ಕರ್ನಾಟಕ

karnataka

ETV Bharat / sukhibhava

ಋತುಚಕ್ರದ ಸಮಸ್ಯೆಗೆ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ; ಸಮಸ್ಯೆ ಕಾರಣವಾದಿತು! - ದೈಹಿಕವಾಗಿ ಅನೇಕ ಹಂತದ ಸವಾಲುಗಳನ್ನು

ಋತುಚಕ್ರ ಎಂಬುದು ಮಹಿಳೆಯರಲ್ಲಿನ ಸಹಜ ಪ್ರಕ್ರಿಯೆ - ಈ ಋತುಚಕ್ರ ಏಕೆ ಅಗತ್ಯವಾಗಿದೆ - ಇದರ ಸಮಸ್ಯೆಗಳು ಯಾವಾಗ ಆಗುತ್ತದೆ - ಯಾಕೆ ಇದನ್ನು ಗಂಭೀರ ವಿಷಯವಾಗಿ ಪರಿಗಣಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ.

never-ignore-a-menstrual-problem-problem-caused
never-ignore-a-menstrual-problem-problem-caused

By

Published : Mar 2, 2023, 3:33 AM IST

ಬೆಂಗಳೂರು:ಮಹಿಳೆ ಸಾಮಾಜಿಕ ಸವಾಲುಗಳ ಹೊರತಾಗಿ ಆಕೆ ದೈಹಿಕವಾಗಿ ಅನೇಕ ಹಂತದ ಸವಾಲುಗಳನ್ನು ದಾಟುತ್ತಾಳೆ. ಇದರಲ್ಲಿ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಕೂಡ. ಇದರಲ್ಲಿ ಒಂದು ಋತುಚಕ್ರದ ಸಮಸ್ಯೆ. ಹಾರ್ಮೋನುಗಳ ಬದಲಾವಣೆಗಳಿಂದಾಗಿ ಪ್ರತಿ ತಿಂಗಳು ಮಹಿಳೆ ಋತುಚಕ್ರ ಬಂಧಕ್ಕೆ ಒಳಗಾಗುತ್ತಾರೆ. ಈ ಋತುಚಕ್ರದ ಸಮಸ್ಯೆಗಳ ಕುರಿತು ಆಕೆ ಹೆಚ್ಚಿನ ಗಮನ ನೀಡುವುದಿಲ್ಲ ಎಂದರೆ ತಪ್ಪಲ್ಲ. ಜ್ವರ, ನೆಗಡಿಗೆ ಮುಕ್ತವಾಗಿ ವೈದ್ಯರ ಸಲಹೆ ಪಡೆಯುವ ಮಹಿಳೆ, ಋತುಚಕ್ರ, ಗುಪ್ತಾಂಗಳ ಸೋಂಕು ಸೇರಿದಂತೆ ಇತರ ವಿಚಾರಗಳ ಬಗ್ಗೆ ಅವರು ನಿರ್ಲಕ್ಷ್ಯವಹಿಸುತ್ತಾರೆ

ಸಹಜ ಪ್ರಕ್ರಿಯೆ: ಋತುಚಕ್ರ ಮಹಿಳೆಯರ ದೇಹದಲ್ಲಿ ನಡೆಯುವ ನಿರಂತರ ಪ್ರಕ್ರಿಯೆ. ಈ ವೇಳೆ ಅನೇಕ ಮಹಿಳೆಯರು ಹೊಟ್ಟೆ ನೋವು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಈ ಸಮಸ್ಯೆಗಳಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರೆ, ಇದನ್ನು ನಿರ್ಲಕ್ಷ್ಯ ಮಾಡಬಾರದು ಎನ್ನುತ್ತಾರೆ ಉತ್ತರಾಖಂಡದ ಸ್ತ್ರೀರೋಗ ತಜ್ಞೆ ಡಾ ವಿಜಯಲಕ್ಷ್ಮಿ. ಋತುಚಕ್ರ ಎಂಬುದು ಅಗತ್ಯವಾಗಿದೆ. ಈ ಸಮಸ್ಯೆಗಳು ಯಾವಾಗ ಆಗುತ್ತದೆ. ಯಾಕೆ ಇದು ಗಂಭೀರ ವಿಷಯ ಎಂಬುದನ್ನು ತಿಳಿಯಬೇಕು ಎನ್ನುತ್ತಾರೆ ಅವರು.

