ನವದೆಹಲಿ: ಯಾವುದೇ ಕ್ಷಣದಲ್ಲಿ ಯಾರಾದರೂ ಆಯಾಸವನ್ನು ಅನುಭವಿಸಬಹುದು. ಇದು ಸಾಮಾನ್ಯವಾಗಿ ಶ್ರಮದಾಯಕ ದೈಹಿಕ ಚಟುವಟಿಕೆ, ನಿರಂತರವಾಗಿ ಕೆಲಸ ಮಾಡುವುದರಿಂದ ಉಂಟಾಗುತ್ತದೆ. ಕೆಲವು ಬಾರಿ ವ್ಯಾಯಾಮವು ಆಯಾಸ ಉಂಟು ಮಾಡುತ್ತದೆ. ಇದನ್ನು ಸಾಕಷ್ಟು ವಿಶ್ರಾಂತಿ ಪಡೆಯುವ ಮೂಲಕ, ಉತ್ತಮ ನಿದ್ರೆ ಮಾಡುವ ಮೂಲಕ ಕಡಿಮೆ ಮಾಡಬಹುದಾಗಿದೆ.
ವಿಟಮಿನ್ ಕೊರತೆಯಿಂದ ಸಮಸ್ಯೆ: ನೀವು ದಣಿದಾಗ ನಿಮ್ಮ ನಿಯಮಿತ ದಿನಚರಿ ಕಾಪಾಡಿಕೊಳ್ಳಲು ಕಷ್ಟಕರವಾಗುತ್ತದೆ ಮತ್ತು ದುರ್ಬಲಗೊಳಿಸಬಹುದು. ಒಬ್ಬರ ಅಲ್ಪಾವಧಿ ಮತ್ತು ದೀರ್ಘಾವಧಿಯ ಆಯಾಸವು ಅವರು ತಿನ್ನುವ ಆಹಾರಕ್ಕೆ ನೇರವಾಗಿ ಸಂಬಂಧಿಸಿದೆ. ಅನೇಕರು ವಿಟಮಿನ್ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ದೇಹದಲ್ಲಿ ವಿಟಮಿನ್ ಕೊರತೆ ಕಾಣಿಸಿಕೊಂಡರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.
ಇದನ್ನೂ ಓದಿ:ವಾಕಿಂಗ್ ಮಾಡಿ ಕ್ಯಾನ್ಸರ್, ಬುದ್ಧಿಮಾಂದ್ಯತೆ ತಡೆಯಿರಿ.. ವೇಗದ ಹೆಜ್ಜೆಯಿಂದ ಹತ್ತು ಹಲವು ಲಾಭ
ಖಾಲಿ ಕ್ಯಾಲೋರಿ ಅಂಶಗಳಂತೆಯೇ, ಸಕ್ಕರೆ ಸೇರಿಸಿದ ಆಹಾರಗಳು, ಸಿಹಿತಿಂಡಿಗಳು ಮತ್ತು ತಂಪು ಪಾನೀಯಗಳಂತಹ ಘನ ಕೊಬ್ಬುಗಳು ಕಡಿಮೆ ಪೌಷ್ಟಿಕಾಂಶದ ಪ್ರಯೋಜನವನ್ನು ಹೊಂದಿವೆ. ಪರಿಣಾಮ ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶದ ಆಹಾರವನ್ನು ನೀವು ಸೇವಿಸದಿದ್ದರೂ, ಆಯಾಸವನ್ನು ಅನುಭವಿಸಬಹುದು.
ಸಮತೋಲಿತ ಆಹಾರ ಸೇವಿಸಿ:ಕೋರ್ ಸೆಲ್ಯುಲಾರ್ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸಲು ಮತ್ತು ಚಯಾಪಚಯ ಕ್ರಿಯೆ ಸರಿಯಾಗಿರಲು, ನಾವು ಸಮತೋಲಿತ ಆಹಾರ ಸೇವಿಸಬೇಕಾಗುತ್ತದೆ. ಶಕ್ತಿ - ಉತ್ಪಾದಿಸುವ ಚಯಾಪಚಯ, ಡಿಎನ್ಎ ಸಂಶ್ಲೇಷಣೆ, ಆಮ್ಲಜನಕದ ಸಾಗಣೆ ಮತ್ತು ಸೆರೆಬ್ರಲ್ ಕಾರ್ಯಗಳಲ್ಲಿ ಅವರ ಪಾಲ್ಗೊಳ್ಳುವಿಕೆಯಿಂದಾಗಿ, ಮೆದುಳು ಮತ್ತು ಸ್ನಾಯುವಿನ ಕಾರ್ಯಚಟುವಟಿಕೆಗೆ ಸಮತೋಲಿತ ಆಹಾರವು ಅಗತ್ಯವಾಗಿದೆ.
