ಕರ್ನಾಟಕ

karnataka

ಮಧುಮೇಹಿಗಳ ಸಂಖ್ಯೆ ದುಪ್ಪಟ್ಟು! 2050ರ ಹೊತ್ತಿಗೆ ವಿಶ್ವದ 1.3 ಬಿಲಿಯನ್​ ಜನರಲ್ಲಿ ಡಯಾಬಿಟೀಸ್​​

By

Published : Jun 23, 2023, 3:33 PM IST

ಇತ್ತೀಚೆಗೆ ಲ್ಯಾನ್ಸೆಟ್​​ನಲ್ಲಿ ಪ್ರಕಟವಾದ ಐಸಿಎಂಆರ್​​ ವರದಿ ಅನುಸಾರ ಭಾರತದಲ್ಲಿ 101 ಮಿಲಿಯನ್​ ಜನರು ಮಧುಮೇಹಕ್ಕೆ ತುತ್ತಾಗಿದ್ದಾರೆ.

The number of diabetics will double by 2050
The number of diabetics will double by 2050

ನ್ಯೂ ಯಾರ್ಕ್​: ಜಾಗತ್ತಿನಾದ್ಯಂತ ಅರ್ಧ ಬಿಲಿಯನ್​ಗೂ ಹೆಚ್ಚು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಪ್ರತಿ ದೇಶದಲ್ಲೂ ಪುರುಷರು, ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಎಲ್ಲ ವಯೋಮಿತಿಯ ಜನರು ಈ ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ತೊಂದರೆ ಮೂವತ್ತು ವರ್ಷದ ಬಳಿಕ ದುಪ್ಪಟ್ಟಾಗುವ ಸಾಧ್ಯತೆ ಇದ್ದು, 1.3 ಬಿಲಿಯನ್​ ಜನರು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಇದರ ಜೊತೆಗೆ ಪ್ರತಿ ದೇಶದಲ್ಲಿಯೂ ಡಯಾಬಿಟೀಸ್ ರೋಗಿಗಳು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ದಿ ಲ್ಯಾನ್ಸೆಟ್​​ ಜರ್ನಲ್​ ವರದಿ ಹೇಳುತ್ತದೆ.

ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ವರದಿ ಬೆನ್ನಲ್ಲೇ ಇದೀಗ ಜಾಗತಿಕ ಫಲಿತಾಂಶ ಹೊರಬಂದಿದೆ. ಲ್ಯಾನ್ಸೆಟ್​​ನಲ್ಲಿ ಪ್ರಕಟವಾದ ಐಸಿಎಂಆರ್​​ ವರದಿಯನುಸಾರ, ಭಾರತದಲ್ಲಿ 101 ಮಿಲಿಯನ್​ ಜನರಿಗೆ ಮಧುಮೇಹ ಬಾಧಿಸಿದೆ. 136 ಮಿಲಿಯನ್​ ಮಂದಿ ಪೂರ್ವ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ.

ಹೊಸ ಅಧ್ಯಯನಕ್ಕಾಗಿ, ಸಂಶೋಧಕರು 1990 ಮತ್ತು 2021 ರ ನಡುವೆ ವಯಸ್ಸು ಮತ್ತು ಲಿಂಗದ ಪ್ರಕಾರ 204 ದೇಶಗಳು ಮತ್ತು ಪ್ರಾಂತ್ಯಗಳಿಗೆ ಮಧುಮೇಹ ಹರಡುವಿಕೆ, ಅಸ್ವಸ್ಥತೆ ಮತ್ತು ಮರಣವನ್ನು ಪರೀಕ್ಷಿಸಲು ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (GBD) 2021 ಸಂಶೋಧನೆಗಳನ್ನು ಬಳಸಿದ್ದಾರೆ. 2050 ರವರೆಗೆ ಮಧುಮೇಹ ಹರಡುವಿಕೆಯನ್ನು ಅವರು ಮುನ್ಸೂಚಿಸಿದ್ದಾರೆ.

ಈ ಲೆಕ್ಕಾಚಾರವೂ ಪ್ರಸ್ತುತ ಜಾಗತಿಕ ಹರಡುವಿಕೆ ದರ ಶೇ 6.1ರಷ್ಟಿದೆ. ಅಲ್ಲದೇ, ಜಾಗತಿಕ ಸಾವು ಮತ್ತು ಅನಾರೋಗ್ಯಕ್ಕೆ ಕಾರಣವಾಗುವ ಪ್ರಮುಖ 10 ಕಾರಣದಲ್ಲಿ ಮಧುಮೇಹವೂ ಒಂದು. ಉತ್ತರ ಆಫ್ರಿಕಾ ಮತ್ತು ಮಧ್ಯ ಪೂರ್ವ ಮಧುಮೇಹದ ಅತಿ ಹೆಚ್ಚಿನ ದರ 9.3 ರಷ್ಟಿದೆ. ಈ ಸಂಖ್ಯೆ 2050ರಲ್ಲಿ 16.8ರಷ್ಟಿರಲಿದೆ. ಲ್ಯಾಟಿನ್​ ಅಮೆರಿಕ ಮತ್ತು ಕೆರೀಬಿಯನ್​ನ ದರ 11.3ಕ್ಕೆ ಹೆಚ್ಚಳವಾಗಲಿದೆ.

