ನ್ಯೂಯಾರ್ಕ್: ಗರ್ಭಾವಸ್ಥೆ ಸಮಯ ಅಥವಾ ಅದಕ್ಕಿಂತ ಮೊದಲಿನ ಸ್ಥೂಲಕಾಯತೆಯು ಹೃದಯ ರಕ್ತನಾಳ ಸಮಸ್ಯೆಗೆ ಮೂಲಕ ಕಾರಣ ಎಂದು ಅಧ್ಯಯನ ತಿಳಿಸಿದೆ. ಪ್ರಿಕ್ಲಾಂಪ್ಸಿಯಾ ಮತ್ತು ಗ್ಯಾಸ್ಟೆನ್ಷನಲ್ ಡಯಾಬಿಟೀಸ್ನಂತಹ ಗರ್ಭಾವಸ್ಥೆಯ ತೊಡಕುಗಳಿಗಿಂತ ಸ್ಥೂಲಕಾಯತೆ ಭವಿಷ್ಯದಲ್ಲಿ ಹೃದಯ ರಕ್ತನಾಳ ಸಮಸ್ಯೆ ಅಭಿವೃದ್ಧಿ ಅಪಾಯ ಹೆಚ್ಚಿಸುತ್ತದೆ ಎಂದು ಅಧ್ಯಯನ ತೋರಿಸಿದೆ.
ಪ್ರತಿಕೂಲ ಗರ್ಭಧಾರಣೆಯ ಫಲಿತಾಂಶಗಳು ಪ್ರಾಥಮಿಕವಾಗಿ ಸೂಚಕಗಳಾಗಿವೆ ಎಂಬುದನ್ನು ಮೊದಲ ಬಾರಿಗೆ ನಾವು ಪ್ರದರ್ಶಿಸಿದ್ದೇವೆ. ಇದು ಭವಿಷ್ಯದಲ್ಲಿನ ಹೃದಯ ಆರೋಗ್ಯದ ಅಪಾಯದ ಮೂಲ ಕಾರಣಗಳಾಗಿವೆ ಎಂದು ನಾರ್ಥ್ವೆಸ್ಟರ್ನ್ ಯುನಿವರ್ಸಿಟಿ ಫಿನೈಬರ್ಗ್ ಸ್ಕೂಲ್ ಆಫ್ ಮಡಿಸಿನ್ ಕಾರೆಸ್ಪಂಡಿಂಗ್ ಲೇಖಕ ಸಡಿಯಾ ಖಾನ್ ತಿಳಿಸಿದ್ದಾರೆ.
ಗರ್ಭಾಧರಣೆ ಸಮಯದಿಂದ ಅಧ್ಯಯನ: ಇದರ ಅರ್ಥ ಗರ್ಭಾಧರಣೆಗೆ ಮೂಲಕ ಹೃದಯ ಸಮಸ್ಯೆ ತಿಳಿದು ಬಂದರೂ ಇದು ಈ ಮೊದಲೇ ಅಸ್ತಿತ್ವದಲ್ಲಿ ಇತ್ತು ಎಂದಿದ್ದಾರೆ. ಈ ಸಂಬಂಧ ಮೊದಲ ಬಾರಿ ಗರ್ಭ ಧರಿಸಿದ 4,216 ಮಂದಿಯ ಗರ್ಭಧಾರಣೆಯ ಆರಂಭಿಕ ಹಂತಗಳಿಂದ ಸರಾಸರಿ 3.7 ವರ್ಷಗಳ ನಂತರದವರೆಗೆ ಅವರನ್ನು ಅಧ್ಯಯನ ಮಾಡಲಾಗಿದೆ. ಆರಂಭಿಕ ಗರ್ಭಧಾರಣೆಯ ಮೊದಲ ಅಧ್ಯಯನದ ಭೇಟಿಯಲ್ಲಿ ಭಾಗಿದಾರರ ವಯಸ್ಸು 27 ವರ್ಷವಾಗಿದ್ದು, ಶೇ 53ರಷ್ಟು ಮಂದಿ ಸಾಮಾನ್ಯ ಬಿಎಂಐ ಹೊಂದಿದ್ದು, ಶೇ 25ರಷ್ಟು ಮಂದು ಅಧಿಕ ತೂಕ ಮತ್ತು ಶೇ 22 ಮಂದಿ ಸ್ಥೂಲಕಾಯತೆ ಹೊಂದಿದ್ದಾರೆ.
ಈ ಅಧ್ಯಯನವನ್ನು ಜರ್ನಲ್ ಸರ್ಕ್ಯೂಲೆಷನ್ ರಿಸರ್ಚ್ನಲ್ಲಿ ಪ್ರಕಟಿಸಲಾಗಿದೆ. ಆರಂಭಿಕ ಗರ್ಭಾವಸ್ಥೆಯಲ್ಲಿ ಸಾಮಾನ್ಯ ಬಿಎಂಐ ಹೊಂದಿರುವವರಿಗೆ ಹೋಲಿಸಿದರೆ, ಅಧಿಕ ತೂಕ ಅಥವಾ ಬೊಜ್ಜು, ಬಿಎಂಐ ಹೊಂದಿರುವ ವ್ಯಕ್ತಿಗಳು ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡದ ಅಸ್ವಸ್ಥತೆಗಳನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ.