ನ್ಯೂಯಾರ್ಕ್ ( ಅಮೆರಿಕ): ಇದೇ ಮೊದಲ ಬಾರಿಗೆ ಅಮೆರಿಕ ವಿಜ್ಞಾನಿಗಳು ಅಳವಡಿಸಬಹುದಾದ ಕಿಡ್ನಿ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಒಂದು ದಿನ ಬಳಕೆ ಮಾಡಬಹುದಾದ ಈ ಸಾಧನವೂ ಕಿಡ್ನಿ ವೈಫಲ್ಯಕ್ಕೆ ಒಳಗಾದ ರೋಗಿಗಳಿಗೆ ಡಯಾಲಿಸಿಸ್ ಮುಕ್ತಗೊಳಿಸುತ್ತದೆ. ಅಥವಾ ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಪರಿಣಾಮಕಾರಿ ಔಷಧಗಳನ್ನು ತಡೆಯುತ್ತದೆ.
ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾದ ಯುನಿವರ್ಸಿಟಿಯ ತಂಡ ಈ ಮೂತ್ರಪಿಂಡ ಕೋಶವನ್ನು ಕಂಡು ಹಿಡಿದಿದ್ದಾರೆ. ಈ ಸಾಧನವನ್ನು ಜೈವಿಕ ರಿಯಾಕ್ಟರ್ ಎಂದು ಕರೆಯಲಾಗಿರುವ ಮತ್ತು ಇಲ್ಲಿ ಅಳವಡಿಸಬಹುದಾದ ಸಾಧನವೂ ಹಂದಿಗಳಲ್ಲಿ ಅಳವಡಿಸಿದಾಗಲೂ ಅವು ಬದುಕುಳಿಯಬಹುದಾಗಿದ್ದು, ಕಿಡ್ನಿ ಕಾರ್ಯಾಚರಣೆಯನ್ನು ಅನುಕರಿಸುತ್ತದೆ.
ಈ ಸಾಧನವನ್ನು ನೇಚರ್ ಕಮ್ಯೂನಿಕೇಷನ್ನಲ್ಲಿ ಪ್ರಕಟಿಸಿ ಪರಿಚಯಿಸಲಾಗಿದೆ. ಸಾಧನವು ಹಿಂಬದಿಯಲ್ಲಿ ಕೆಲಸ ಮಾಡುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಯಾವುದೇ ಪ್ರಚೋದನೆ ನೀಡುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ವಿಜ್ಞಾನಿಗಳು ಕೂಡ ಜೈವಿಕ ರಿಯಾಕ್ಟರ್ಗಳ ಜೊತೆಗೆ ದೇಹದ ದ್ರವ ಮತ್ತು ಹಾರ್ಮೋನು ಬಿಡುಗಡೆ ಮಾಡಿ ರಕ್ತದೊತ್ತಡ ಸಮ ದೂಗಿಸುವ ವಿವಿಧ ಕಿಡ್ನಿ ಕೋಶಗಳನ್ನು ದೇಹಕ್ಕೆ ಅಳವಡಿಸಲಿದ್ದಾರೆ. ಈ ಸಾಧನಗಳನ್ನು ರಕ್ತದಿಂದ ತ್ಯಾಜ್ಯವನ್ನು ಫಿಲ್ಟರ್ ಮಾಡುವ ಸಾಧನದೊಂದಿಗೆ ಜೋಡಿಸಲಾಗುತ್ತದೆ.
ಮಾನವ ಪ್ರಮಾಣ ಸಾಧನವನ್ನು ಡಯಾಲಿಸಿಸ್ಗೆ ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದು, ಇದು ವ್ಯಕ್ತಿಯೊಬ್ಬ ಕಿಡ್ನಿ ವೈಫಲ್ಯದ ಬಳಿಕವೂ ಆತನನ್ನು ಜೀವಂತವಾಗಿಸುತ್ತದೆ. ಜಗತ್ತಿನಲ್ಲಿ ಸಾವಿರಾರು ಜನರು ವಾರಕ್ಕೆ ಹಲವಾರು ಬಾರಿ ಯಡಾಲಿಸ್ಗೆ ಒಳಗಾಗುತ್ತಿದ್ದಾರೆ. ಮೂತ್ರಪಿಂಡದ ಕಸಿ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದು, ಅವರಿಗೆ ದಾನಿಗಳು ಸಿಗುತ್ತಿಲ್ಲ. ಸಿಕ್ಕರೂ ಅದು ಕೇವಲ 20 ಸಾವಿರ ಮಂದಿಗೆ ಮಾತ್ರ. ಮೂತ್ರಪಿಂಡದ ಸಮಸ್ಯೆ ಎದುರಿಸುತ್ತಿರುವ ಅನೇಕ ಮಂದಿಗೆ ಈ ಕೃತಕ ಮೂತ್ರಪಿಂಡ ವರದಾನವಾಗಲಿದೆ.