ಹೈದರಾಬಾದ್: ಪಾರ್ಶ್ವವಾಯು ಎಂದರೆ ಸಾಮಾನ್ಯವಾಗಿ ಹಿರಿಯರನ್ನು ಕಾಡುವ ಸಮಸ್ಯೆ ಎಂದು ಭಾವಿಸುತ್ತೇವೆ. ಆದರೆ, ಇಂದು ಈ ಸಮಸ್ಯೆ ಯುವ ಜನತೆಯನ್ನು ಕಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಕುರಿತು ಅನೇಕ ವರದಿಗಳು ಆಗುತ್ತಿದ್ದು, ಇತ್ತೀಚಿನ ದೆಹಲಿ ಏಮ್ಸ್ ಬಿಡುಗಡೆ ಮಾಡಿದ ಅಂಕಿ - ಅಂಶಗಳು ಮತ್ತಷ್ಟು ಚಿಂತಿಸುವಂತೆ ಮಾಡಿದೆ.
ವರದಿ ಪ್ರಕಾರ, ಏಮ್ಸ್ನಲ್ಲಿ 100ರಲ್ಲಿ ಎರಡು ಬ್ರೈನ್ಸ್ ಸ್ಟ್ರೋಕ್ ಪ್ರಕರಣಗಳು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಂಡು ಬರುತ್ತಿದೆ. ಅಲ್ಲದೇ ಪಾರ್ಶ್ವವಾಯುಗೆ ತುತ್ತಾದ 300ರಲ್ಲಿ 77 ಮಂದಿ 21ರಿಂದ 45 ವರ್ಷದ ಒಳಗಿನವರಾಗಿದ್ದಾರೆ. ಶೇ 25ರಷ್ಟು ಯುವ ಜನತೆ ಈ ಪಾರ್ಶ್ವವಾಯುಗೆ ಗುರಿಯಾಗುತ್ತಿದ್ದಾರೆ. ತೆಲಂಗಾಣದ ನಿಮ್ಸ್, ಗಾಂಧಿ ಮತ್ತು ಉಸ್ಮಾನಿಯಾ ಆಸ್ಪತ್ರೆಗಳಿಂದ ಬರುತ್ತಿರುವ ಇಂತಹ ಪ್ರಕರಣದಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳು ಕಂಡು ಬರುತ್ತಿದ್ದಾರೆ. ಶೇ 15ರಷ್ಟು ರೋಗಿಗಳು ಯುವ ವಯುಸ್ಸಿನವರಾಗಿದ್ದಾರೆ. ಈ ಪಾರ್ಶ್ವವಾಯುವಿನಿಂದ ಶೇ 30ರಷ್ಟು ರೋಗಿಗಳು ಶಾಶ್ವತವಾಗಿ ಅಂಗವೈಕಲ್ಯತೆಗೆ ಗುರಿಯಾಗುತ್ತಿದ್ದಾರೆ.
ಬ್ರೈನ್ ಸ್ಟ್ರೋಕ್ ಕಾರಣ:ಅಧಿಕ ರಕ್ತದೊತ್ತಡವೂ ಬ್ರೈನ್ ಸ್ಟ್ರೋಕ್ಗೆ ಪ್ರಮುಖ ಕಾರಣವಾಗಿರುವ ಅಂಶವಾಗಿದೆ. ಅನೇಕ ಮಂದಿ ತಮ್ಮ ರಕ್ತದ ಒತ್ತಡವನ್ನು ಪ್ರತಿ ವರ್ಷ ಪರೀಕ್ಷೆ ಮಾಡುವುದಿಲ್ಲ. ಅನೇಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೂ ಈ ಬಗ್ಗೆ ಅವರಿಗೆ ತಿಳಿಯದ ಕಾರಣ ಇದು. ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ, ಈ ಕುರಿತು ಸೂಕ್ತ ಚಿಕಿತ್ಸೆಗೆ ಅಥವಾ ತಡೆಗಟ್ಟುವ ಕ್ರಮಕ್ಕೆ ಅವರು ಮುಂದಾಗುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮೂರರಲ್ಲಿ ಒಬ್ಬರು ವಯಸ್ಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ.