ನವದೆಹಲಿ:ಭಾರತದಲ್ಲಿ ಅಪರೂಪದ ರೋಗಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಾಧ್ಯವಾಗದಿರುವುದಕ್ಕೆ ಅರಿವಿನ ಕೊರತೆ ಮತ್ತು ಸರಿಯಾಗಿ ರೋಗ ಪತ್ತೆ ಮಾಡದಿರುವುದೇ ಕಾರಣ ಎಂದು ವರದಿಯೊಂದು ತಿಳಿಸಿದೆ.
ನವೆಂಬರ್ 2023ರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವೂ ಅಪರೂಪದ ರೋಗಗಳಿಗೆ ಚಿಕಿತ್ಸೆಗೆಂದು ನಾಲ್ಕು ಜೆನೆರಿಕ್ ಔಷಧಗಳ ಮಾರಾಟಕ್ಕೆ ಅನುಮೋದನೆ ನೀಡಿದೆ. ಇದು ಭಾರತದಲ್ಲಿ ಅಪರೂಪದ ಕಾಯಿಲೆಗಳ ವಿರುದ್ಧ ಹೋರಾಡಲು ಒಂದು ಮೈಲಿಗಲ್ಲಾಗಿದೆ. ಇದರ ಜೊತೆಗೆ ಇತರೆ ಉತ್ಪನ್ನಗಳಿಗೆ ಅನುಮೋದನೆ ಸಿಗಬೇಕಿದೆ.
ಆದರೆ, ಅರಿವಿನ ಕೊರತೆ ಮತ್ತು ರೋಗದ ಪತ್ತೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಗ್ಲೋಬಲ್ಡಾಟಾ ವರದಿ ಮಾಡಿದೆ. ಅನುಮೋದಿತ ನಾಲ್ಕು ಔಷಧಗಳನ್ನು ವಿಲ್ಸನ್ಸ್ ರೋಗ, ಗುಚರ್ಸ್ ರೋಗ, ತೈರೊಸಿನೆಮಿಯಾ ಟೈಪ್ 1 ಹಾಗೂ ಡ್ರವೆಟ್-ಲೆನ್ನೊಕ್ ಗಸ್ಟೌಟ್ ಸಿಂಡ್ರೋಮ್ಗೆ ಬಳಕೆ ಮಾಡಲಾಗುತ್ತಿದೆ.
ಈ ಹಿಂದೆ ಈ ಚಿಕಿತ್ಸೆಯ ಔಷಧಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಗುಚರ್ಸ್ ಎಂಬ ಒಂದೇ ಕಾಯಿಲೆಯ ಚಿಕಿತ್ಸೆಗೆ ವಾರ್ಷಿಕವಾಗಿ 18-36 ಮಿಲಿಯನ್ ಖರ್ಚಾಗುತ್ತಿತ್ತು. ಇದೀಗ ಅನುಮತಿಯೊಂದಿಗೆ ಅಪರೂಪದ ಕಾಯಿಲೆ ಹೊಂದಿರುವ ರೋಗಿ ಈ ಚಿಕಿತ್ಸೆಯನ್ನು 0.3-0.6 ಮಿಲಿಯನ್ ಹಣದಲ್ಲಿ ಅಂದ,ರೆ ಆಮದು ಔಷಧಗಳಿಗಿಂತ 100 ಪಟ್ಟು ಕಡಿಮೆ ದರದಲ್ಲಿ ಪಡೆಯಬಹುದಾಗಿದೆ.
ಮುಂದಿನ ಕೆಲವು ತಿಂಗಳಲ್ಲಿ ಆರೋಗ್ಯ ಸಚಿವಾಲಯ ಹೈಪರ್ಮಮೋನೆಮಿಯಾ ಮತ್ತು ಫೀನಿಲ್ಕೆಟೋನೂರಿಯಾ ಸೇರಿದಂತೆ ಮತ್ತಷ್ಟು ಅಪರೂಪದ ರೋಗಕ್ಕೆ ಔಷಧಗಳನ್ನು ಬಿಡುಗಡೆ ಮಾಡಲಿದೆ.
ಅಪರೂಪದ ಕಾಯಿಲೆಗಳು: ಭಾರತದಂತಹ ಅಪಾರ ಜನಸಂಖ್ಯೆಯ ಹೊಂದಿರುವ ದೇಶದಲ್ಲಿ ಅಪರೂಪದ ಕಾಯಿಲೆಗಳನ್ನು ಆಗ್ಗಾಗ್ಗೆ ಕಾಣಬಹುದಾಗಿದೆ. ಅಲ್ಲದೇ ಈ ಕುರಿತು ಪತ್ತೆ ಮಾಡಲು ಮತ್ತು ಚಿಕಿತ್ಸೆಗೆ ತೊಂದರೆ ಎದುರಾಗುತ್ತದೆ ಎಂದು ಗ್ಲೋಬಲ್ಡಾಟಾದ ಫಾರ್ಮ ಅನಾಲಿಸ್ಟ್ ಜಿತೇಂದ್ರ ಕಂಚರ್ಲಾ ತಿಳಿಸಿದ್ದಾರೆ.
