ಸಾಮಾನ್ಯವಾಗಿ ವಯಸ್ಸಾಗುವಿಕೆಯೊಂದಿಗೆ ಅರಿವಿನ ಪ್ರಗತಿಯೂ ಇಳಿಕೆ ಕಾಣುತ್ತದೆ. ಇದನ್ನು ಮಿದುಳಿಗೆ ತರಬೇತಿ ನೀಡುವ ಮೂಲಕ ಮುಂದೂಡಬಹುದಂತೆ. ಈ ಕುರಿತು ಜಿನಿವಾ ಯುನಿವರ್ಸಿಟಿ ಸಂಶೋಧನೆ ನಡೆಸಿದೆ. ಇದರನುಸಾರ ಸಂಗೀತ ಕೇಳುವಿಕೆ ತರಬೇತಿಯು ಅರಿವು ಕ್ಷೀಣಿಸುವುದನ್ನು ಕಡಿಮೆ ಮಾಡುವಲ್ಲಿ ಪ್ರಭಾವ ಬೀರುತ್ತದೆ ಎಂದು ತಿಳಿದು ಬಂದಿದೆ. ಸಂಶೋಧಕರು 100 ನಿವೃತ್ತಿ ಹೊಂದಿದ ಜನರ ಮೇಲೆ ಸಂಗೀತದ ಪರೀಕ್ಷೆ ನಡೆಸಿದ್ದಾರೆ. ಆರು ತಿಂಗಳ ಕಾಲ ಪಿಯೊನೊ/ ಸಂಗೀತ ಜ್ಞಾನದ ತರಗತಿಗಳಿಗೆ ಅವರನ್ನು ಒಳಪಡಿಸಲಾಗಿತ್ತು.
ಸಂಪೂರ್ಣವಾಗಿ ಮಿದುಳನ್ನು ಮರು ಮಾದರಿ ಮಾಡಬಹುದು. ಇದರಲ್ಲಿ ಪರಿಸರ ಮತ್ತು ಅನುಭವಕ್ಕೆ ತಕ್ಕಂತೆ ಮಿದುಳಿನ ಮರೆಯುವಿಕೆ ಮತ್ತು ಸಂಪರ್ಕ ಬದಲಾವಣೆ ಆಗುತ್ತದೆ. ಉದಾಹರಣೆಗೆ, ಕೆಲವು ಆಘಾತದಿಂದ ಹೊರಬರಲಯ ಕೌಶಲ್ಯಗಳನ್ನೂ ನಾವು ಕಲಿಯುತ್ತೇವೆ. ಆದಾಗ್ಯೂ ವಯಸ್ಸಾದಂತೆ ಮಿದುಳಿನ ಪ್ಲಾಸ್ಟಿಸಿಟಿ ಕಡಿಮೆ ಮಾಡುತ್ತದೆ. ಮಿದುಳು ಕೆಲವು ಅಂಶಗಳನ್ನು ಮರೆಯುತ್ತದೆ. ಇದನ್ನು ಬ್ರೈನ್ ಅತ್ರೊಫಿ ಎನ್ನುತ್ತಾರೆ.
ಕ್ರಿಯಾಶೀಲ ಸ್ಮರಣೆಯಲ್ಲಿ ಅನೇಕ ಅರಿವಿನ ಪ್ರಕ್ರಿಯೆಗಳಿವೆ. ಇದು ಅರಿವಿನ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ನೆನಪುಗಳನ್ನು ದೀರ್ಘಕಾಲ ಕಾಯ್ದುಕೊಳ್ಳಲು ಕುಶಲತೆ ಕಾರ್ಯ ನಡೆಸಲಾಗುವುದು. ಇದನ್ನು ವರ್ಕಿಂಗ್ ಮೆಮೊರಿ ಎನ್ನಲಾಗುವುದು. ಇದರಂತೆ ಫೋನ್ ನಂಬರ್‌ಗಳನ್ನು ನೆನಪಿಟ್ಟುಕೊಳ್ಳಲು ಬರೆದಿಡಬೇಕಿರುತ್ತದೆ.
ಯುಎನ್ಐಜಿಇ, ಎಜ್ಇಎಸ್-ಎಸ್ಒ ಜೆನೆವಾ ಮತ್ತು ಇಪಿಎಫ್ಎಲ್ ಬಹಿರಂಗಪಡಿಸಿದಂತೆ ಸಂಗೀತ ತರಬೇತಿ ಅಥವಾ ಕೇಳುವಿಕೆ ವರ್ಕಿಂಗ್ ಮೆಮೊರಿ ಅರಿವಿನ ಕೊರತೆಯಾಗದಂತೆ ತಡೆಯಲು ಸಾಧ್ಯವಿದೆ. ಇಂತಹ ಕ್ರಿಯೆಗಳು ಬ್ರೈನ್ ಪ್ಲಾಸ್ಟಿಸಿಟಿಯನ್ನು ಉತ್ತೇಜಿಸುತ್ತದೆ. ಇದು ಅರಿವಿಗೆ ಬಾರದೇ ಇರುವ ಅಂಶವನ್ನು ಹೆಚ್ಚಿಸುತ್ತದೆ. ಸಕಾರಾತ್ಮಕತೆ ಪರಿಣಾಮವನ್ನೂ ಕೂಡ ವರ್ಕಿಂಗ್ ಮೆಮೊರಿ ಜೊತೆ ಮಾಪನ ಮಾಡಬಹುದು. ಅಧ್ಯಯನವನ್ನು 62ರಿಂದ 78 ವರ್ಷದ 132 ಆರೋಗ್ಯಕರ ನಿವೃತ್ತಿದಾರರ ಮೇಲೆ ನಡೆಸಲಾಗಿದೆ. ಎರಡು ಗುಂಪುಗಳಾಗಿ ಅಧ್ಯಯನ ನಡೆಸಿದ್ದು, ಇದರಲ್ಲಿ ತಮ್ಮ ಜೀವಿತಾವಧಿಯಲ್ಲಿ ಆರು ತಿಂಗಳ ಕಾಲ ಯಾವುದೇ ಸಂಗೀತ ತರಬೇತಿ ಪಡೆಯದವರ ಮೇಲೆ ಅಧ್ಯಯನ ನಡೆದಿದೆ.