ನವದೆಹಲಿ:ಭಾರತದಲ್ಲಿ ಪ್ರಸ್ತುತ ಎರಡು ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಭಾರೀ ಏರಿಕೆ ಕಂಡಿದೆ. ಬಹುತೇಕ ಭಾರತೀಯರಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಸಾಮಾನ್ಯವಾಗಿದೆ. ಇದೀಗ ಅದರ ಬೆನ್ನ ಹಿಂದೆ ಮತ್ತೊಂದು ಆರೋಗ್ಯ ಸಮಸ್ಯೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಅದುವೇ ಸ್ಥೂಲಕಾಯ.
ಭಾರತದ ಲಕ್ಷಾಂತರ ಜನರಲ್ಲಿ ಸ್ಥೂಲಕಾಯದ ಸಮಸ್ಯೆ ಹೆಚ್ಚಾಗುತ್ತಿದೆ. ಸಾಂಪ್ರದಾಯಿಕ ಆಹಾರ ಪದ್ಧತಿಯಿಂದ ದೂರಾಗಿ ಫ್ಯಾಟ್, ಚೀಸ್ ಮತ್ತು ಎಣ್ಣೆಯುಕ್ತ ಆಹಾರ ಪದ್ಧತಿ ಮತ್ತು ಸಕ್ಕರೆ ಅಂಶದ ಪಾನೀಯಗಳ ಸೇವನೆ ಹೆಚ್ಚಿಸುವುದು ಪ್ರಮುಖ ಕಾರಣವಾಗಿದೆ.
ಸ್ಥೂಲಕಾಯ ಪ್ರಮುಖ ಆರೋಗ್ಯ ಕಾಳಜಿ ವಿಷಯವಾಗಿದೆ. ಇದು ಮಧ್ಯಮ ಮತ್ತು ಕಡಿಮೆ ಆದಾಯದ ದೇಶದಲ್ಲಿ ಪ್ರಮುಖ ಸಮಸ್ಯೆಯಾಗಿದೆ. ಕಾರಣ ಈ ಸ್ಥೂಲಕಾಯವೂ ದೀರ್ಘಕಾಲದ ಮಧುಮೇಹ, ಹೃದಯರೋಗ ಮತ್ತು ಇತರೆ ಕ್ಯಾನ್ಸರ್ನೊಂದಿಗೆ ಸಂಬಂಧ ಹೊಂದಿದೆ.
20 ವರ್ಷದಿಂದ ಹೆಚ್ಚಾದ ಸಮಸ್ಯೆ: ಕಳೆದೆರಡು ದಶಕಗಳಿಂದಿಚೆಗೆ ಭಾರತದಲ್ಲಿ ಸ್ಥೂಲಕಾಯ ಮತ್ತು ಅಧಿಕ ತೂಕ ಹೆಚ್ಚಳದ ಸಮಸ್ಯೆ ದುಪ್ಪಟ್ಟಾಗಿದೆ. ಪ್ರಮುಖ ಅಂಶ ಎಂದರೆ, ಸಾಂಕ್ರಾಮಿಕವಲ್ಲದ ರೋಗಗಳು ಕೂಡ ಹೆಚ್ಚಾಗಿದೆ ಎಂದು ಇತ್ತೀಚೆಗೆ ಲ್ಯಾನ್ಸೆಟ್ ಗ್ಯಾಸ್ಟ್ರೊಎಟರ್ನಾಲೊಜಿ ಮತ್ತು ಹೆಪೊಟೊಲಾಜಿಯಲ್ಲಿ ಪ್ರಕಟವಾಗಿದೆ.
ಕೋವಿಡ್ 19 ಸುಧಾರಿತ ಅಪಾಯದ ಅಂಶಗಳಿಂದಲೂ ಈ ಸ್ಥೂಲಕಾಯ ಕಾರಣವಾಗಿದೆ. ಸಾರ್ವಜನಿಕರು ಆರೋಗ್ಯಯುತ ದೇಹ ತೂಕ ನಿರ್ವಹಣೆ ಮಾಡುವುದರಿಂದ ಸಾಂಕ್ರಾಮಿಕವಲ್ಲದ ಮತ್ತು ಸೋಂಕಿನ ಅಪಾಯವನ್ನು ತಡೆಯಬಹುದಾಗಿದೆ ಎಂದು ಅಧ್ಯಯನ ತಿಳಿಸಿದೆ.
