ಸಿಡ್ನಿ:ಸೋಯಾಬೀನ್, ಎಳ್ಳು, ಬಾರ್ಲಿ, ಕಾಲೆ, ಕಡಲೆ ಬೀಜ, ಸಿಹಿ ಗೆಣಸು ಅಥವಾ ಸೂರ್ಯಾಕಾಂತಿ ಬೀಜಗಳಿಂದ ಮಾಡಿದ ರುಚಿಕರ ಪೌಷ್ಟಿಕಾಂಶಯುಕ್ತ ಸಸ್ಯಾಹಾರದ ಸಲಾಡ್ ಬಾಹ್ಯಾಕಾಶದ ಅತ್ಯುತ್ತಮ ಊಟ ಆಗಿರಬಹುದು ಎಂದು ಅಧ್ಯಯನ ಸಲಹೆ ನೀಡಿದೆ.
ಬಾಹ್ಯಾಕಾಶ ಏಜೆನ್ಸಿಯೊಂದು ದೀರ್ಘಾವಧಿ ಯೋಜನೆಯಲ್ಲಿ ಅತ್ಯುತ್ತಮ ಊಟ ಪೂರೈಕೆ ಸವಾಲನ್ನು ಎದರಿಸುತ್ತಿದೆ. ಇದಕ್ಕಾಗಿ ಅಡಿಲೈಡ್ ಯುನಿವರ್ಸಿಟಿ, ಸಸ್ಯಾಹಾರದ ಸಲಾಡ್ಗಳು ಪುರುಷ ಬಾಹ್ಯಾಕಾಶಯಾನಿಗಳಿಗೆ ಪೌಷ್ಟಿಕಾಂಶವನ್ನು ಒದಗಿಸುತ್ತವೆ. ಇದನ್ನು ಬಾಹ್ಯಾಕಾಶದಲ್ಲೂ ಬೆಳೆಯಬಹುದಾಗಿದೆ ಎಂದು ತಿಳಿಸಿದೆ.
ಬಾಹ್ಯಾಕಾಶದಲ್ಲಿ ಗಗನಯಾನಿಗಳು ಭೂಮಿ ಮೇಲಿಗಿಂತ ಹೆಚ್ಚಿನ ಕ್ಯಾಲರಿ ನಷ್ಟವನ್ನು ಹೊಂದುತ್ತಾರೆ. ಹಾಗಾಗಿ ಅವರಿಗೆ ಹೆಚ್ಚಿನ ಸೂಕ್ಷ್ಮ ಪೋಷಕಾಂಶಗಳಾಸ ಕ್ಯಾಲ್ಸಿಯಂ ಬೇಕಾಗುತ್ತದೆ. ಇದರಿಂದ ಅವರು ಸೂಕ್ಷ್ಮ ಗುರುತ್ವದದಲ್ಲಿ ಆರೋಗ್ಯಯುತವಾಗಿರಬಹುದು. ಜೊತೆಗೆ ಭವಿಷ್ಯದ ದೀರ್ಘ ಯೋಜನೆಗೆ ಬೇಕಾಗುವ ಸುಸ್ಥಿರದಲ್ಲಿನ ಬೆಳೆಯುವ ಆಹಾರ ಅವಶ್ಯಕತೆ ಇದೆ.
ಈ ಹಿನ್ನೆಲೆ ಬಾಹ್ಯಾಕಾಶದಲ್ಲಿ ಬೆಳೆಯುವ ಆಹಾರ ಮಾದರಿಗಳನ್ನು ಆವಿಷ್ಕಾರವನ್ನು ಸಂಶೋಧಕರು ತಿಳಿಸಿದ್ದಾರೆ. ಗಗನಯಾನಿಗಳು ಬಾಹ್ಯಾಕಾಶದಲ್ಲಿ ಆರೋಗ್ಯವಾಗಿ ಇರಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಆಹಾರವನ್ನು ಅಭಿವೃದ್ಧಿ ಮಾಡಿಲ್ಲ.
ಈ ಅಧ್ಯಯನದಲ್ಲಿ ಎಸಿಎಸ್ ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿ ಜರ್ನಲ್‌ನಲ್ಲಿ ಈ ಕುರಿತು ತಿಳಿಸಲಾಗಿದೆ. ವೋಲ್ಕರ್ ಹೆಸ್ಸೆಲ್ ಮತ್ತು ವಾರ್ಸಿಟಿಯ ಅವರ ತಂಡವು ಬಾಹ್ಯಾಕಾಶದಲ್ಲಿನ ಅವಶ್ಯಕತೆಗಳನ್ನು ಪೂರೈಸುವ ಮತ್ತು ಉತ್ತಮ ರುಚಿಯನ್ನು ಹೊಂದಿರುವ ಬಾಹ್ಯಾಕಾಶ ಊಟವನ್ನು ಆಯ್ಕೆ ಮಾಡಲು ಬಯಸಿದೆ.