಾಯವನ್ನು ಹೆಚ್ಚಿಸುತ್ತದೆ. ಕಡಿಮೆ ನಿದ್ದೆ ಹೊಂದಿರುವವರಲ್ಲಿ ಹೃದಯ ಅಪಾಯ ಹೆಚ್ಚಿದೆ. ಈ ಹಿನ್ನೆಲೆ ಹೃದಯದ ಆರೋಗ್ಯ ಜೋಪಾನ ಮಾಡುವ ಉದ್ದೇಶದಿಂದ ಒಂದು ಗಂಟೆಯೂ ತಡವಾಗಿ ಮಲಗದೇ, ನಿಯಮಿತ ನಿದ್ದೆಯ ಅವಧಿ ಹೊಂದುವುದು ಅವಶ್ಯವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೃದಯಕ್ಕೆ ಹಾನಿ; ಮಕ್ಕಳ ಮೊಬೈಲ್, ಟಿವಿ ವೀಕ್ಷಣೆಗೆ ಬೇಕಿದೆ ಕಡಿವಾಣ.. ಇಲ್ಲದಿದ್ದರೆ ಆಗುವ ಅವಾಂತರ ಹೇಳೋಕಾಗಲ್ಲ!