ವಾಷಿಂಗ್ಟನ್:ಬಹುತೇಕ ಮಹಿಳೆಯರಲ್ಲಿ ಅಂತಿಮ ಹಂತದಲ್ಲಿ ಅಂಡಾಶಯದ ಕ್ಯಾನ್ಸರ್ ಪತ್ತೆಯಾಗುತ್ತದೆ. ಈ ಹಂತದಲ್ಲಿ ರೋಗ ಪತ್ತೆಯಾದ ಮೂರನೇ ಒಂದರಷ್ಟು ಮಹಿಳೆಯರು ಐದು ವರ್ಷಗಳ ಕಾಲ ಬದುಕಬಹುದು ಎಂದು ಇತ್ತೀಚಿನ ವರದಿ ತಿಳಿಸಿದೆ. ಜಾಗತಿಕವಾಗಿ ಸ್ತ್ರೀಯರನ್ನು ಕಾಡುತ್ತಿರುವ ಹಲವು ಕ್ಯಾನ್ಸರ್ನಲ್ಲಿ ಮೂರನೇ ಅತಿ ಹೆಚ್ಚು ಹರಡುತ್ತಿರುವ ಕ್ಯಾನ್ಸರ್ ಇದಾಗಿದೆ.
ಕೇವಲ ಅಂಡಾಶಯದ ಕ್ಯಾನ್ಸರ್ ಒಂದರಿಂದಲೇ 2020ರ ಒಂದೇ ವರ್ಷದಲ್ಲಿ ಜಾಗತಿನಾದ್ಯಂತ 2,00,000 ಮಂದಿ ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಇಂತಹ ಅಂಡಾಶಯದ ಕ್ಯಾನ್ಸರ್ ಮೇಲೆ ಸ್ಥೂಲಕಾಯತೆ ಪ್ರಭಾವ ಕುರಿತು ಜರ್ನಲ್ ಆಫ್ ಎಕ್ಸ್ಪಿರಿಮೆಂಟರ್ ಅಂಡ್ ಕ್ಲಿನಿಕಲ್ ಕ್ಯಾನ್ಸರ್ ರಿಸರ್ಚ್ನ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ನೊಟ್ರೆ ಡ್ಯಾಮ್ ಯುನಿವರ್ಸಿಟಿ ಸಂಶೋಧಕರು ನಿಯೊಜಿನೊಮಿಕ್ಸ್ ಲ್ಯಾಬೊರೇಟರೀಸ್ ಜೊತೆಗೆ ಈ ಕುರಿತು ಅಧ್ಯಯನ ನಡೆಸಿದ್ದು, ವಿಶೇಷವಾಗಿ ಅಂಡಾಯಶದ ಕ್ಯಾನ್ಸರ್ನಲ್ಲಿ ಸ್ಥೂಲಕಾಯದ ಅಂಶದ ಪ್ರಭಾವವನ್ನು ಗಮನಿಸಿದ್ದಾರೆ.
ಹೆಚ್ಚುತ್ತಿರುವ ಅಂಡಾಶಯದ ಕ್ಯಾನ್ಸರ್: ಸ್ಥೂಲಕಾಯವನ್ನು ಸೋಂಕಿತವಲ್ಲ ಸಾಂಕ್ರಾಮಿಕ ಎಂದು ಗುರುತಿಸಲಾಗಿದೆ. ಅಂಡಾಶಯದ ಕ್ಯಾನ್ಸರ್ ಅಪಾಯ ಹೆಚ್ಚಿಸಿ. ಬದುಕುಳಿಯುವ ಸಾಧ್ಯತೆಯನ್ನು ಅದು ಕಡಿಮೆ ಮಾಡುತ್ತದೆ. ಎಂ ಶರೋನ್ ಸ್ಟಾಕ್ ನೇತೃತ್ವದ ತಂಡ ಈ ಅಧ್ಯಯನ ನಡೆಸಿದ್ದು, ಸ್ಥೂಲಕಾಯವೂ ಅಂಡಾಶಯದ ಕ್ಯಾನ್ಸರ್ನ ಮತ್ತಷ್ಟು ಮಾರಣಾಂತಿಕ ಆಗಿಸುತ್ತದೆಯಾ ಎಂಬುದನ್ನು ಅರ್ಥೈಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಸಂಶೋಧಕರು ವಿಶ್ಲೇಷಿಸಿದಂತೆ ಅಂಡಾಯಯದ ಕ್ಯಾನ್ಸರ್ ರೋಗಿಗಳಿಂದ ಕ್ಯಾನ್ಸರ್ ಟ್ಯೂಮರ್ ಟಿಶ್ಯೂವನ್ನು ವಿಶ್ಲೇಷಣೆ ಮಾಡಿದ್ದಾರೆ. ಅವರು ರೋಗಿಗಳ ಈ ಟಿಶ್ಯೂವನ್ನು ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಮತ್ತು ಕಡಿಮೆ ಬಿಎಂಐ ಹೊಂದಿರುವವರಿಗೆ ಹೋಲಿಕೆ ಮಾಡಿದ್ದು, ಇದರಲ್ಲಿ ಎರಡು ಪ್ರಮುಖ ವಿಭಿನ್ನತೆಗಳು ಕಂಡು ಬಂದಿದೆ.