65 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚು: ಮಧುಮೇಹ ವಿಶೇಷವಾಗಿ 65 ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಜನರಲ್ಲಿ ಪ್ರತಿ ದೇಶದಲ್ಲಿಯೂ ಕಂಡು ಬರುತ್ತಿದೆ. ಜಾಗತಿಕವಾಗಿ ಪ್ರಾದೇಶಿಕ ಹರಡುವಿಕೆ ದರ ಶೇ 20ಕ್ಕಿಂತ ಹೆಚ್ಚಿದೆ. 75ರಿಂದ 79 ವಯೋಮಾನದ ಶೇ 24.4 ಮಂದಿಯಲ್ಲಿ ಅತಿ ಹೆಚ್ಚಿನ ಮಧುಮೇಹ ದರ ಇದೆ. ಈ ವಯೋಮಾನದ ಗುಂಪಿನಲ್ಲಿ ಅತಿ ಹೆಚ್ಚು ಮಧುಮೇಹ ದರ ಶೇ 39.4ರಷ್ಟು ಉತ್ತರ ಆಫ್ರಿಕಾ ಮತ್ತು ಮಿಡಲ್​ ಈಸ್ಟ್​​ನಲ್ಲಿ ಕಂಡುಬಂದಿದೆ. ಕೇಂದ್ರ ಯುರೋಪ್​, ಪೂರ್ವ ಯುರೋಪ್​ ಮತ್ತು ಕೇಂದ್ರ ಏಷ್ಯಾದಲ್ಲಿ ಮಧುಮೇಹ ದರ ಶೇ 19.8ರಷ್ಟಿದೆ.

ಬಹುತೇಕ ಜಾಗತಿಕ ಪ್ರಕರಣದಲ್ಲಿ ಟೈಪ್​ 2 ಮಧುಮೇಹ ಶೇ 96ರಷ್ಟಿದೆ. ಹೆಚ್ಚಿನ ದೇಹ ತೂಕ ಟೈಪ್​ 2 ಡಯಾಬಿಟೀಸ್​​ ಪ್ರಾಥಮಿಕ ಅಪಾಯ ಹೊಂದಿದೆ. ಇದು ಶೇ 52.2ರಷ್ಟು ಅಂಗವೈಕ್ಯಲ್ಯ ಮತ್ತು ಸಾವಿಗೆ ಕಾರಣವಾಗಿದೆ. ಪರಿಸರ ಮತ್ತು ಔದ್ಯೋಗಿಕ ಅಪಾಯ, ತಂಬಾಕು ಬಳಕೆ, ಕಡಿಮೆ ದೈಹಿಕ ಚಟುವಟಿಕೆ ಮತ್ತು ಆಲ್ಕೋಹಾಲ್​ ಬಳಕೆ ಇದಕ್ಕೆ ಪ್ರಮುಖ ಕಾರಣವಾಗುತ್ತಿದೆ.

ಮಧುಮೇಹ ದರ ಹೆಚ್ಚಳ ಕೇವಲ ಎಚ್ಚರಿಕೆ ಗಂಟೆ ಅಲ್ಲದೆ, ಜಾಗತಿಕ ಆರೋಗ್ಯ ವ್ಯವಸ್ಥೆಗೂ ಸವಾಲಾಗಿದೆ. ವಿಶೇಷವಾಗಿ, ಈ ಸಮಸ್ಯೆ ಹೃದಯ ಮತ್ತು ಸ್ಟ್ರೋಕ್​ ಸಮಸ್ಯೆಯ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಅಧ್ಯಯನದ ಪ್ರಮುಖ ಸಂಶೋಧಕ ಡಾ. ಲಿಯನ್​ ಒಂಗ್​ ತಿಳಿಸಿದ್ದಾರೆ.

ಸಾಮಾನ್ಯ ಜನರು ಈ ಟೈಪ್​ 2 ಡಯಾಬಿಟೀಸ್​ ಸ್ಥೂಲಕಾಯ, ಕಡಿಮೆ ವ್ಯಾಯಾಮ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯೊಂದಿಗೆ ಸಂಬಂದ ಹೊಂದಿದೆ ಎಂದು ನಂಬಿದ್ದಾರೆ. ಈ ಮಧುಮೇಹವನ್ನು ನಿಯಂತ್ರಿಸುವುದು ಮತ್ತು ತಡೆಯುವುದು ಅನೇಕ ಅಂಶಗಳಿಂದ ಕಷ್ಟ ಸಾಧ್ಯವಾಗಿದೆ. ಇದು ವಂಶವಾಹಿನಿ ಜೊತೆಗೆ ದೇಶದ ರಚನಾತ್ಮಕ ವ್ಯವಸ್ಥೆಯಲ್ಲಿ, ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ- ಆದಾಯದ ದೇಶಗಳಲ್ಲಿ ಲಾಜಿಸ್ಟಿಕಲ್, ಸಾಮಾಜಿಕ ಮತ್ತು ಆರ್ಥಿಕ ಅಡೆತಡೆಗಳನ್ನು ಒಳಗೊಂಡಿದೆ.

ಇದನ್ನೂ ಓದಿ: Diabetes high BP: ಭಾರತದಲ್ಲಿ 315 ಮಿಲಿಯನ್​ ಮಂದಿಗೆ ಅಧಿಕ ರಕ್ತದೊತ್ತಡ; 101 ಮಿಲಿಯನ್ ಜನರಿಗೆ ಮಧುಮೇಹ ಬಾಧೆ! ICMR​ ಅಧ್ಯಯನ ವರದಿ

ABOUT THE AUTHOR

...view details