ಕರ್ನಾಟಕ

karnataka

ETV Bharat / sukhibhava

ಕೋವಿಡ್​​ ರೂಪಾಂತರ EG.5.1 ಸೋಂಕಿನ ಬಗ್ಗೆ ಆತಂಕ ಬೇಡ ಎಂದ ವೈದ್ಯರು - ಹೆಚ್ಚಿನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ

ಎರಿಸ್​ ಎಂದು ಗುರುತಿಸುತ್ತಿರುವ ಈ EG.5.1 ಸೋಂಕು ವೇಗವಾಗಿ ಹರಡಿದರೂ ಗಂಭೀರ ಪರಿಣಾಮದ ಆರೋಗ್ಯ ಸಮಸ್ಯೆಯನ್ನು ಒಡ್ಡುತ್ತಿಲ್ಲ.

new Covid variant EG 51 will not cause any serious problem
new Covid variant EG 51 will not cause any serious problem

By

Published : Aug 8, 2023, 3:47 PM IST

ನವದೆಹಲಿ: ಓಮ್ರಿಕಾನ್​ನ ಹೊಸ ಉಪ ತಳಿ EG.5.1, ಸದ್ಯ 45 ದೇಶದಲ್ಲಿ ಪತ್ತೆಯಾಗಿದ್ದು, ವೇಗವಾಗಿ ಹರಡುತ್ತಿದೆ. ಆದರೆ, ಈ ಬಗ್ಗೆ ಜನರು ಹೆಚ್ಚಿನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಎರಿಸ್​ ಎಂದು ಕರೆಯಲಾಗುತ್ತಿರುವ EG.5.1, ಓಮ್ರಿಕಾನ್​ನ XBB ಉಪ ತಳಿಯಾಗಿದ್ದು, ಇದು ಸ್ಪೈಕ್ ಪ್ರೊಟೀನ್ S:F456L ಮತ್ತು S:Q52Hನ ರೂಪಾಂತರವಾಗಿದೆ. ಇದು XBB.1.16 ಗಿಂತ 45ರಷ್ಟು ಪ್ರತಿಶತ ವೇಗದಲ್ಲಿ ರೂಪಾಂತರವಾಗಲಿದೆ.

ವಿಶ್ವ ಆರೋಗ್ಯ ಸಂಸ್ಥೆ ಅನುಸಾರ, ಇತ್ತೀಚಿನ ಸಾಂಕ್ರಾಮಿಕ ವರದಿಯಂತೆ EG.5.1 ವೇಗವಾಗಿ ಹರಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಜುಲೈನಿಂದ EG.5.1 ಸೋಂಕಿನ ಮೇಲ್ವಿಚಾರಣೆಯನ್ನು ನಡೆಸುತ್ತಿದೆ. EG.5.1 ಜೂನ್​ 13 ರಿಂದ 9ರ ನಡುವೆ ಶೇ 6.2ರಷ್ಟು ಬೆಳವಣಿಗೆ ಕಂಡಿದ್ದು, ಜುಲೈ 11-17ರ ಸಮಯದಲ್ಲಿ ಶೇ 11.6ರಷ್ಟು ಪ್ರಕರಣಗಳು ದಾಖಲೆಯ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ ಎಂದು ವರದಿ ತಿಳಿಸಿದೆ.

ಆದಾಗ್ಯೂ ಈ ಬಗ್ಗೆ ಚಿಂತೆ ಮಾಡುವ ಅಗತ್ಯ ಇಲ್ಲ ಎಂದು ಡಾ ಈಶ್ವರ್​​ ಗಿಲಡ ತಿಳಿಸಿದ್ದಾರೆ. ಸೋಂಕಿನ ತಜ್ಞರಾಗಿರುವ ಅವರು ಈ ಕುರಿತು ವಿವರಣೆ ನೀಡಿದ್ದು, ಉಪ ತಳಿಗಳಿಂದ ಆಗುವ ಸೋಂಕಿನ ಬೆಳವಣಿಗೆ ಪರಿಣಾಮಗಳನ್ನು ನೋಡಬೇಕಿದೆ. ಎಷ್ಟು ಮಂದಿಗೆ ಆಕ್ಸಿಜನ್​ ಬೇಕಿದೆ. ಎಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಇದರ ಸಾವಿನ ಪ್ರಮಾಣಗಳ ಕುರಿತು ಪರಿಶೀಲಿಸಬೇಕು. ಇವು ಕಡಿಮೆ ಇದ್ದರೆ, EG.5.1 ಯಾವುದೇ ಗಂಭೀರ ಪರಿಣಾಮವನ್ನು ಬೀರುವುದಿಲ್ಲ ಎಂದಿದ್ದಾರೆ.

ಓಮ್ರಿಕಾನ್​ನಂತೆಯೇ EG.5.1 ಸೋಂಕಿನ ಗುಣ ಲಕ್ಷಣ ಹೊಂದಿದೆ. ಮೂಗು ಸೋರುವಿಕೆ, ತಲೆನೋವು, ಆಯಾಸ, ಗಂಟಲು ಕೆರೆತ, ಶೀತ ಸಮಸ್ಯೆ ಈ ಸೋಂಕಿನಿಂದ ಆಗುತ್ತದೆ.

