ಕರ್ನಾಟಕ

karnataka

ETV Bharat / sukhibhava

ದೇಶದಲ್ಲಿ ಹರಡುತ್ತಿರುವ ಜೆಎನ್​.1 ತಳಿ; ಬೂಸ್ಟರ್ ಲಸಿಕೆ​ ಅಗತ್ಯವಿಲ್ಲ ಎಂದ ತಜ್ಞರು

COVID booster vaccination: ಈ ಸೋಂಕು ಕಡಿಮೆ ಅಪಾಯಕಾರಿಯಾಗಿದ್ದು, ಬೂಸ್ಟರ್​ ಲಸಿಕೆಯ ಅಗತ್ಯ ಎದುರಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

no need of booster vaccination for JN1
no need of booster vaccination for JN1

By ETV Bharat Karnataka Team

Published : Dec 28, 2023, 11:18 AM IST

ನವದೆಹಲಿ: ಭಾರತದಲ್ಲಿ ಕೋವಿಡ್​ 19ನ ಓಮಿಕ್ರಾನ್​ ಉಪತಳಿಯ ಜೆಎನ್​.1 ಸೋಂಕು ವೇಗವಾಗಿ ಹರಡುತ್ತಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಈ ಹಿನ್ನೆಲೆ ಬೂಸ್ಟರ್​ ಲಸಿಕೆ ಅವಶ್ಯವಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ಕುರಿತು ಮಾತನಾಡಿರುವ ಆರೋಗ್ಯ ತಜ್ಞರು, ಸದ್ಯ ಬೂಸ್ಟರ್​ ಲಸಿಕೆಯ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಮೊದಲ ಬಾರಿಗೆ ಆಗಸ್ಟ್​​ನಲ್ಲಿ ಲಕ್ಸೆಂಬರ್ಗ್​​ನಲ್ಲಿ ಪತ್ತೆಯಾದ ಜೆಎನ್​.1 ಸೋಂಕು ಪ್ರಸ್ತುತ ಭಾರತ ಸೇರಿದಂತೆ 41 ದೇಶಗಳಲ್ಲಿ ಕಂಡು ಬಂದಿದೆ. ಇದು ವೇಗವಾಗಿ ಹರಡುತ್ತಿರುವ ಹಿನ್ನೆಲೆ ಇದನ್ನು ವೆರಿಯಂಟ್​ ಆಫ್​ ಇಂಟ್ರೆಸ್ಟ್​​ ಎಂದು ವಿಶ್ವ ಆರೋಗ್ಯ ಸಂಸ್ಥೆ ವರ್ಗೀಕರಿಸಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಅನುಸಾರ ಡಿಸೆಂಬರ್​ 26ರ ವರೆಗೆ ದೇಶದಲ್ಲಿ ಒಟ್ಟು 109 ಜೆಎನ್​.1 ಪ್ರಕರಣಗಳು ಕಂಡು ಬಂದಿದ್ದು, ಪ್ರಮುಖವಾಗಿ ಗುಜರಾತ್​​, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ, ರಾಜಸ್ಥಾನ್​, ತಮಿಳುನಾಡು ಮತ್ತು ತೆಲಂಗಾಣದಲ್ಲಿದೆ.

ಈ ಕುರಿತು ಮಾತನಾಡಿರುವ ಮಣಿಪಾಲ್​ ಆಸ್ಪತ್ರೆ ಮಿಲ್ಲರ್ಸ್​ ರಸ್ತೆಯ ಇಂಟರ್ನಲ್​ ಮೆಡಿಸಿನ್​ ವೈದ್ಯ ಡಾ ಪ್ರಮೋದ್​ ವಿ ಸತ್ಯ, ಪ್ರಸ್ತುತ ಲಸಿಕೆಗಳು ಜೆಎನ್​.1 ತಳಿಯ ಸೋಂಕನ್ನು ತಡೆಯುವುದಿಲ್ಲ. ಈ ಸೋಂಕು ಕಡಿಮೆ ಅಪಾಯಕಾರಿಯಾಗಿದ್ದು, ಬೂಸ್ಟರ್​ ಲಸಿಕೆಯ ಅಗತ್ಯ ಎದುರಾಗಿಲ್ಲ ಎಂದಿದ್ದಾರೆ.

ಜೆಎನ್​.1 ಸೋಂಕು ಓಮಿಕ್ರಾನ್​ ತಳಿಯ ಉಪ ತಳಿಯಾಗಿದೆ. ಎರಡು ವರ್ಷಗಳ ಹಿಂದೆ ತೆಗೆದುಕೊಂಡಿದ್ದ ಲಸಿಕೆಯು ತೀವ್ರವಾದ ಓಮಿಕ್ರಾನ್ ರೂಪಾಂತರಗಳಿಂದ ರಕ್ಷಿಸುತ್ತದೆ. ಹೊಸ ಜೆಎನ್​.1 ರೂಪಾಂತರವೂ ಗಂಭೀರ ಅನಾರೋಗ್ಯವನ್ನು ಉಂಟು ಮಾಡುವ ಅಪಾಯವಿಲ್ಲ. ಇದು ಶ್ವಾಸಕೋಶದ ಮೇಲ್ಬಾಗದಲ್ಲಿ ಸೋಂಕಿನ ಅನಾರೋಗ್ಯ ಉಂಟು ಮಾಡುತ್ತದೆ. ಈ ಹಿನ್ನಲೆ ಆತಂಕ ಪಡುವ ಅಥವಾ ಬೂಸ್ಟರ್​ ​ಡೋಸ್ ಪಡೆಯುವ ಅವಶ್ಯಕತೆ ಇಲ್ಲ​ ಎಂದಿದ್ದಾರೆ.

ಕೋವಿಡ್ ಪ್ರಕರಣಗಳ ಉಲ್ಬಣ ಮತ್ತು ಜೆಎನ್.1 ಸೋಂಕುಗಳ ಹೆಚ್ಚಳದ ಹೊರತಾಗಿಯೂ ಸಾರ್ವಜನಿಕರಿಗೆ ಬೂಸ್ಟರ್​ ಡೋಸ್​ ಅಥವಾ ಮುನ್ನೆಚ್ಚರಿಕೆ ಡೋಸ್​ ನೀಡುವ ಅವಶ್ಯಕತೆಯನ್ನು ಆರೋಗ್ಯ ಸಚಿವಾಲಯವೂ ತಳ್ಳಿ ಹಾಕಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅನುಸಾರ, ಈ ವರ್ಷದ ಡಿಸೆಂಬರ್​ 21ರವರೆಗೆ 2,20,67 ಕೋಟಿ ಕೋವಿಡ್​ ಲಸಿಕೆ ನೀಡಲಾಗಿದೆ. 22.88 ಕೋಟಿ ಬೂಸ್ಟರ್​ ಲಸಿಕೆಯನ್ನು ಅರ್ಹ ವಯಸ್ಕರಿಗೆ ನೀಡಲಾಗಿದೆ. ದೇಶದಲ್ಲಿನ ಶೇ 97ರಷ್ಟು ಅರ್ಹ ನಾಗರಿಕರು ಕೋವಿಡ್​ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಶೇ 90ರಷ್ಟು ಮಂದಿ ಎರಡನೇ ಡೋಸ್​​ ಲಸಿಕೆ ಪಡೆದಿದ್ದಾರೆ ಎಂದು ದತ್ತಾಂಶ ತಿಳಿಸಿದೆ.

ಕೋವಿಡ್‌ನ ಜೆಎನ್.1 ತಳಿಯು ವೇಗವಾಗಿ ಹರಡುತ್ತಿದೆ. ಆದರೆ ಈ ಬಗ್ಗೆ ಚಿಂತೆ ಬೇಡ. ಕೋವಿಡ್ ಲಸಿಕೆಯು ಕೋವಿಡ್ ವಿರುದ್ಧ ಪ್ರತಿರಕ್ಷೆಯನ್ನು ನೀಡಿದ್ದು, ಅದರ ಉಪತಳಿ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಹಿನ್ನಲೆ ಜೆಎನ್​.1 ಸೋಂಕಿಗೆ ಹೆಚ್ಚುವರಿ ಬೂಸ್ಟರ್​ ಡೋಸ್​ ಪಡೆಯುವ ಅಗತ್ಯವಿಲ್ಲ ಎಂದು ಸಿಕೆ ಬಿರ್ಲಾ ಆಸ್ಪತ್ರೆಯ ಡಾ ರವೀಂದ್ರ ಗುಪ್ತಾ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಭವಿಷ್ಯದ ಸಾಂಕ್ರಾಮಿಕತೆಗೆ ಜಾಗತಿಕ ಸಿದ್ಧತೆ ಅವಶ್ಯ; ವಿಶ್ವಸಂಸ್ಥೆ ಮುಖ್ಯಸ್ಥರ ಕರೆ

ABOUT THE AUTHOR

...view details