2021ರಲ್ಲಿ ಭಾರತ ಸರ್ಕಾರವೂ ಎನ್ಪಿಆರ್ಡಿ-2021 ಮೂಲಕ ಲಪ್ಸಸ್ನಂತಹ ಅಪರೂಪದ ಕಾಯಿಲೆಯ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ. ಇದರ ಭಾಗವಾಗಿ 8 ಪತ್ತೆ ಕೇಂದ್ರ ಮತ್ತು ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ರೋಗಿಗಳ ಚಿಕಿತ್ಸೆಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ. ಈ ಎಲ್ಲ ಕಾರ್ಯಾಚರಣೆ ನಡುವೆಯೂ ಭಾರತದ ಆರೋಗ್ಯ ವ್ಯವಸ್ಥೆ ಮೇಲೆ ಈ ಅಪರೂಪದ ಕಾಯಿಲೆಗಳು ಒತ್ತಡ ಬೀರುತ್ತಿವೆ ಎಂದಿದ್ದಾರೆ ಜಿತೇಂದ್ರ ಕಂಚರ್ಲಾ.
ಗ್ಲೋಬಲ್ ಡಾಟಾದ ಫಾರ್ಮಾಸ್ಯುಟಿಕಲ್ ಇಂಟಲಿಜೆನ್ಸ್ ಕೇಂದ್ರದ ಪ್ರಕಾರ, ಭಾರತದಲ್ಲಿ 10 ವರ್ಷಗಳ ಪತ್ತೆ ಕಾರ್ಯಾಚರಣೆಯಿಂದಾಗಿ ವಿಲ್ಸನ್ ರೋಗವೂ ವಾರ್ಷಿಕ ಬೆಳವಣಿಗೆ ದರ (ಎಜಿಆರ್) 0.36ರಷ್ಟು ಹೆಚ್ಚಾಗಲಿದೆ. 2023ಲ್ಲಿ 53,988 ಇರುವ ಪ್ರಕರಣ 2030ರಲ್ಲಿ 55,150ಕ್ಕೇ ಏರಿಕೆ ಆಗಲಿದೆ.
ಒಗ್ಗಟ್ಟಿನ ಪ್ರಯತ್ನ: ಅಪರೂಪದ ರೋಗಗಳ ಕುರಿತು ಮಾಹಿತಿ, ಕಡಿಮೆ ಸಂಶೋಧನೆ ಮತ್ತು ಸಾರ್ವಜನಿಕರು ಮತ್ತು ಆರೋಗ್ಯ ವೃತ್ತಿಪರರಲ್ಲಿನ ಅರಿವಿನ ಕೊರತೆಯಿಂದಾಗಿ ಇದರ ನಿರ್ವಹಣೆಯು ಸವಾಲಿನಿಂದ ಕೂಡಿರಲಿದೆ. ಈ ನಿಟ್ಟಿನಲ್ಲಿ ಸರ್ಕಾರವು ಸಾರ್ವಜನಿಕರು ಮತ್ತು ಆರೋಗ್ಯ ವೃತ್ತಿಪರರಿಗೆ ಈ ರೋಗದ ಲಕ್ಷಣ, ಪತ್ತೆ ಮತ್ತು ಚಿಕಿತ್ಸೆಯ ಜಾಗೃತಿ ಮೂಡಿಸಬೇಕಿದೆ. ಇದನ್ನು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಪ್ರಚಾರ ಮೂಲಕ ಸಾಧಿಸಬಹುದಾಗಿದೆ.
ಇತ್ತೀಚೆಗೆ ಲಿವ್ಆಲರ್ಟ್, ಆಲ್ಕೋಹಾಲೇತರ ಫ್ಯಾಟಿ ಲಿವರ್ ರೋಗ ಮತ್ತು ಆಲ್ಕೋಹಾಲೇತರ ಸ್ಟೆಯಟೊಪಟಿಟಿಸ್ ಕುರಿತು ಅರಿವು ಮೂಡಿಸುವ ಯತ್ನವನ್ನು ಎನ್ಪಿಸಿಡಿಸಿಎಸ್ ನಡೆಸಿದೆ. ಭಾರತದಲ್ಲಿ ರೋಗದ ಜಾಗೃತಿ ಸೇರಿದಂತೆ ಅದರ ಸವಾಲುಗಳ ಎದುರಿಸಲು ಸರ್ಕಾರ, ಆರೋಗ್ಯ ವೃತ್ತಿಪರು, ರೋಗಿಗಳ, ಸಲಹಾ ಗುಂಪು ಮತ್ತು ಮಾಧ್ಯಮಗಳ ಸಹಕಾರ ಅಗತ್ಯವಾಗಿದೆ. ಸಂಶೋಧನಾ ಸಂಸ್ಥೆಯೊಂದಿಗಿನ ಸಂಯೋಜನೆ, ಔಷಧ ಕಂಪನಿಗಳು ಮತ್ತು ಜಾಗತಿಕ ಅಪರೂಪದ ಕಾಯಿಲೆ ನೆಟ್ವರ್ಕ್ಗಳು ಅಗತ್ಯವಾಗಿದೆ ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಅಮೆರಿಕದಲ್ಲಿ ಜೆಎನ್.1 ಪ್ರಾಬಲ್ಯ : ಶೇ.50ರಷ್ಟು ಕೋವಿಡ್ ಪ್ರಕರಣ ಏರಿಕೆ