ನ್ಯೂಯಾರ್ಕ್: ಹೊಸದಾಗಿ ತಂದೆ-ತಾಯಿಯ ಜವಾಬ್ದಾರಿಯನ್ನು ಹೊರುವ ಅನೇಕ ಪೋಷಕರಿಗೆ ತಮ್ಮ ನವಜಾತ ಶಿಶುಗಳ ಆರೈಕೆ ಅಥವಾ ಮಗುವಿನ ನಿದ್ರೆ, ಆಹಾರ ತಿನ್ನಿಸುವಿಕೆ, ಶೌಚ ಅಭ್ಯಾಸಗಳನ್ನು ರೂಢಿಸಲು ಅವರು ಹೆಚ್ಚಾಗಿ ಸಾಮಾಜಿಕ ಜಾಲತಾಣದ ಮೊರೆ ಹೋಗುತ್ತಾರೆ ಎಂಬುದು ಹೊಸ ಅಧ್ಯಯನದಲ್ಲಿ ಬಯಲಾಗಿದೆ.
ಯುಎಸ್ ರಾಷ್ಟ್ರೀಯ ಮತಚಲಾವಣೆಯಲ್ಲಿ 0-4 ವರ್ಷದ ಮಕ್ಕಳನ್ನು ಹೊಂದಿರುವ 614 ಮಂದಿ ಭಾಗಿದಾರರ ಸಮೀಕ್ಷೆ ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. ಈ ವೇಳೆ ಐದರಲ್ಲಿ ನಾಲ್ವರು ಪೋಷಕರು ಪೋಷಕತ್ವ ವಿಚಾರ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಅರ್ಧದಷ್ಟು ಪೋಷಕರು ಸಾಮಾಜಿಕ ಮಾಧ್ಯಮಗಳ ಬಳಕೆ ಹೊಸ ಆಲೋಚನೆಗಳನ್ನು ಪ್ರಯತ್ನಿಸಲು ಪ್ರಯೋಜಕಾರಿಯಾಗಿದೆ ಎಂದಿದ್ದಾರೆ. ಅನೇಕ ಪೋಷಕರು ಆರೋಗ್ಯ ವೃತ್ತಿಪರರರನ್ನು ಕೇಳುವುದಕ್ಕಿಂತ ಸುಲಭವಾಗಿ ಬೇಗ ಆನ್ಲೈನ್ ಸಂವಹನ ಮೂಲಕ ಪೋಷಕತ್ವದ ಸವಾಲುಗಳ ಕುರಿತಾದ ಸಲಹೆ ಅಥವಾ ಚರ್ಚೆಗಳನ್ನು ನಡೆಸಬಹುದು ಎಂದಿದ್ದಾರೆ ಎಂದು ಮೋಟ್ ಫೋನ್ ಸಹ ನಿರ್ದೇಶಕ ಸರಹ್ ಕ್ಲಾರ್ಕ್ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳು ಪೋಷಕತ್ವಕ್ಕೆ ಪ್ರಯೋಜನ ನೀಡಬಹುದು. ಆದರೆ ಪ್ರತಿ ಕುಟುಂಬದ ಅನುಭವ ವಿಭಿನ್ನವಾಗಿರುತ್ತದೆ. ಆನ್ಲೈನ್ ಮೂಲಕ ಕೇಳಲಾದ ಎಲ್ಲವೂ ನಿಖರವಾಗಿರುವುದಿಲ್ಲ. ಅಥವಾ ಮಕ್ಕಳಿಗೆ ಎಲ್ಲವೂ ಸರಿಯಾಗುವುದು ಇಲ್ಲ ಎಂದಿದ್ದಾರೆ.
ಬಹುತೇಕ ತಾಯಂದಿರು ಮತ್ತು ಮೂರನೇ ಎರಡರಷ್ಟು ತಂದೆಯಂದಿರುವ ಪೋಷಕತ್ವದ ಸಲಹೆ ಅಥವಾ ಅನುಭವ ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮವನ್ನು ನೋಡುತ್ತಾರೆ.
ಈ ವಿಷಯ ಹೆಚ್ಚು ಚರ್ಚಿತ: ಇನ್ನು, ಸಾಮಾಜಿಕ ಜಾಲತಾಣದಲ್ಲಿ ಬಹುತೇಕ ಚರ್ಚೆಯಾಗುವ ವಿಚಾರಗಳು ಎಂದರೆ ಶೌಚದ ತರಬೇತಿ (ಶೇ 44ರಷ್ಟು), ಮಲಗಿಸುವಿಕೆ (42ರಷ್ಟು) ಪೋಷಕಾಂಶ/ ಎದೆಹಾಲುಣಿಸುವಿಕೆ (37ರಷ್ಟು), ಶಿಸ್ತು (37ರಷ್ಟು), ನಡವಳಿಕೆ ಸಮಸ್ಯೆ (33ರಷ್ಟು), ಲಸಿಕೆ (26ರಷ್ಟು), ಡೇಕೇರ್ / ಪ್ರಿಸ್ಕೂಲ್ (24ರಷ್ಟು).