ರಾತ್ರಿ ಕಣ್ತುಂಬ ಉತ್ತಮ ನಿದ್ದೆ ಮಾಡುವ ಸುಖವನ್ನು ಯಾರು ಕೂಡ ಬೇಡ ಅನ್ನುವುದಿಲ್ಲ. ಆದರೆ, ಕೆಲಸದ ಒತ್ತಡ ಮತ್ತು ಇತರ ಸಮಸ್ಯೆಗಳು ನಿದ್ದೆಗೆ ತೊಡಕಾಗುವಂತೆ ಮಾಡುತ್ತದೆ. ಈ ನಿದ್ದೆ ಸಮಸ್ಯೆ ಪುರುಷರಿಗೆ ಹೋಲಿಕೆ ಮಾಡಿದಾಗ ಸ್ತ್ರೀಯರಲ್ಲಿ ಹೆಚ್ಚು. ಆರೋಗ್ಯ ಸಮಸ್ಯೆ ಕಾರಣ ಹೊರತಾಗಿ ಕೆಲವು ಉತ್ತಮ ಜೀವನಶೈಲಿ ರೂಢಿಸಿಕೊಳ್ಳುವ ಮೂಲಕ ಈ ಸಮಸ್ಯೆ ನಿವಾರಣೆಯನ್ನು ಪಡೆಯಬಹುದು. ಉತ್ತಮ ನಿದ್ರೆಗಾಗಿ ನಿರ್ದಿಷ್ಟ ಸಮಯವನ್ನು ಮೀಸಲಿಡಬೇಕು. ನಿರ್ದಿಷ್ಟ ಸಮಯದಲ್ಲಿ ಉತ್ತಮ ನಿದ್ದೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು.
ಉತ್ತಮ ಗಾಢವಾದ ನಿದ್ರೆಗೆ ಮೆಲೆಟೊನಿನ್ ಹಾರ್ಮೋನ್ ಅಗತ್ಯ. ಇದು ಮಲಗುವ ವಾತಾವರಣ ಅಥವಾ ಕೋಣೆ ಸಂಪೂರ್ಣ ಕತ್ತಲಾಗಿದ್ದಾರೆ ಇದು ಉತ್ತೇಜನಗೊಳ್ಳುತ್ತದೆ. ಎಂದರೆ, ಮಲಗುವಾಗ ಯಾವುದೇ ಟಿವಿ, ಕಂಪ್ಯೂಟರ್ ಮತ್ತು ಫೋನ್ ಸ್ಕ್ರೀನ್ ಇಲ್ಲದೇ ಮಲಗುವುದರಿಂದ ಆರಾಮದಾಯಕ ಉತ್ತಮ ನಿದ್ರೆಯನ್ನು ನೀವು ಮಾಡಬಹುದು.
ಕೊಠಡಿಯ ತಾಪಮಾನ ಕೂಡ ಮುಖ್ಯ: ಅನೇಕರು ರಾತ್ರಿ ತಾಪಮಾನದ ಬಗ್ಗೆ ಅಷ್ಟೊಂದು ಮಹತ್ವ ನೀಡುವುದಿಲ್ಲ. ಆದರೆ, ನಿದ್ರೆ ವಿಚಾರದಲ್ಲಿ ಇದು ಅವಶ್ಯಕತೆ ಹೊಂದಿದೆ. ತೀರ ಚಳಿ ಅಥವಾ ತೀರ ಬಿಸಿಲಿನ ವಾತಾವರಣ ಕೂಡ ನಿಮ್ಮ ನಿದ್ದೆಗೆ ಭಂಗ ತರುತ್ತದೆ. ಜೊತೆಗೆ ಮಲಗುವ ಕೋಣೆಯಲ್ಲಿ ಯಾವುದೆ ಕಿರಿಕಿರಿ ಮಾಡುವ ವಾಸನೆ ಅಂಶ ಇಲ್ಲದೇ ಇರುವಂತೆ ನೋಡಿಕೊಳ್ಳುವುದು ಅವಶ್ಯ. ಕಾರ್ಪೂರ ಅಥವಾ ಸಾಂಬ್ರಾಣಿ, ಮಲ್ಲಿಗೆ ಸುಂಗಂಧಗಳು ಕೂಡ ನಿಮ್ಮ ನಿದ್ದೆಗೆ ಭಂಗ ತರುತ್ತದೆ.