2016-2021ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ದತ್ತಾಂಶ ಅನುಸಾರ, ಶೇ 20ರಷ್ಟು ಭಾರತೀಯರು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಶೇ 5ರಷ್ಟು ಮಂದಿ ಗಂಭೀರ ಸ್ಥೂಲಕಾಯತೆ ಸಮಸ್ಯೆ ಹೊಂದಿದ್ದಾರೆ. ಬಾಲ್ಯದ ಸ್ಥೂಲಕಾಯದ ಹೆಚ್ಚಳವೂ ಕೂಡ ಪತ್ತೆಯಾಗಿದೆ. ಅಂದಾಜಿನ ಪ್ರಕಾರ, ಭಾರತದ 135 ಮಿಲಿಯನ್ ಜನರು ಈ ಸ್ಥೂಲಕಾಯದ ಸಮಸ್ಯೆ ಎದುರಿಸುತ್ತಿದ್ದಾರೆ.
ಆಹಾರ ಪದ್ಧತಿ ಬದಲಾವಣೆಯೇ ಪ್ರಮುಖ ಕಾರಣ: ಆಹಾರ ಪದ್ಧತಿಯ ಬದಲಾವಣೆ ಭಾರತೀಯರಲ್ಲಿ ಸ್ಥೂಲಕಾಯತೆ ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಭಾರತದ ಯುವ ಜನತೆಯ ಆಹಾರ ಪದ್ಧತಿ ಹೆಚ್ಚಾಗಿ ಪಾಶ್ಚಿಮಾತ್ಯ ಶೈಲಿ ಹೊಂದಿದ್ದು, ಇದು ಸಂಸ್ಕರಿತ ಮತ್ತು ಫಾಸ್ಟ್ ಫುಡ್ ಅನ್ನು ಒಳಗೊಂಡಿದೆ. ಈ ಆಹಾರಗಳಲ್ಲಿ ಹೆಚ್ಚಿನ ಕ್ಯಾಲೋರಿ, ಸಕ್ಕರೆ ಮತ್ತು ಕೊಬ್ಬು ಹೊಂದಿದ್ದು, ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಹೈದರಾಬಾದ್ ಅಮೊರ್ ಆಸ್ಪತ್ರೆಯ ಡಾ ಕಿಶೋರ್ ಬಿ ರೆಡ್ಡಿ ಹೇಳುವಂತೆ, ಸಮಾಜದಲ್ಲಿನ ಆಧುನೀಕರಣ ಮತ್ತು ನಗರೀಕರಣ ನಮ್ಮ ಜೀವನದಲ್ಲಿ ಕೆಲವು ಅನಪೇಕ್ಷಿತ ಬದಲಾವಣೆಗಳನ್ನು ತಂದಿದೆ.