ಋತುಚಕ್ರ ಸಮಸ್ಯೆ ನಿರ್ಲಕ್ಷ್ಯ ಬೇಡ

ತಾಯ್ತಾನಕ್ಕೆ ಇದುವೇ ಕಾರಣ: ಬಹುತೇಕ ಮಹಿಳೆಯರಿಗೆ ಮಾಸಿಕ ಋತುಚಕ್ರ ಸುಗಮವಾಗಿರುತ್ತದೆ. ಈ ಋತುಚಕ್ರ ಕ 4-5 ದಿನ ಇರುತ್ತದೆ. ಈ ವೇಳೆ, ಹೆಚ್ಚಿನ ರಕ್ತ ಸ್ರಾವಿಕೆ ಅಥವಾ ನೋವು ಈ ಋತುಚಕ್ರದ ಸಮಯವನ್ನು ತ್ರಾಸದಾಯವಾಗಿ ಮಾಡುತ್ತದೆ. ಆರೋಗ್ಯದ ಮರು ಹೊಂದಾಣಿಕೆಯಲ್ಲಿ ಈ ಋತುಚಕ್ರ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ಪ್ರಕ್ರಿಯೆಲ್ಲಿ ದೇಹದಲ್ಲಿ ಹಾರ್ಮೋನ್​ಗಳು ಉತ್ಪತ್ತಿಯಾಗುತ್ತದೆ. ಇದು ತಾಯ್ತನಕ್ಕೆ ದೇಹವನ್ನು ಸಜ್ಜುಗೊಳಿಸುತ್ತದೆ. ಮಹಿಳೆ ಋತುಮತಿಯಾಗದಿರುವುದು ದೊಡ್ಡ ಸಮಸ್ಯೆಯಾಗುತ್ತದೆ. ಕಾರಣ ಇದು ದೇಹದ ಉತ್ಪಾದನೆ ಸಮಸ್ಯೆ ಒಳಗೊಂಡಿರುತ್ತದೆ.

ನಿರ್ಲಕ್ಷ್ಯಬೇಡ: ಸಾಮಾನ್ಯವಾಗಿ ಹುಡುಗಿಯರು 12 ರಿಂದ 15 ವರ್ಷದೊಳಗೆ ಋತುಮತಿಯಾಗುತ್ತಾರೆ. 15 ವರ್ಷದ ಬಳಿಕವೂ ಅವರು ಋತುಮತಿಯಾಗದಿದ್ದರೆ ಸಮಸ್ಯೆ. ಒಮ್ಮೆ ಋತುಮತಿಯಾದರೆ ಈ ಚಕ್ರವೂ ಮಹಿಳೆಯ 45ವರ್ಷದವರೆಗೆ ನಡೆಯುತ್ತದೆ. ಇಲ್ಲಿಯವರೆಗೆ ಆಕೆ ತಾಯ್ತನ ಅನುಭವಿಸಬಹುದಾಗಿದೆ. ಮನೊಪಸ್​ ಅಂದರೆ ಋತುಚಕ್ರ ನಿಲ್ಲುವ ಸಮಯ ಸಾಮಾನ್ಯವಾಗಿ 45ರಿಂದ 50ವರ್ಷದೊಗೆ ಸಂಭವಿಸುತ್ತದೆ. ಮನೊಪಸ್​ ಆದ ಬಳಿಕ ಉತ್ಪಾದನೆ ಚಕ್ರ ಮಹಿಳೆಯರಲ್ಲಿ ನಿಲ್ಲುತ್ತದೆ.

ಈ ಋತುಚಕ್ರದ ಕಣ್ಮರೆಯನ್ನು ಅಮೆನೊರಿಯಾ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧ ಇದೆ. ಪ್ರಾಥಮಿಕ ಅಮೆನೊರಿಯಾ ಎಂದರೆ ಯುವತಿ 15 -16 ವರ್ಷ ಆದರೂ ಋತುಮತಿ ಆಗದೇ ಇರುವುದು. ಎರಡನೇ ಹಂತದ ಅಮೆನೊರಿಯಾ ಎಂದರೆ ಆರೋಗ್ಯ ಅಥವಾ ಇತರ ಕಾರಣದಿಂದ ದಿಢೀರ್​ ಎಂದು ಋತುಚಕ್ರ ನಿಲ್ಲುವುದು.

