ನವದೆಹಲಿ: ಈಗಾಗಲೇ ಕೋವಿಡ್ 19ನಂತಹ ಮಾರಣಾಂತಿಕ ಸಾಂಕ್ರಾಮಿಕ ಕಂಡ ಜಗತ್ತು ಭವಿಷ್ಯದಲ್ಲಿ ಅದಕ್ಕಿಂತಲೂ ಹೆಚ್ಚಿನ ಗೊತ್ತಿಲ್ಲದೇ ಇರುವ ವೈರಸ್‌ಗಳ ಅಪಾಯ ಎದುರಿಸಲಿದೆ. ಇವು ಸ್ಪಾನಿಷ್ ಜ್ವರದಂತೆ 50 ಮಿಲಿಯನ್ ಜನರನ್ನು ಕೊಲ್ಲಲಿದೆ ಎಂದು ಯುಕೆ ವಾಕ್ಸಿನ್ ಟಾಸ್ಕ್ಫೋರ್ಸ್ನ ಮಾಜಿ ಅಧ್ಯಕ್ಷ ಕೇಟ್ ಬಿಂಗ್ ಹ್ಯಾಮ್ ತಮ್ಮ ಹೊಸ ಪುಸ್ತಕದಲ್ಲಿ ತಿಳಿಸಿದ್ದಾರೆ.
ಈ ಪುಸ್ತಕದ ಸಹಲೇಖಕರು ಮತ್ತೊಬ್ಬ ಲಸಿಕೆ ತಜ್ಞ ಟಿಮ್ ಹ್ಯಾಮೆಸ್. ಇದರಲ್ಲಿನ ಪ್ರಮುಖ ಅಂಶಗಳನ್ನು ಡೈಲಿ ಮೇಲ್ನಲ್ಲಿ ಪ್ರಕಟಿಸಲಾಗಿದ್ದು, ಭವಿಷ್ಯದ ಸಾಂಕ್ರಾಮಿಕತೆಗೆ ಸಿದ್ದತೆ ನಡೆಸುವಂತೆ ಕರೆ ನೀಡಲಾಗಿದೆ.
1918-19 ರಲ್ಲಿ ಕಂಡುಬಂದ ಜ್ವರದ ಸಾಂಕ್ರಾಮಿಕತೆಯಿಂದ ಪ್ರಪಂಚದಾದ್ಯಂತ 50 ಮಿಲಿಯನ್ ಜನರು ಸಾವನ್ನಪ್ಪಿದ್ದರು. ಇದರ ಸಾವಿನ ಪ್ರಮಾಣ ಮೊದಲ ವಿಶ್ವ ಯುದ್ಧಕ್ಕಿಂತ ಎರಡು ಪಟ್ಟು ಹೆಚ್ಚಿದೆ ಎಂದರು.
ಇಂದೂ ಕೂಡ ಪ್ರಸ್ತುತ ಅಸ್ತಿತ್ವದಲ್ಲಿರುವ ಅನೇಕ ವೈರಸ್ಗಳಿಂದ ಇದೇ ರೀತಿಯ ಸಾವಿನ ಪ್ರಮಾಣವನ್ನು ಕಾಣಬಹುದು. ಪ್ರಸ್ತುತ ಅಸ್ತಿತ್ವದಲ್ಲಿರುವ ಈ ವೈರಸ್ಗಳು ಸಾಕಷ್ಟು ಪುನರಾವರ್ತಿತವಾಗುತ್ತಿದ್ದು, ಹೆಚ್ಚು ರೂಪಾಂತರಗೊಳ್ಳುತ್ತಿವೆ. ಇವೆಲ್ಲವೂ ಮನುಷ್ಯರಿಗೆ ಅಪಾಯವನ್ನುಡು ಮಾಡುವುದಿಲ್ಲ. ಆದರೆ, ಕೆಲವು ಇದಕ್ಕೆ ಹೊರತಾಗಿಲ್ಲ.
ತಜ್ಞರು ಹೇಳುವಂತೆ, ಸಾಂಕ್ರಾಮಿಕತೆ ಹುಟ್ಟು ಹಾಕಲು ಅನೇಕ ವಿಭಿನ್ನ ವೈರಸ್ಗಳು ಹುಟ್ಟಿಕೊಳ್ಳಬಹುದು. ಈ ವೈರಸ್ಗಳು ಒಂದರಿಂದ ಒಂದಕ್ಕೆ ಹರಡುವ ಹೆಚ್ಚು ರೂಪಾಂತರಗೊಳ್ಳುವ ಅಪಾಯವೂ ಇದೆ. ಇಲ್ಲಿಯವರೆಗೆ ವಿಜ್ಞಾನಿಗಳು 25 ವೈರಸ್ ಕುಟುಂಬಗಳ ಬಗ್ಗೆ ಅರಿವು ಹೊಂದಿದ್ದಾರೆ. ಅಲ್ಲದೇ ಮುಂದಿನ ಸಾಂಕ್ರಾಮಿಕತೆಯ ಬೆದರಿಕೆಯನ್ನು ಹೊಂದಿದೆ ಎಂದು ಎಚ್ಚರಿಸಿದ್ದಾರೆ. ಸದ್ಯ ಜಾಗತಿಕವಾಗಿ ಎಕ್ಸ್ ರೋಗವೂ ಹೆಚ್ಚು ಕಾಳಜಿ ಹೊಂದಿದೆ.