ಎರಿಸ್​ ಓಮ್ರಿಕಾನ್​ನ ಹೊಸ ತಳಿಯಾಗಿದ್ದು, ಯುಕೆಯಲ್ಲಿನ ಕೋವಿಡ್​ ಪ್ರಕರಣದಲ್ಲಿ ಸ್ವಲ್ಪ ಭಿನ್ನತೆ ಹೊಂದಿದೆ. ಈ ಸೋಂಕಿನಲ್ಲಿ ನೆಮ್ಮದಿಯ ಅಂಶ ಎಂದರೆ ಸಾಮಾನ್ಯ ಜ್ವರದ ಲಕ್ಷಣ ಕಂಡು ಬರುತ್ತದೆ. ಇದರಿಂದ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ ಎಂದು ಗುರುಗ್ರಾಮ್​ ವೈದ್ಯರಾದ ಡಾ ತುಶಾರ್​ ತಯಲ್​ ತಿಳಿಸಿದ್ದಾರೆ.

ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ (ಸಿಡಿಸಿ) ಪ್ರಕಾರ, EG.5.1 ಪ್ರಕರಣಗಳು ಕಳೆದ ವಾರ ಎಲ್ಲಾ ಕೋವಿಡ್​ 19 ಪ್ರಕರಣದಲ್ಲಿ ಕಂಡು ಬಂದಿಲ್ಲ. ಜುಲೈನ ಅಂತ್ಯಕ್ಕೆ ಈ ಪ್ರಕರಣ ಶೇ 11.9ರಷ್ಟಿದೆ. ಅಮೆರಿಕದಲ್ಲಿ EG.5.1 ಸೋಂಕನ್ನು ತಡೆಯಬಹುದಾಗಿದೆ ಎಂದು ತಿಳಿಸಿದೆ.

ಬ್ರಿಟನ್​ನಲ್ಲಿ ಜುಲೈ 20ಕ್ಕೆ EG.5.1 ಸೋಂಕಿನ ಪ್ರಕರಣಗಳು ಶೇ 14.55ರಷ್ಟು ವರದಿಯಾಗಿದ್ದು, ಇದು ಪ್ರತಿ ವಾರ ಶೇ 20.51ರಷ್ಟು ಬೆಳವಣಿಗೆ ಕಂಡಿದೆ. ಅಲ್ಲದೇ ಎಲ್ಲಾ ವಯೋಮಾನದವರು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲಿ ಕೊಂಚ ಪ್ರಮಾಣದ ಏರಿಕೆ ಕಂಡಿದೆ. ಇದರಲ್ಲಿ ಹಿರಿಯ ವಯಸ್ಕರು ಹೆಚ್ಚಿದ್ದಾರೆ ಎಂದು ವರದಿ ತಿಳಿಸಿದೆ.

ಕೆನಡಾದ ಗುಲ್ಫ್​​ ಯುನಿವರ್ಸಿಟಿ ಪ್ರೊ ಟಿ ರೆಯನ್​ ಗ್ರೆಗೊರಿ ಹೇಳುವಂತೆ EG.5.1 ಸೋಂಕು ವೇಗವಾಗ ಹರಡುತ್ತಿದೆ. ಭಾರತೀಯರು ಉತ್ತಮ ಪ್ರತಿರೋಧಕ ಶಕ್ತಿ ಹೊಂದಿದ್ದು, ಈ ಸೋಂಕನ್ನು ಎದುರಿಸಿದ್ದಾರೆ. ಕಳೆದ ವಾರ ಬಹುತೇಕ ನಾವು ಈ ಸೋಂಕಿಗೆ ಒಳಗಾಗಿದ್ದೇವೆ. ಎರಡು ಲಸಿಕೆ ಪಡೆದ ನಮಗೆ ಹೆಚ್ಚಿನ ಹಾನಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸೋಂಕಿನ ವಿಚಾರದಲ್ಲಿ ನಾವು ನೆನಪಿಡಬೇಕಾದ ಅಂಶ ಎಂದರೆ ಕೋವಿಡ್​ ನಿಯಮಗಳಾದ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್​ ತರಿಸುವುದು, ಕೈ ತೊಳೆಯುವ ಅಭ್ಯಾಸ ಮುಂದುವರೆಸಬೇಕಿದೆ. ಜೊತೆಗೆ ಆರೋಗ್ಯ ಕಾರ್ಯಕರ್ತರು ಕೂಡ ಜ್ವರದಿಂದ ಬಳಲುತ್ತಿರುವವರಿಗೆ ಆರೈಕೆ ನೀಡಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: ವೇಗವಾಗಿ ಹರಡುತ್ತಿರುವ ಕೋವಿಡ್​ ಹೊಸ ರೂಪಾಂತರ EG.5.1.. ಏನಿದರ ಗುಣಲಕ್ಷಣ?

ABOUT THE AUTHOR

...view details