ನವದೆಹಲಿ: ಜಾಗತಿಕ ತಾಪಮಾನ ಪರಿಹರಿಸುವ ನಿಟ್ಟಿನಲ್ಲಿ ಜಗತ್ತು ತಮ್ಮ ಪ್ರಯತ್ನವನ್ನು ದುಪ್ಪಟ್ಟುಗೊಳಿಸಬೇಕು ಎಂದು ಜಿ20 ಶೃಂಗಸಭೆಯಲ್ಲಿ ಭಾಗಿಯಾದ ನಾಯಕರು ಒತ್ತಿ ಹೇಳಿದ್ದಾರೆ. ಹೆಚ್ಚಾಗುತ್ತಿರುವ ಹವಾಮಾನ ಬದಲಾವಣೆ ತಡೆಯುವ ನಿಟ್ಟಿನಲ್ಲಿ ಹಲವು ಕ್ರಮವನ್ನು ಕೂಡ ನಡೆಸಲಾಯಿತು. ಈ ಬಗ್ಗೆ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಟೆಸ್ಲಾ ಸಿಇಒ ಎಲೋನ್ ಮಸ್ಕ್, ಜಾಗತಿಕ ತಾಪಮಾನ ಕುರಿತು ಪ್ರಚಾರ ಮಾಡುತ್ತಿರುವಂತೆ ಹವಾಮಾನ ಬದಲಾವಣೆ ಜಗತ್ತನ್ನು ಅಂತ್ಯಗೊಳಿಸುವುದಿಲ್ಲ ಎಂದಿದ್ದಾರೆ.
ಹವಾಮಾನ ಬದಲಾವಣೆ ಜಗತ್ತನ್ನು ಅಂತ್ಯಗೊಳಿಸುತ್ತದೆ 14 ವರ್ಷದ ಪರಿಸರ ಕಾಳಜಿ ಹೊಂದಿರುವ ವಿದ್ಯಾರ್ಥಿಯ ಮಾತನ್ನು ಹೊಂದಿರುವ ಬೆಂಬಲಿಗರ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಮಸ್ಕ್, ಹವಾಮಾನ ಬದಲಾವಣೆ ಖಂಡಿತವಾಗಿಯೂ ಜಗತ್ತನ್ನು ಅಂತ್ಯಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.
ಆದಾಗ್ಯೂ, ನಮ್ಮ ವಾತಾವರಣ ಮತ್ತು ಸಾಗರಗಳನ್ನು ರಾಸಾಯನಿಕಗೊಳಿಸುವ ಮೂಲಕ ತೃಪ್ತಿ ಪಡಬಾರದು. ಜನರು ಒಟ್ಟಾಗಿ ಹುರಿದುಂಬಿಸಿದರೆ, ಸುಸ್ಥಿರ ಶಕ್ತಿಯ ಸಮಸ್ಯೆಯನ್ನು ಮಾನವೀಯತೆ ಪರಿಹರಿಸುತ್ತದೆ ಎಂದು ಒತ್ತಿ ಹೇಳಿದ್ದಾರೆ.
ಈ ಮುಂಚೆ ಹವಾಮಾನ ಬದಲಾವಣೆ ಕುರಿತು ಮಾತನಾಡಿದ್ದ ಮಸ್ಕ್, ಇದರಿಂದ ಕೃಷಿ ಹೆಚ್ಚು ಪರಿಣಾಮಕ್ಕೆ ಒಳಗಾಗುತ್ತಿದೆ. ವೈಜ್ಞಾನಿಕ ಮತ್ತು ಕೃಷಿ ಸಮುದಾಯದ ಮೇಲೆ ಇದು ಹೆಚ್ಚು ಪರಿಣಾಮ ಹೊಂದಿದೆ ಎಂದಿದ್ದರು.