ಪ್ರಾಥಮಿಕ ಅಮೆನೊರಿಯಾದಲ್ಲಿ ಉತ್ಪಾದನಾ ಅಂಗಗಳಲ್ಲಿ ಸಮಸ್ಯೆ, ಅಂಡಾಣುಗಳಲ್ಲಿ ಸಮಸ್ಯೆ ಅಥವಾ ಥೈರಾಯ್ಡ್​​ ಸಮಸ್ಯೆಗಳು ಕಾರಣವಾಗುತ್ತದೆ. ಇದು ಮಹಿಳೆಯ ಫಲವತ್ತತೆ ಮೇಲೆ ಪರಿಣಾಮ ಬೀರಲಿದೆ. ಎರಡನೇ ಹಂತದ ಅಮೆನೊರಿಯಾದಲ್ಲಿ ಗರ್ಭಾವಸ್ಥೆ, ಗರ್ಭಕೋಶದಲ್ಲಿನ ಸಮಸ್ಯೆ, ಪಿಸಿಒಡಿ ಮತ್ತು ಇತರೆ ಅರೋಗ್ಯ ಸಮಸ್ಯೆಯಿಂದ ಅವಧಿಗೆ ಮೊದಲೇ ಋತುಚಕ್ರ ನಿಲ್ಲಬಹುದಾಗಿದೆ.

ಶುಚಿತ್ವಕ್ಕೆ ಆದ್ಯತೆ: ಋತುಚಕ್ರದ ಸಮಸ್ಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಸಮಯದಲ್ಲಿ ಗುಪ್ತಾಂಗಳನ್ನು ದಿನಕ್ಕೆ ಎರಡು ಮೂರು ಬಾರಿ ಶುಚಿಗೊಳಿಸಬೇಕು. ಜೊತೆಗೆ ಶುಚಿಯಾದ ಒಳ ಉಡುಪುಗಳನ್ನು ಬಳಕೆ ಮಾಡಬೇಕು. ಇನ್ನು ಮಹಿಳೆಯರು ಮುಟ್ಟಿನ ಕಪ್​ ಅಥವಾ ಟ್ಯಾಪೂನ್​ ಬಳಕೆ ಮಾಡುತ್ತಿದ್ದರೆ ಇದರ ಶುಚಿತ್ವಕ್ಕೂ ಕಾಳಹಿವಹಿಸಬೇಕು. ಯಾವುದೇ ರೀತಿಯ ನೋವು, ಅಹಿತಕರ ಅನುಭವಿ ಕಂಡು ಬರುವುದು, ಅಧಿಕ ಹೆಚ್ಚಿನ ಮುಟ್ಟು ಹೋಗುವ ಸಮಸ್ಯೆ ಕಂಡು ಬಂದರೆ, ವೈದ್ಯರ ಸಂಪರ್ಕ ಮಾಡಬೇಕು. ಇದು ಕೇವಲ ಗ್ರಾಮ ಅಥವಾ ಹಿರಿಯ ಮಹಿಳೆಯರಲ್ಲದೇ ನಗರದ ಶಿಕ್ಷಿತ ಮಹಿಳೆಯರು ಈ ಬಗ್ಗೆ ಗಮನ ವಹಿಸಬೇಕು ಎನ್ನುತ್ತಾರೆ ವೈದ್ಯರು.

ಋತುಚಕ್ರ ಎಂಬುದು ಸಾಮಾನ್ಯ ಸ್ಥಿತಿಯಾಗಿದೆ. ಇದರಲ್ಲಿ ಏನಾದರು ಸಮಸ್ಯೆ ಕಂಡು ಬಂದರೇ ವೈದ್ಯರ ಮೊರೆ ಹೋಗುವುದು ಅವಶ್ಯವಾಗಿದೆ. ಇಲ್ಲವಾದಲ್ಲಿ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇದೆ. ಶುಚಿತ್ವದ ಜೊತೆಗೆ ಈ ಸಮಯದಲ್ಲಿ ಉತ್ತಮ ಪೋಷಕಾಂಶದ ಆಹಾರ ಹಾಗೂ ನೀರು ಸೇವನೆಗ ಮಾಡಬೇಕು. ಋತುಚಕ್ರ ಎಂಬುದು ಹಾರ್ಮೋನ್​ಗೆ ಸಂಬಂಧಿಸಿದ್ದು, ಈ ಬಗ್ಗೆ ಉತ್ತಮ ಕಾಳಜಿವಹಿಸಬೇಕಿದೆ.

ಇದನ್ನೂ ಓದಿ: ಇಂದಿಗೂ ಅನೇಕರನ್ನು ಕಾಡುತ್ತಿದೆ ಈ ಅಪರೂಪದ ಕಾಯಿಲೆಗಳು: ರೇರ್​ ಡೀಸಿಸ್​ ಬಗ್ಗೆ ಇರಲಿ ಮಾಹಿತಿ

ABOUT THE AUTHOR

...view details