ಕಬ್ಬಿಣ, ಮೆಗ್ನೀಸಿಯಂ, ಸತು, ವಿಟಮಿನ್ ಸಿ ಮತ್ತು ಬಿ ಜೀವಸತ್ವಗಳು (ಬಿ 1, ಬಿ 2, ಬಿ 3, ಬಿ 5, ಬಿ 6, ಬಿ 8, ಬಿ 9 ಮತ್ತು ಬಿ 12) ಎಲ್ಲ ಆಯಾಸವನ್ನು ಹೋಗಿಸಲು ಸಹಾಯ ಮಾಡುತ್ತದೆ. ಆಯಾಸವನ್ನು ಹೋಗಲಾಡಿಸಲು ಮತ್ತು ಲವಲವಿಕೆಯಿಂದ ಇರಲು ಯಾವ ರೀತಿ ಆಹಾರವನ್ನು ಸೇವಿಸಬೇಕು ಎಂಬುದಕ್ಕೆ ಕೆಲವು ಸಲಹೆಗಳು ಇಲ್ಲಿವೆ.
ನಿಮ್ಮ ಆಹಾರದಲ್ಲಿ ಪ್ರೋಟೀನ್ ಸೇರಿಸಿ: ನಿತ್ಯ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೋಟೀನ್ ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸುವುದನ್ನು ಮರೆಯದಿರಿ. ವಯಸ್ಸು, ತೂಕ ಮತ್ತು ಚಟುವಟಿಕೆಗೆ ಸರಿಯಾಗಿ ಕ್ಯಾಲೊರಿ ಸೇವಿಸಿ. ನಿಮ್ಮ ತಟ್ಟೆಯಲ್ಲಿ ಸದಾ ಅರ್ಧದಷ್ಟು ಹಣ್ಣುಗಳು ಮತ್ತು ತರಕಾರಿಗಳಿರಬೇಕು. ಸಂಸ್ಕರಿಸಿದ ಮಾಂಸವನ್ನು ಮಿತಿಗೊಳಿಸಿ, ಒಮೆಗಾ -3 ಭರಿತ ಸಮುದ್ರಾಹಾರ ಸೇವಿಸಿ.
ದ್ರವ ಆಹಾರವನ್ನು ಹೆಚ್ಚು ಸೇವಿಸಿ:ನೀರಿನಂತಹ ಕ್ಯಾಲೋರಿ - ಕಡಿಮೆ, ಸುವಾಸನೆಯಿಲ್ಲದ ದ್ರವ ಆಹಾರವನ್ನು ಹೆಚ್ಚು ಸೇವಿಸಿ. ನಿರ್ಜಲೀಕರಣವು ಆಯಾಸ ಮತ್ತು ಆಯಾಸದಂತಹ ಲಕ್ಷಣಗಳನ್ನು ಉಂಟುಮಾಡುತ್ತದೆ. ಹಾಗಾಗಿ ದಿನಕ್ಕೆ ಮೂರು ಹೊತ್ತು ಊಟ ಮಾಡಿ. ಸಾಕಷ್ಟು ನೀರು ಕುಡಿಯಿರಿ. ನೀರು ಕುಡಿಯುವುದರಿಂದ ನಿರ್ಜಲೀಕರಣ ತಡೆಯಲು ಸಹಾಯವಾಗುತ್ತದೆ. ಜೊತೆಗೆ ಆಯಾಸ, ಅಸ್ಪಷ್ಟ ಚಿಂತನೆ, ಮನಸ್ಥಿತಿಯ ಬದಲಾವಣೆಗಳು, ಅಧಿಕ ಬಿಸಿಯಾಗುವುದು ಮತ್ತು ಮಲಬದ್ಧತೆ ತಡೆಯುತ್ತದೆ.
