ತ್ವಚೆ ಕಾಳಜಿ ಎಂಬುದು ಕೇವಲ ಹೆಣ್ಣು ಮಕ್ಕಳ ಆದ್ಯತೆ ವಿಷಯ ಮಾತ್ರವಲ್ಲ. ಇದಕ್ಕೆ ಪುರುಷರು ಅರ್ಹರಾಗಿದ್ದಾರೆ. ಅವರ ತ್ವಚೆ ಆರೈಕೆ ಇಂದು ಕೇವಲ ಹರ್ಬಲ್ ಸೋಪ್ ಮತ್ತು ಶೇವಿಂಗ್ಗೆ ಮಾತ್ರ ಸೀಮಿತವಾಗಿಲ್ಲ. ಶಾಖ ಹೆಚ್ಚಳ ಮತ್ತು ಮಾಲಿನ್ಯದಿಂದಾಗಿ ಅವರ ತ್ವಚೆಯ ಸ್ವ ಆರೈಕೆ ವೇಗದ ಜೀವನ ಭಾಗವಾಗಿದ್ದು, ಅವರಲ್ಲಿ ಈ ಬಗ್ಗೆ ಹೆಚ್ಚಿನ ಕಾಳಜಿ ಮೂಡಿಸಿದೆ. ಇಂದಿನ ದಿನದಲ್ಲಿ ಪುರುಷರು ಸ್ವ ಆರೈಕೆ ಮತ್ತು ಅಲಂಕಾರದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಅಲ್ಲದೇ ತಮ್ಮ ತ್ವಚೆಯ ಬೇಡಿಕೆ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ.
ದೈನಂದಿನ ತ್ವಚೆಯ ದಿನಚರಿಯನ್ನು ವಿರಾಮಗೊಳಿಸಿ ಉತ್ತೇಜಿಸಿ, ಆನಂದಿಸಲು ಇದು ಸೂಕ್ತ ಸಮುಯವಾಗಿದೆ ಪುರುಷರ ತ್ವಚೆಯ ಆಡಳಿತವನ್ನು ಅಭ್ಯಾಸ ಮಾಡುವುದು ಸ್ವಯಂ-ಆರೈಕೆ ಮತ್ತು ಪ್ರೀತಿಗೆ ಅತ್ಯಗತ್ಯ. ನಿಮ್ಮ ದೈನಂದಿನ ತ್ವಚೆ ಕಾಳಜಿವಹಿಸಲು ಕೆಲವು ಸಲಹೆಗಳು ಇಲ್ಲಿದೆ.
ಶುದ್ಧಿ: ಬಿಡುವಿಲ್ಲದ ಜೀವನಶೈಲಿ, ಹೆಚ್ಚಿನ ಕೆಲಸದ ಒತ್ತಡ ಅಥವಾ ದೈನಂದಿನ ಒತ್ತಡಕ್ಕೆ ಸ್ನಾನ ಉತ್ತಮ ನಿವಾರಣೆ ನೀಡಬಲ್ಲದು. ದಿನದ ಆರಂಭದಲ್ಲಿ ಹೊಸ ಉತ್ಸಾಹ ಅಥವಾ ವಿಶ್ರಾಂತಿ ಪಡೆಯುವ ಮುನ್ನ ಉತ್ತಮ ಸ್ನಾನ ಮುದ ನೀಡುತ್ತದೆ.
ಸನ್‌ಸ್ಕ್ರೀನ್: ಮನೆಯಿಂದ ಹೊರ ಹೋಗಬೇಕಾದರೆ ಮಾತ್ರ ಸನ್‌ಸ್ಕ್ರೀನ್ ಬಳಕ ಮಾಡಬೇಕು ಎಂಬುದು ತಪ್ಪು ಕಲ್ಪನೆ. ಸನ್‌ಸ್ಕ್ರೀನ್ ಹಾನಿಕಾರಕ ಮಾಲಿನ್ಯದಿಂದ ರಕ್ಷಣೆ ನೀಡುವಲ್ಲಿ ಹೊಸ ಪದರವನ್ನು ತ್ವಚೆಗೆ ನೀಡುತ್ತದೆ. ಸರಿಯಾದ ಸನ್‌ಸ್ಕ್ರೀನ್ ಬಳಕೆ ಅಗತ್ಯ. ಧೂಳು, ಬೂದಿ ಮತ್ತು ಪರಾಗದಂತಹ ಮಾಲಿನ್ಯದ ಕಣಗಳು ಸರಾಸರಿ ಚರ್ಮದ ರಂಧ್ರಕ್ಕಿಂತ ಚಿಕ್ಕದಾಗಿದೆ ಮತ್ತು ಚರ್ಮದ ಮೇಲಿನ ಎಣ್ಣೆಗೆ ಅಂಟಿಕೊಳ್ಳುತ್ತವೆ. ಇದರಿಂದಾಗಿ ರಂಧ್ರಗಳು ಮತ್ತು ಬಿರುಕುಗಳು ನಿರ್ಬಂಧಿಸಲ್ಪಡುತ್ತವೆ. ನಿಮ್ಮ ಸನ್‌ಸ್ಕ್ರೀನ್ ಎಣ್ಣೆಯುಕ್ತವಲ್ಲ ಮತ್ತು ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾಗಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ.