ವಾಷಿಂಗ್ಟನ್:ರಷ್ಯಾದ ಬಾವಲಿಗಳಲ್ಲಿ ಹೊಸ SARS-COV-2 ತರಹದ ವೈರಸ್ ಪತ್ತೆಯಾಗಿದೆ. ಇದು ಮನುಷ್ಯರಿಗೆ ತಗಲುವ ಸಾಧ್ಯತೆ ಇದ್ದು, ಪ್ರಸ್ತುತ ಇರುವ ಕೋವಿಡ್ -19 ಲಸಿಕೆಗಳು ಇದರ ವಿರುದ್ಧ ಹೋರಾಡುವ ಶಕ್ತಿ ಹೊಂದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ. ಅಮೆರಿಕ ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿ (ಡಬ್ಲ್ಯುಎಸ್ಯು) ಯ ಸಂಶೋಧಕರ ತಂಡವು ಖೋಸ್ಟಾ -2 ಹೆಸರಿನ ಬ್ಯಾಟ್ ವೈರಸ್‌ನಿಂದ ಸ್ಪೈಕ್ ಪ್ರೋಟೀನ್ಗಳನ್ನು ಕಂಡು ಹಿಡಿದಿದೆ.
ಈ ವೈರಸ್ ಮನುಷ್ಯರ ಜೀವಕೋಶಗಳಿಗೆ ಪ್ರವೇಶಿಸಲು ಮತ್ತು ಸೋಂಕು ಹರಡಲು ಸ್ಪೈಕ್ ಪ್ರೋಟೀನ್ನನ್ನು ಬಳಸುತ್ತದೆ. ಖೋಸ್ಟಾ -2 ಮತ್ತು ಸಾರ್ಸ್-ಕೋವ್ -2 ಎರಡೂ ಸರ್ಬೆಕೋವೈರಸ್ ಎಂದು ಕರೆಯಲ್ಪಡುವ ಕೊರೊನಾ ವೈರಸ್ಗಳ ಒಂದೇ ಉಪ-ವರ್ಗಕ್ಕೆ ಸೇರಿವೆ.
ಲಸಿಕಾ ಅಭಿಯಾನ ಅಗತ್ಯ: ನಮ್ಮ ಸಂಶೋಧನೆಯು ಏಷ್ಯಾದ ಹೊರಗಿನ ವನ್ಯಜೀವಿಗಳಲ್ಲಿ ಹಬ್ಬುತ್ತಿರುವ ಸರ್ಬೆಕೋವೈರಸ್, ಖೋಸ್ಟಾ -2 ವೈರಸ್ ಕಂಡುಬಂದ ಪಶ್ಚಿಮ ರಷ್ಯಾದಂತಹ ಸ್ಥಳಗಳಲ್ಲಿಯೂ ನಡೆಯುತ್ತಿದೆ. ಇದು ಜಾಗತಿಕ ಆರೋಗ್ಯಕ್ಕೆ ಅಪಾಯವನ್ನು ಉಂಟುಮಾಡಬಹುದು. ಅಲ್ಲದೇ SARS-COV-2 ವಿರುದ್ಧ ನಡೆಯುತ್ತಿರುವ ಲಸಿಕೆ ಅಭಿಯಾನಕ್ಕೆ ಸಹ ಕಾರಣವಾಗಿದೆ ಎಂದು ಮೈಕೆಲ್ ಲೆಟ್ಕೊ ಹೇಳಿದರು.
ಲಸಿಕೆ ಅಭಿವೃದ್ಧಿ ಅವಶ್ಯಕ: PLOS ಜರ್ನಲ್‌ನಲ್ಲಿ ಪ್ರಕಟವಾದ ಈ ಶೋಧನೆಯು, ಸರ್ಬೆಕೋವೈರಸ್ನಿಂದ ರಕ್ಷಿಸಿಕೊಳ್ಳಲು ಸಾರ್ವತ್ರಿಕ ಲಸಿಕೆಯನ್ನು ಅಭಿವೃದ್ಧಿಪಡಿಸುವ ಅಗತ್ಯ ಎತ್ತಿ ತೋರಿಸುತ್ತದೆ. ಕೆಲವರು ಲಸಿಕೆಯನ್ನು ಕಂಡು ಹಿಡಿಯುತ್ತಿದ್ದಾರೆ. ಅದು ಕೇವಲ SARS-2 ನ ಮುಂದಿನ ರೂಪಾಂತರದಿಂದ ರಕ್ಷಿಸುವುದಲ್ಲದೇ, ಸರ್ಬೆಕೋವೈರಸ್ನಿಂದಲೂ ನಮ್ಮನ್ನು ರಕ್ಷಿಸುತ್ತದೆ ಎಂದು ಲೆಟ್ಕೊ ಹೇಳಿದರು.