ಕರ್ನಾಟಕ

karnataka

ETV Bharat / sukhibhava

ಭಾರತೀಯ ಯುವ ಜನರ ಮಾನಸಿಕ ಅರೋಗ್ಯದ ಮೇಲೆ ಕೋವಿಡ್​ ಮತ್ತು ಹವಮಾನ ಬದಲಾವಣೆಯಿಂದ ನಕಾರಾತ್ಮಕ ಪರಿಣಾಮ - ಅಂತರಾಷ್ಟ್ರೀಯ ಸಂಶೋಧಕರ ತಂಡ ಅಧ್ಯಯನ

ಈ ಅಧ್ಯಯನದಲ್ಲಿ ಭಾಗಿಯಾದವರ ಮೇಲೆ ಹವಾಮಾನ ಬದಲಾವಣೆ ಮತ್ತು ಕೋವಿಡ್ 19 ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿರುವುದು ವರದಿ ಆಗಿದೆ.

Negative impact of covid and climate change on mental health of Indian youth
Negative impact of covid and climate change on mental health of Indian youth

By

Published : Apr 22, 2023, 10:28 AM IST

ನವದೆಹಲಿ: ಕೋವಿಡ್​ ಸಾಂಕ್ರಾಮಿಕತೆ ಮತ್ತು ಹವಾಮಾನ ಬದಲಾವಣೆ ಪ್ರಪಂಚದಾದ್ಯಂತ ಬಿಕ್ಕಟ್ಟು ಸೃಷ್ಟಿಸಿದೆ. ಈ ಎರಡು ಯುವ ಭಾರತೀಯರ ಆರೋಗ್ಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿದೆ. ಈ ಕುರಿತು ಭಾರತ ಸೇರಿದಂತೆ ಅಂತರಾಷ್ಟ್ರೀಯ ಸಂಶೋಧಕರ ತಂಡ ಅಧ್ಯಯನ ನಡೆಸಿದ್ದು, ಈ ಕುರಿತು ದಿ ಲ್ಯಾನ್ಸಟ್​​ ಜರ್ನಲ್​ನಲ್ಲಿ ಪ್ರಕಟವಾಗಿದೆ.

ಹವಾಮಾನ ಬದಲಾವಣೆ ಮಕ್ಕಳು ಮತ್ತು ಯುವ ಜನತೆ ಮೇಲೆ ಪರಿಣಾಮ ಬೀರುತ್ತಿದೆ. ಮಾನಸಿಕ ಅನಾರೋಗ್ಯ ಮತ್ತು ಸಾಮಾಜಿಕ ಬೆಂಬಲವಿಲ್ಲದ ಮಕ್ಕಳಲ್ಲಿ ಈ ಹವಾಮಾನ ಬದಲಾವಣೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದೆ ರೀತಿ ಕೋವಿಡ್​ 19 ಕೂಡ ಮಾನಸಿಕ ಅಸ್ವಸ್ಥತೆಯನ್ನು ಹೆಚ್ಚು ಮಾಡುತ್ತಿದೆ. ಖಿನ್ನತೆ, ಆತಂಕ ಮತ್ತು ನಿದ್ರಾಹೀನತೆ ಹೆಚ್ಚುತ್ತಿದೆ.

ಗೋಚರತೆ ಪರಿಣಾಮ: ಕೋವಿಡ್​ 19 ತಕ್ಷಣದ ಗುಣಮಟ್ಟದ ಆರೋಗ್ಯ ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಇನ್ನು ಈ ಹವಾಮಾನ ಬದಲಾವಣೆ ನಿಧಾನವಾಗಿ ಪರಿಸರವನ್ನು ಹಾನಿ ಮಾಡುತ್ತಿದ್ದು, ಇದರ ಭಾರೀ ಪರಿಣಾಮ ತಕ್ಷಣಕ್ಕೆ ಗೋಚರವಾಗುವುದಿಲ್ಲ ಎಂದು ಅಧ್ಯಯನ ಮುಖ್ಯ ಲೇಖಕಿ ಸಂಧ್ಯಾ ಯತಿರಾಜುಲು ತಿಳಿಸಿದ್ದಾರೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಹಾನಿಯೂ ಈಗಾಗಲೇ ಕೋವಿಡ್​​ 19 ಬಿಕ್ಕಟ್ಟಿನಲ್ಲಿರುವ ಅಪಾಯದ ಮೇಲೆ ಹೆಚ್ಚಿನ ದುರ್ಬಲ ಪರಿಣಾಮ ಬೀರುತ್ತದೆ.

