ಕರ್ನಾಟಕ

karnataka

ETV Bharat / sukhibhava

ಅತೀಂದ್ರಿಯ ಚಿಕಿತ್ಸೆಗೆ ಅಲೋವೆರಾ ಜೆಲ್ ಉತ್ತಮ! - ಅಲೋವೆರಾ

ಅತೀಂದ್ರಿಯ ಚಿಕಿತ್ಸೆಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ, ಏನಾದರೂ ಸ್ವಲ್ಪ ಮಟ್ಟಿನ ಚಿಕಿತ್ಸೆ ಮಾಡಬಹುದು ಎಂದರೆ ಅದು, ಅಲೋವೆರಾದಿಂದ ಮಾತ್ರ. ಈ ಅಲೋವೆರಾ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಅಲೋವೆರಾ
ಅಲೋವೆರಾ

By

Published : Dec 5, 2022, 2:36 PM IST

ನವದೆಹಲಿ: ಅಲೋವೆರಾ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಅದ್ಭುತ ಸಸ್ಯವಾಗಿದೆ. ಚರ್ಮದ ಸಮಸ್ಯೆ, ಕೂದಲಿನ ಸಮಸ್ಯೆಗೆ ಪ್ರಪಂಚದಾದ್ಯಂತ ಇದನ್ನು ನೈಸರ್ಗಿಕ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಆಯುರ್ವೇದಿಕ್ ಸ್ಕಿನ್‌ಕೇರ್ ಬ್ರ್ಯಾಂಡ್‌ನ ಸಹ - ಸಂಸ್ಥಾಪಕರಾದ ಶ್ರೀಧಾ ಸಿಂಗ್ ಅವರ ಕೆಲವು DIY ಸೌಂದರ್ಯ ಸಲಹೆಗಳನ್ನು ನೀಡಿದ್ದಾರೆ. ಅವುಗಳು ಇಲ್ಲಿವೆ.

ಒಣ ತ್ವಚೆ ಪೋಷಿಸಿ: ಅಲೋವೆರಾದಲ್ಲಿ ಸಾಕಷ್ಟು ದ್ರವದ ಅಂಶವಿದ್ದು, ಇದು ನಿಮ್ಮ ಒಣ ಚರ್ಮವನ್ನು ಪುನರ್​ ಯೌವನನಗೊಳಿಸಬಹುದು. ಇದು ಪೋಷಣೆಯ ಗುಣಗಳನ್ನು ಹೊಂದಿರುವುದರ ಜೊತೆಗೆ ಚರ್ಮದ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವಾಗಿದೆ. ಅಲೋವೆರಾ ಜೆಲ್ ಅನ್ನು ಹೈಡ್ರೇಟ್ ಮಾಡಲು ನಿಮ್ಮ ಚರ್ಮಕ್ಕೆ ನೇರವಾಗಿ ಅನ್ವಯಿಸಬಹುದು.

ಕಪ್ಪು ಕಲೆಗಳಿಂದ ಮುಕ್ತಿ ಪಡೆಯಿರಿ:ಅಲೋವೆರಾ ಸಂಕೋಚಕ, ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಈ ಗುಣಲಕ್ಷಣಗಳಿಂದಾಗಿ, ಚರ್ಮವು ಮತ್ತು ಕಲೆಗಳ ಗೋಚರತೆ ಕಡಿಮೆ ಮಾಡಲು ಇದು ಅತ್ಯುತ್ತಮವಾಗಿದೆ. ನಿಮ್ಮ ಮುಖದ ಮೇಲೆ ಅಲೋವೆರಾ ಹಚ್ಚಿ, 10 ರಿಂದ 15 ನಿಮಿಷಗಳ ಕಾಲ ಬಿಡಿ. ಬಳಿಕ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಐಸ್ ಕ್ಯೂಬ್ ರಬ್ ಮಾಡಿ ಹೊಳೆಯುವ ತ್ವಜೆ ಪಡೆಯಿರಿ: ನಿಮ್ಮ ಚರ್ಮದ ಮೇಲೆ ಐಸ್ ಕ್ಯೂಬ್ ರಬ್ ಮಾಡುವ ಮೂಲಕ ನೀವು ಹೊಳೆಯುವ ಚರ್ಮವನ್ನು ಪಡೆಯಬಹುದಾಗಿದೆ.

