ನವದೆಹಲಿ: ಕೋವಿಡ್ 19 ಬಳಿಕ ಅದರ ಉಪತಳಿಗಳು ಪತ್ತೆಯಾಗುತ್ತಲೇ ಇದೆ. ಇದೀಗ ಸಾರ್ಸ್ ಕೋವ್ 2ನ ಹೊಸ ಉಪತಳಿ ಪತ್ತೆಯಾಗಿದೆ. ಬ್ರಿಟನ್, ಯುರೋಪ್ ಸೇರಿದಂತೆ ಹಲವೆಡೆ ಪತ್ತೆಯಾಗಿರುವ ಈ ಹೊಸ ತಳಿ ಕುರಿತು ಪ್ರಧಾನಮಂತ್ರಿಗಳ ಸಚಿವಾಲಯ ಮುನ್ನೆಚ್ಚರಿಕೆ ವಹಿಸಿದ್ದು, ಈ ಸಂಬಂಧ ಪರಿಸ್ಥಿತಿ ಅವಲೋಕನ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿದೆ.
ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿಯಾದ ಪಿಕೆ ಮಿಶ್ರಾ, ನೇತೃತ್ವದಲ್ಲಿ ಸಂಬಂಧಿಸಿದ ಅಧಿಕಾರಿಗಳಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಜಾಗತಿಕ ಮತ್ತು ರಾಷ್ಟ್ರ ಮಟ್ಟದಲ್ಲಿನ ಕೋವಿಡ್ ಪರಿಸ್ಥಿತಿಗಳ ಕುರಿತು ಅವಲೋಕನ ನಡೆಸಲಾಯಿತು. ಇದೇ ವೇಳೆ, ಹೊಸ ಉಪ ತಳಿಯು ಸಾರ್ವಜನಿಕ ಆರೋಗ್ಯದ ಮೇಲೆ ಬೀರುವ ಪರಿಣಾಮ ಕುರಿತು ಚರ್ಚಿಸಲಾಯಿತು.
ಕಳೆದ ಏಳು ದಿನಗಳಿಂದ ಜಾಗತಿಕವಾಕವಾಗಿ 2,96,219 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಇದು ಸುಮಾರು ಜಾಗತಿಕ ಜನಸಂಖ್ಯೆಯ ಶೇ 17ರಷ್ಟಿದೆ. ಭಾರತದಲ್ಲಿ ನಿತ್ಯ ಹೊಸ ಕೋವಿಡ್ ಪ್ರಕರಣಗಳು ಕೇವಲ 50ಕ್ಕಿಂತ ಕಡಿಮೆ ದಾಖಲಾಗುತ್ತಿದೆ. ವಾರದ ಕೋವಿಡ್ ಪಾಸಿಟಿವ್ ಪ್ರಕರಣಗಳು ಶೇ 0.2ಕ್ಕಿಂತ ಕಡಿಮೆ ಇದೆ. ಇದೇ ವೇಳೆ, ಭಾರತದಲ್ಲಿರುವ ವಿವಿಧ ರೂಪಾಂತರಗಳ ಜೀನೋಮ್ ತಳಿಗಳ ಕುರಿತು ಒಂದು ಅವಲೋಕನ ನೀಡಲಾಯಿತು.
ಸುದೀರ್ಘ ಚರ್ಚೆಯ ಬಳಿಕ ಮಾತನಾಡಿರುವ ಅಧಿಕಾರಿ ಮಿಶ್ರಾ, ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಸ್ಥಿರವಾಗಿದೆ. ದೇಶದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಕೂಡ ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ. ರಾಜ್ಯಗಳು ಐಎಲ್ಐ/ಎಸ್ಎಆರ್ಐ ಪ್ರಕರಣಗಳ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ. ಜೀನೋಮ್ ಅನುಕ್ರಮ ಹೆಚ್ಚಿಸುವಾಗ ಮತ್ತು ಹೊಸ ರೂಪಾಂತರಗಳ ಮೇಲೆ ನಿಗಾ ವಹಿಸಲು ಪರೀಕ್ಷೆಗೆ ಸಾಕಷ್ಟು ಮಾದರಿಗಳನ್ನು ಕಳುಹಿಸಬೇಕು ಎಂದು ಸೂಚನೆ ನೀಡಿದರು.