ವಾಷಿಂಗ್ಟನ್: ನೈಸರ್ಗಿಕ ವಿಪತ್ತಿನಂತಹ ಒತ್ತಡದ ಅನುಭವಗಳು ಯುವ ಜನರ ವಿದ್ಯಾಭ್ಯಾಸ ಮತ್ತು ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ತಿಳಿಸಿದೆ. ಪೆರುವಿನ ದತ್ತಾಂಶವನ್ನು ಬಳಕೆ ಮಾಡಿ ಪೆನ್ನ್ ಸ್ಟೇಟ್ ಕಾಲೇಜ್ ಆಫ್ ಅಗ್ರಿಕಲ್ಚರ್ ಸೈನ್ಸ್ ಈ ಅಧ್ಯಯನ ನಡೆಸಿದೆ. ಈ ವೇಳೆ ನೈಸರ್ಗಿಕ ವಿಪತ್ತುಗಳಿಂದ ಕುಟುಂಬ ಕಳೆದುಕೊಳ್ಳುವುದು, ಕುಟುಂದ ಆಧಾಯ ಕಳೆದುಕೊಳ್ಳುವುದು ಯುವ ಜನರ ಮೇಲೆ ಆಘಾತದ ಅನುಭವ ಮೂಡಿಸುತ್ತದೆ ಎಂದಿದ್ದಾರೆ. ಆಹಾರ ಭದ್ರತೆ ಕಡಿಮೆಯೂ ಆರಂಭಿಕ ಜೀವನದಲ್ಲಿ ಕಾಲಾನಂತರದಲ್ಲಿ ಕಡಿಮೆ ಓದುವಿಕೆ ಮತ್ತು ಶಬ್ದಕೋಶ ಪರೀಕ್ಷೆಯ ಅಂಕಗಳೊಂದಿಗೆ ಸಂಬಂಧ ಹೊಂದಿದೆ. ಈ ಕುರಿತು ಅಧ್ಯಯನವನ್ನು ಜರ್ನಲ್ ಪಾಪ್ಯೂಲೆಷನ್ ರಿಸರ್ಚ್ ಅಂಡ್ ಪಾಲಿಸಿ ರಿವ್ಯೂನಲ್ಲಿ ಪ್ರಕಟಿಸಲಾಗಿದೆ.
ಕ್ಯಾರೊಲಿನ್ ರೆಯೆಸ್ ಅಧ್ಯಯನವನ್ನು ನಡೆಸಿದ್ದು, ಫಲಿತಾಂಶವೂ ಮಾರ್ಗದರ್ಶನ ನಿಯಮಕ್ಕೆ ಸಹಾಯ ಮಾಡುವ ಜೊತೆಗೆ ಆಘಾತದ ಪರಿಣಾಮವನ್ನು ಕಿರಿದಾಗಿಸುವ ಗುರಿ ಹೊಂದಿದೆ ಎಂದರು. ಹವಾಮಾನ ಬದಲಾವಣೆ ಗಂಭೀರ ಹವಾಮಾನ ಘಟನೆಗೆ ಕಾರಣವಾಗುವ ಜೊತೆಗೆ ಆರ್ಥಿಕ ಬಿಕ್ಕಟ್ಟು ಮತ್ತು ಸಾಂಕ್ರಾಮಿಕವೂ ಕುಟುಂಬಗಳ ಮೇಲೆ ಸವಾಲು ಉಂಟುಮಾಡುತ್ತದೆ. ಈ ಆಘಾತಗಳ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ನೀತಿಗಳಿಗೆ ಇದು ನಿರ್ಣಾಯಕವಾಗಿದೆ. ಹಣ ವರ್ಗಾವಣೆ, ಸಾಮಾಜಿಕ ರಕ್ಷಣೆಗಳ ವಿಸ್ತರಣೆ, ವ್ಯಾಪಕವಾಗಿ ಲಭ್ಯವಿರುವ ವಿಮಾ ಕಾರ್ಯಕ್ರಮಗಳನ್ನು ಇವು ಒಳಗೊಂಡಿರಬಹುದು.
ಆಘಾತಕ್ಕೆ ಒಳಗಾಗುವ ಮಕ್ಕಳಲ್ಲಿ ಆರೋಗ್ಯ ಮತ್ತು ಕಲಿಕೆ ಮೇಲೆ ಗಾಢ ಪರಿಣಾಮ ಬೀರಬಹುದು. ಉದಾಹರಣೆಗೆ ಮಕ್ಕಳು ತಮ್ಮ ಒಡಹುಟ್ಟಿದವರು ಅಥವಾ ಪೋಷಕರಿಗೆ ಸಹಾಯ ಮಾಡುವ ಕಾರಣ ಅವರು ಶಾಲೆಯಿಂದ ವಿಮುಖರಾಗಬಹುದು. ಇದರಿಂದ ಯುವ ಜನತೆ ಶಾಲೆಯ ಬಗ್ಗೆ ಗಮನ ಕಡಿಮೆ ಹರಿಸಬಹುದು ಅಥವಾ ಶಾಲೆಯನ್ನೇ ಬಿಡಬೇಕಾಗಬಹುದು.