ಇಂದು ನಾವು ಹೆಚ್ಚು ಹೆಚ್ಚು ಜನರು ಶಕ್ತಿ ಸಮೃದ್ಧ ಮತ್ತು ಕೊಬ್ಬು ಸಮೃದ್ಧ ಆಹಾರ ಸೇವನೆ ಮಾಡುತ್ತಿರುವುದನ್ನು ನೋಡಿದ್ದಾರೆ. ಇದೆ ವೇಳೆ ಅವರ ದೈಹಿಕ ಚಟುವಟಿಕೆಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ಇದು ಜನರಲ್ಲಿ ಹೆಚ್ಚು ತೂಕ ಹೆಚ್ಚಳಕ್ಕೆ ಕಾರಣವಾಗಿದ್ದು, ಆರ್ಥಿಕ ಸಮಸ್ಯೆಗೂ ದಾರಿ ಮಾಡಿಕೊಡುತ್ತಿದೆ. ಸ್ಥೂಲಕಾಯ ಹೊಂದಿರುವವರು ಆರೋಗ್ಯ ಕಾಳಜಿಗಿಂತಲೂ ಹೆಚ್ಚಾಗಿ ಬೇರೆ ವಿಷಯಕ್ಕೆ ಹಣ ವ್ಯಯ ಮಾಡುತ್ತಿದ್ದಾರೆ. ಉದಾಹರಣೆ ಸಾರಿಗೆಯಂತಹ ಸರಳ ಅವಶ್ಯಕತೆಗೂ ಅವರು ಅವಲಂಬನೆಗೆ ಒಳಗಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಭವಿಷ್ಯದಲ್ಲಿ ಅಪಾಯ: ಹೆಚ್ಚು ಸಂಸ್ಕರಿತ ಆಹಾರದಲ್ಲಿ ಸಕ್ಕರೆ ಅಂಶಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಇದು ತೂಕ ಹೆಚ್ಚಳ ಮತ್ತು ಸ್ಥೂಲಕಾಯತೆಗೆ ಕಾರಣವಾಗುತ್ತಿದ್ದು, ಜಾಗತಿಕವಾವಾಗಿ ಮಕ್ಕಳು ಸೇರಿದಂತೆ ಶೇ 40ರಷ್ಟು ಮಂದಿ ಈ ಸಮಸ್ಯೆಗೆ ಗುರಿಯಾಗಿದ್ದಾರೆ. ಸಕ್ಕರೆ ಸೇವನೆ ಮತ್ತು ಮಧುಮೇಹ ಅಭಿವೃದ್ಧಿ ನಡುವೆ ಸಂಕೀರ್ಣ ಸಂಬಂಧವನ್ನು ಗುರುತಿಸುವುದು ಕಷ್ಟವಾಗಿದೆ. ಒಂದು ವೇಳೆ ಸ್ಥೂಲಕಾಯತೆ ತಡೆ, ಚಿಕಿತ್ಸೆ ಬೆಂಬಲ ಅಭಿವೃದ್ಧಿಯಾಗದಿದ್ದರೆ 2025ರಲ್ಲಿ ಭಾರತದಲ್ಲಿ ಯುವಕ ಮತ್ತು ಯುವತಿಯರಲ್ಲಿ ಈ ಸ್ಥೂಲಕಾಯತೆ ಹೆಚ್ಚಳ ವಾರ್ಷಿಕವಾಗಿ ಶೇ 9.1ರಷ್ಟು ಹೆಚ್ಚಾಗಲಿದೆ. ಈ ಕುರಿತು ಜನರಿಗೆ ಎಚ್ಚರಿಕೆ ನೀಡಬೇಕಿದೆ.
ವರ್ಲ್ಡ್ ಒಬೆಸಿಟಿ ಫೆಡರೇಷನ್ ವರದಿ ಅನುಸಾರ, 2020ರಲ್ಲಿ ಶೇ3 ರಷ್ಟು ಯುವಕರು ಸ್ಥೂಲಕಾಯತೆ ಅಪಾಯ ಹೊಂದಿದ್ದರೆ, 2035ರಲ್ಲಿ ಈ ಸಂಖ್ಯೆ ಶೇ 12ರಷ್ಟು ಹೆಚ್ಚಲಿದೆ. ಇನ್ನು 2020ರಲ್ಲಿ ಯುವತಿಯರು ಶೇ 2ರಷ್ಟು ಸ್ಥೂಲಕಾಯತೆ ಅಪಾಯ ಹೊಂದಿದ್ದು, ಇದು 2035ಕ್ಕೆ ಶೇ 7ರಷ್ಟು ಹೆಚ್ಚಾಗಲಿದೆ.
ಇದನ್ನೂ ಓದಿ: Water fasting: ಇಂಟರ್‌ಮಿಟೆಂಟ್ ಫಾಸ್ಟಿಂಗ್ OR ವಾಟರ್ ಫಾಸ್ಟಿಂಗ್: ದೇಹದ ತೂಕ ಇಳಿಸಲು ಯಾವುದು ಒಳ್ಳೆಯದು?