ನವದೆಹಲಿ:ಬೇಸಿಗೆ ಕಾಲದಲ್ಲಿ ಕೂದಲಿನ ಆರೈಕೆ ಕೊಂಚ ಕಷ್ಟವೇ. ಬಿಸಿಲಿ ಪ್ರದೂಷಣೆಯಿಂದ ಕೂದಲು ಬಲು ಬೇಗ ನಿರ್ಜೀವವಾಗುತ್ತದೆ. ಇದೇ ಕಾರಣ ಚಳಿಗಾಲದ ಋತುಮಾನ ಬದಲಾಗುತ್ತಿದ್ದಂತೆ ಕೂದಲ ಆರೈಕೆ ಮತ್ತು ಕಾಳಜಿಯಲ್ಲೂ ಕೆಲವು ಬದಲಾವಣೆಗಳು ಆಗಿದೆ. ಅದರಲ್ಲೂ ಬೇಸಿಗೆಯಲ್ಲಿ ಆರೋಗ್ಯಕರ ಮತ್ತು ಹೊಳಪಿನ ಕೂದಲಿಗೆ ಕುರಿತು ಅನೇಕ ಸತ್ಯ, ಮಿಥ್ಯಗಳು ಚಾಲ್ತಿಯಲ್ಲಿದೆ. ಕಾರಣ ಬೇಸಿಗೆಯಲ್ಲಿ ಪ್ರತಿನಿತ್ಯ ಕೂದಲು ತೊಳೆಯುವುದು. ಕೂದಲು ಬಿರುಸು, ತಲೆ ಹೊಟ್ಟು ಸಮಸ್ಯೆಗಳು ಕಾರಣವಾಗುತ್ತದೆ. ಬೇಸಿಗೆಯಲ್ಲಿ ಕಾಡುವ ಈ ಕೂದಲ ಸಮಸ್ಯೆ ಹಿಂದಿನ ಸತ್ಯ ಮಿಥ್ಯಗಳ ಕುರಿತು ಪ್ರಸಿದ್ಧ ಚರ್ಮರೋಗ ತಜ್ಞ ಡಾ. ಬತುಲ್ ಪಟೇಲ್ ತಿಳಿಸಿದ್ದಾರೆ.
ಮಿಥ್ಯ 1: ಪ್ರತಿನಿತ್ಯ ಕೂದಲ ತೊಳೆಯುವುದರಿಂದ ಕೂದಲು ತುಂಡರಿಸುತ್ತದೆ ಎನ್ನಲಾಗುವುದು
ಸತ್ಯ:ಬೇಸಿಗೆಯಲ್ಲಿ, ಸೂರ್ಯನ ಶಾಖಕ್ಕೆ ನಮ್ಮ ಕೂದಲು ಹೆಚ್ಚು ಒಡ್ಡುಕೊಳ್ಳುತ್ತದೆ. ಕ್ಲೋರಿನ್ ಮತ್ತು ಮಾಲಿನ್ಯದಿಂದ ಕೂದಲು ಕೊಳೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕೂದಲಿಗೆ ಪ್ರತಿನಿತ್ಯ ನಜೂಕಿನ ಸ್ವಚ್ಛತೆ ಅನಿವಾರ್ಯವಾಗಿದೆ. ಈ ವೇಳೆ ಸಲ್ಫೇಟ್ ಮುಕ್ತ ಶಾಂಪೂಗಳನ್ನು ಬಳಕೆ ಉತ್ತಮ.
ಮಿಥ್ಯ 2: ಬೇಸಿಗೆಯಲ್ಲಿ ಕಂಡಿಷನರ್ ಬಳಕೆಯಿಂದ ಕೂದಲು ಎಣ್ಣೆಯುಕ್ತವಾಗುತ್ತದೆ.
ಸತ್ಯ: ಬಿಸಿಲಿನಿಂದಾಗಿ ಕೂದಲು ಹೆಚ್ಚು ಹಾನಿಗೊಳ್ಳುತ್ತದೆ. ಉತ್ತಮ ಕಂಡಿಷನರ್ ಈ ಶುಷ್ಕತೆ ಮತ್ತು ಹಾನಿಯನ್ನು ಕಡಿಮೆ ಮಾಡುತ್ತದೆ. ಡೀಪ್ ಕಂಡಿಷನ್ ಕೂಡ ಕೂದಲಿನ ಆರೋಗ್ಯಕ್ಕೆ ಉತ್ತಮ. ಕಂಡಿಷನರ್ ಕೂದಲಿನ ಮಧ್ಯದಲ್ಲಿ ಮಾಶ್ಚರೈಸರ್ ಕಡಿಮೆ ಇರುವ ಕಡೆ ಹಚ್ಚುವುದು ಉತ್ತಮ ಫಲಿತಾಂಶ ನೀಡುತ್ತದೆ.
ಮಿಥ್ಯ 3: ಬೇಸಿಗೆಯಲ್ಲಿ ಎಣ್ಣೆ ಹಾಕುವುದರಿಂದ ಕೂದಲು ಅಂಟು ಆಗುತ್ತದೆ.
ಸತ್ಯ:ಕೂದಲಿನ ಹಾನಿ ತಡೆಯಲು, ರಕ್ಷಣೆ ಮಾಡಲು ಎಣ್ಣೆ ಅತ್ಯವಶ್ಯಕವಾಗಿದೆ. ಅಲ್ಲದೇ, ಇದು ಕೂದಲನ್ನು ಸಾಫ್ಟ್ ಜೊತೆಗೆ ಶೈನಿಂಗ್ ಕೂಡ ಮಾಡುತ್ತದೆ.
ಮಿಥ್ಯ 4: ನಿಯಮಿತ ಹೇರ್ಕಟ್ ಕೂದಲಿನ ಬೆಳವಣಿಗೆಗೆ ಸಹಾಯಕ
ಸತ್ಯ: ಕೂದಲನ್ನು ಕತ್ತರಿಸುವುದಕ್ಕೂ, ಕೂದಲು ಬೆಳೆಯುವುದಕ್ಕೂ ಸಂಬಂಧವಿಲ್ಲ. ಪದೇ ಪದೇ ಕೂದಲು ಕತ್ತರಿಸುವುದರಿಂದ ಕೂದಲಿನ ತುಂದಿಯಲ್ಲಿನ ಸ್ಪೀಲ್ಟ್ ಹೇರ್ ಕಡಿಮೆ ಮಾಡಬಹುದು.