ಈ ಅಧ್ಯಯನ ಸಂಬಂಧ 16 ರಿಂದ 24 ವಯೋಮಾನದ 600 ಜನ ಯುವ ಜನತೆಯನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಇವರೆಲ್ಲಾ ಹರ್ಯಾಣದ ಫರಿದಾಬಾದ್​ನ ನಗರ ಕೊಳಗೇರಿಗಳಲ್ಲಿ ಮತ್ತು ಹೈದ್ರಾಬಾದ್​ನ ಜೂಬ್ಲಿ ಹಿಲ್ಸ್​ನಲ್ಲಿ ವಾಸಿಸುವವರಾಗಿದ್ದಾರೆ.

ಮಾನಸಿಕ ಆರೋಗ್ಯ ಅಧ್ಯಯನ: ಭಾರತ, ಆಸ್ಟ್ರೇಲಿಯಾ ಮತ್ತು ಯುಕೆ ತಂಡ ಯುವ ಜನತೆಯಲ್ಲಿನ ಚಿಂತನೆ, ಯೋಚನೆ ಮತ್ತು ಭಾವನೆಗಳನ್ನು ಹವಾಮಾನ ಮತ್ತು ಕೋವಿಡ್​ 19 ಕಾಳಜಿ ವಿಷಯವಾಗಿ ಅರ್ಥ ಮಾಡಿಕೊಳ್ಳಲು ಮುಂದಾಗಿದೆ. ಭವಿಷ್ಯದಲ್ಲಿ ಅವರ ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳಲು ತಂಡ ಅನ್ವೇಷಿಸಿತು. ಈ ಅಧ್ಯಯನದಲ್ಲಿ ಭಾಗಿಯಾದವರ ಮೇಲೆ ಹವಾಮಾನ ಬದಲಾವಣೆ ಮತ್ತು ಕೋವಿಡ್ 19 ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿರುವುದು ವರದಿ ಆಗಿದೆ. ಇದನ್ನು ಹವಾಮಾನ ಮತ್ತು ಕೋವಿಡ್​ 19 ಕಾಳಜಿ ವಿಷಯಕ್ಕೆ ಹೋಲಿಕೆ ಮಾಡಬಹುದು.

ಪರಿಣಾಮ: ಹವಾಮಾನ ಮತ್ತು ಕೋವಿಡ್​ 19ನಿಂದಾಗಿ ಆದಾಯ, ಸಾಮಾಜಿಕ ಸಂಪರ್ಕ ನಷ್ಟಗಳು ನಕಾರಾತ್ಮಕ ಪರಿಣಾಮ ಬೀದಿದೆ. ಇದೇ ವೇಳೆ ಬಿಡುವಿನ ವೇಳೆಯಲ್ಲಿ ಕುಟುಂಬದೊಂದಿಗಿನ ಸಂಬಂಧ ಮತ್ತು ಕ್ರಿಯಾತ್ಮಕ ಚಟವಟಿಕೆ ಸಕರಾತ್ಮಕ ಪರಿಣಾಮ ಬೀರಿದೆ. ಹವಾಮಾನ ಬದಲಾವಣೆ ಮತ್ತು ಕೋವಿಡ್ -19 ಕುರಿತು ಯುವಜನರ ಕ್ರಿಯಾಶೀಲತೆಯು ಅವರ ಮಾನಸಿಕ ಯೋಗ ಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಆದ್ದರಿಂದ ಈ ಎರಡೂ ಬಿಕ್ಕಟ್ಟುಗಳ ಮೇಲೆ ಯುವ ಜನರು ಕ್ರಮ ಕೈಗೊಳ್ಳಲು ಹೆಚ್ಚಿನ ಅವಕಾಶಗಳು ಮತ್ತು ವೇದಿಕೆಗಳನ್ನು ಒದಗಿಸಬೇಕು ಎಂದು ಅಧ್ಯಯನ ಶಿಫಾರಸ್ಸು ಮಾಡಿದೆ.

ಇದನ್ನೂ ಓದಿ: ಕೋವಿಡ್​ ತೀವ್ರತೆ ವಿರುದ್ಧ ಹೋರಾಡುತ್ತದೆ ಭಾರತೀಯ ಟೀ ಮತ್ತು ಅರಿಶಿಣ

ABOUT THE AUTHOR

...view details