ಕೆಫೀನ್‌ಗೆ ಕಡಿವಾಣ ಹಾಕಿ: ಕಾಫಿ ಅಥವಾ ಚಹಾ ಕುಡಿಯುವುದನ್ನು ಆದಷ್ಟು ಕಡಿಮೆ ಮಾಡಿ. ಕಾಫಿ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ತಾತ್ಕಾಲಿಕ ಮೆದುಳಿನ ಉತ್ತೇಜಕವಾಗಿ ಕಾರ್ಯನಿರ್ವಹಿಸಬಹುದು. ಆದರೆ, ನಂತರ ತ್ವರಿತವಾಗಿ ಶಕ್ತಿಯ ಕುಸಿತಕ್ಕೆ ಕಾರಣವಾಗಬಹುದು.
ಆಲ್ಕೋಹಾಲ್ ಸೇವನೆ ಬೇಡ: ಪೂರ್ಣ ಆಲ್ಕೋಹಾಲ್ ಗ್ಲಾಸ್ ನಿಮ್ಮ ಶಕ್ತಿಯ ಮಟ್ಟವನ್ನು ಅರ್ಧ ಖಾಲಿ ಮಾಡಿ ಬಿಡಬಹುದು. ಹಾರ್ವರ್ಡ್ ಹೆಲ್ತ್ ಪ್ರಕಾರ, ಇದು ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ನಿದ್ರೆ ಹಾಗೂ ತಿನ್ನುವ ವಿಧಾನಗಳನ್ನು ತೊಂದರೆಗೊಳಿಸುತ್ತದೆ. ಆದರೆ ಆಲ್ಕೋಹಾಲ್ ದೇಹದ ಎಪಿನ್ಫ್ರಿನ್ ಮಟ್ಟವನ್ನು ಹೆಚ್ಚಿಸುತ್ತದೆ.
ಚೆನ್ನಾಗಿ ತಿನ್ನಿರಿ: ಮೂರು ಹೊತ್ತು ಚೆನ್ನಾಗಿ ಊಟ, ತಿಂಡಿ ಮಾಡಿ. ಆದಷ್ಟು ಚಾಟ್ಸ್ ತಿನ್ನುವುದನ್ನು ತಪ್ಪಿಸಿ. ನಿಮ್ಮ ವಯಸ್ಸು, ಲಿಂಗ ಮತ್ತು ಚಟುವಟಿಕೆಯ ಮಟ್ಟಕ್ಕೆ ಸೂಚಿಸಲಾದ ಕ್ಯಾಲೊರಿ ಸೇವನೆಯನ್ನು ಮಾಡಿ. ಆಹಾರವು ನಿಮ್ಮ ದೇಹದ ಇಂಧನವಾಗಿದೆ ಮತ್ತು ಅದು ಸಾಕಷ್ಟು ಪ್ರಮಾಣದಲ್ಲಿ ಅಥವಾ ಉತ್ತಮ ಗುಣಮಟ್ಟದಲ್ಲಿ ನೀವು ಪಡೆಯದಿದ್ದರೆ ಆಯಾಸ ಹೆಚ್ಚಾಗುತ್ತದೆ.
ಆರೋಗ್ಯಕರ ಆಹಾರ, ದೈಹಿಕ ಚಟುವಟಿಕೆ, ಸಾಕಷ್ಟು ನಿದ್ರೆ, ಮಾನಸಿಕ ಶಾಂತಿ ಮತ್ತು ವಿಶ್ರಾಂತಿಯಿಂದ ನೀವು ಆಯಾಸವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳು, ಹಣ್ಣುಗಳು, ತರಕಾರಿಗಳು ಮತ್ತು ಮಾಂಸದಂತಹ ವಿವಿಧ ಮೂಲಗಳಿಂದ ನೈಸರ್ಗಿಕವಾಗಿ ನೀವು ಶಕ್ತಿಯನ್ನು ಪಡೆಯಬಹುದಾಗಿದೆ.