ಸೋಂಕು ಮತ್ತು ಮೊಡವೆ ಹೋಗಲಾಡಿಸಿ: ಮೊಡವೆ ಇರುವ ಚರ್ಮ ಹೊಂದಿರುವ ಜನರು ಅಲೋವೆರಾವನ್ನು ನಿರಂತರವಾಗಿ ಬಳಸುವುದರಿಂದ ಇದಕ್ಕೆ ಪರಿಹಾರವನ್ನು ಪಡೆಯಬಹುದು. ಏಕೆಂದರೆ ಇದು ಸೂಕ್ಷ್ಮವಾದ ಶುದ್ಧೀಕರಣ ಮತ್ತು ಅದರ ನಂಜು ನಿರೋಧಕ ಗುಣಲಕ್ಷಣಗಳೊಂದಿಗೆ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಬಳಕೆ ಸರಳವಾಗಿದೆ ಮತ್ತು ಯಾರಾದರೂ ಇದನ್ನು ಮನೆಯಲ್ಲಿ ಸುಲಭವಾಗಿ ಪ್ರಯತ್ನಿಸಬಹುದು.

ಹೊಳೆಯುವ ಮೃದುವಾದ ಕೂದಲನ್ನು ಹೊಂದಿ:ಅಲೋವೆರಾ ಒರಟು ಮತ್ತು ಒಣ ಕೂದಲಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿದೆ. ಏಕೆಂದರೆ ಇದು ತಲೆಯ ಮೇಲಿನ ನೆತ್ತಿಯ ಸತ್ತ ಚರ್ಮವನ್ನು ಪುನರ್​ ನಿರ್ಮಿಸಲು ಸಹಾಯ ಮಾಡುವ ಪ್ರೋಟಿಯೋಲೈಟಿಕ್ ಕಿಣ್ವಗಳನ್ನು ಹೊಂದಿರುತ್ತದೆ. ಅಲ್ಲಿ ರಕ್ತ ಪರಿಚಲನೆ ಉತ್ತೇಜಿಸುವ ಮೂಲಕ ಹೊಸ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಡಾಡ್ಜ್ ಡ್ಯಾಂಡ್ರಫ್: ಅಲೋವೆರಾವು ಡ್ಯಾಂಡ್ರಫ್ ಅನ್ನು ತೊಡೆದುಹಾಕಲು ನೈಸರ್ಗಿಕವಾದ ಪರಿಹಾರವಾಗಿದೆ. ಏಕೆಂದರೆ ಇದು ಆಂಟಿಫಂಗಲ್ ಮತ್ತು ಆಂಟಿ - ವೈರಲ್ ಗುಣಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಇದನ್ನು ನಿಮ್ಮ ನೆತ್ತಿಯ ಮೇಲೆ ಹಾಕುವುದರಿಂದ ಅದನ್ನು ಪೋಷಿಸಲು ಮತ್ತು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಲೆಹೊಟ್ಟು ಮತ್ತು ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡಲು ನೀವು ಮನೆಯಲ್ಲಿ ತಯಾರಿಸಿದ ಅಲೋ-ಮೆಥಿ ಮಾಸ್ಕ್ ಪ್ರಯತ್ನಿಸಬಹುದು.

ಇದನ್ನೂ ಓದಿ:ಕರುಳಿನ ಸೂಕ್ಷ್ಮಜೀವಿಗಳ ಮೇಲೆ ಕಡಲೆಕಾಯಿ, ಗಿಡಮೂಲಿಕೆಗಳಿಂದ ಅದ್ಭುತ ಪರಿಣಾಮ

ಆಲೋವೆರಾ ಚರ್ಮದ ಮೇಲೆ ಅನೇಕ ಉಪಯುಕ್ತ ಪರಿಣಾಮಗಳನ್ನು ಉಂಟು ಮಾಡುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಮಾಲಿನ್ಯ, ರಾಸಾಯನಿಕಗಳು ಮತ್ತು ಇತರ ಹಾನಿಕಾರಕ ವಸ್ತುಗಳು ನಮ್ಮ ಚರ್ಮವನ್ನು ಒಣಗಿಸಿ ನಿರ್ಜಲೀಕರಣ ಗೊಳಿಸುತ್ತದೆ. ಅಲೋವೆರಾ ಎಲ್ಲ ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ.

ABOUT THE AUTHOR

...view details