ಹೈದರಾಬಾದ್:ಮಕ್ಕಳಲ್ಲಿ ಕೋವಿಡ್-19 ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ. ಆದರೆ ಅಪರೂಪದ ಸಂದರ್ಭಗಳಲ್ಲಿ ಮಕ್ಕಳ ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು ಮತ್ತು ಲಕ್ಷಣಗಳು ವಯಸ್ಕರಿಂದ ಭಿನ್ನವಾಗಿರಬಹುದು.
ಮೇ 2020ರ ಮಧ್ಯದಿಂದ, ಸಿಡಿಸಿ ಮಕ್ಕಳಲ್ಲಿ ಮಲ್ಟಿಸಿಸ್ಟಮ್ ಇನ್ಫ್ಲಮೇಟರಿ ಸಿಂಡ್ರೋಮ್ (ಎಂಐಎಸ್-ಸಿ) ಪತ್ತೆಯಾಗುತ್ತಿದ್ದು, ಇದು ಕೋವಿಡ್-19ಗೆ ಸಂಬಂಧಿಸಿದ ಅಪರೂಪದ ಹಾಗೂ ಗಂಭೀರ ಸ್ಥಿತಿಯಾಗಿದೆ.
ಎಂಐಎಸ್-ಸಿ ಒಂದು ಹೊಸ ಸಿಂಡ್ರೋಮ್ ಆಗಿದೆ. ಕೆಲವು ಮಕ್ಕಳು ಮತ್ತು ಹದಿಹರೆಯದವರು ಕೋವಿಡ್-19ಗೆ ಒಳಗಾದ ನಂತರ ಅಥವಾ ಕೋವಿಡ್-19 ರೋಗಿಯೊಂದಿಗೆ ಸಂಪರ್ಕದ ನಂತರ ಎಂಐಎಸ್-ಸಿ ಒಳಗಾಗುತ್ತಾರೆ. ಈ ವಯಸ್ಸಿನವರೇ ಯಾಕೆ ಎಂಐಎಸ್-ಸಿ ತುತ್ತಾಗುತ್ತಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಎಂಐಎಸ್-ಸಿಯ ಸಂಭವವು ಅನಿಶ್ಚಿತವಾಗಿದ್ದರೂ, ಇದು ಮಕ್ಕಳಲ್ಲಿ ಕೋವಿಡ್-19ನ ನಂತರ ತೊಡಕು ಉಂಟುಮಾಡುತ್ತದೆ. 21 ವರ್ಷಕ್ಕಿಂತ ಕೆಳಗಿನವರಲ್ಲಿ ಕೋವಿಡ್-19 ಸೋಂಕಿನ ಅಂದಾಜು 100,000ಕ್ಕೆ 322 ಮತ್ತು ಎಂಐಎಸ್-ಸಿನ ಸಂಭವವು 100,000ಕ್ಕೆ 2 ಇದೆ ಎಂದು ವರದಿಯೊಂದು ತಿಳಿಸಿದೆ.
ಎಂಐಎಸ್-ಸಿಯ ಆರಂಭಿಕ ವರದಿಗಳು ಯುನೈಟೆಡ್ ಕಿಂಗ್‌ಡಂನಿಂದ ಏಪ್ರಿಲ್ 2020ರಲ್ಲಿ ಹೊರಬಂದವು. ಅಂದಿನಿಂದ ಯುರೋಪ್, ಕೆನಡಾ, ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಆಫ್ರಿಕಾ ಮತ್ತು ಈಗ ಭಾರತದಲ್ಲಿ ಸೇರಿದಂತೆ ವಿಶ್ವದ ಇತರ ಭಾಗಗಳಲ್ಲಿ ಇದೇ ರೀತಿಯ ಬಾಧಿತ ಮಕ್ಕಳ ವರದಿಗಳು ಬಂದಿವೆ.
ಕೋವಿಡ್ -19ಗೆ ತುತ್ತಾದ ಹೆಚ್ಚಿನ ಮಕ್ಕಳು ಚೇತರಿಸಿಕೊಂಡ ನಂತರ ಕೇವಲ ಸೌಮ್ಯ ಲಕ್ಷಣಗಳು ಅಥವಾ ಯಾವುದೇ ರೋಗಲಕ್ಷಣಗಳನ್ನು ಅನುಭವಿಸುವುದಿಲ್ಲ. ಕೆಲವು ಸಂದರ್ಭಗಳಲ್ಲಿ, ನಾಲ್ಕು ವಾರಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯದ ನಂತರ ಮಕ್ಕಳು ಮಲ್ಟಿಸಿಸ್ಟಮ್ ಇನ್ಫ್ಲಮೇಟರಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದಾರೆ (ಎಂಐಎಸ್- ಸಿ).
ಮಲ್ಟಿಸಿಸ್ಟಮ್ ಇನ್ಫ್ಲಮೇಟರಿ ಸಿಂಡ್ರೋಮ್ (ಎಂಐಎಸ್- ಸಿ) ಕುರಿತು:
ಮಕ್ಕಳಲ್ಲಿ ಮಲ್ಟಿಸಿಸ್ಟಮ್ ಇನ್ಫ್ಲಮೇಟರಿ ಸಿಂಡ್ರೋಮ್‌ನಿಂದ (ಎಂಐಎಸ್-ಸಿ) ಎನ್ನುವುದು ಹೃದಯ, ಶ್ವಾಸಕೋಶ, ಮೂತ್ರಪಿಂಡಗಳು, ಮೆದುಳು, ಚರ್ಮ, ಕಣ್ಣುಗಳು ಅಥವಾ ಜಠರಕರುಳಿನ ಅಂಗಗಳನ್ನು ಒಳಗೊಂಡಂತೆ ದೇಹದ ವಿವಿಧ ಭಾಗಗಳನ್ನು ಉಬ್ಬಿಕೊಳ್ಳುತ್ತದೆ.
ಇದಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದಿಲ್ಲ. ಆದರೆ ಎಂಐಎಸ್-ಸಿ ಒಳಗಘಾಉವ ಅನೇಕ ಮಕ್ಕಳು ಕೋವಿಡ್-19ಗೆ ಕಾರಣವಾಗುವ ವೈರಸ್ ಹೊಂದಿದ್ದಾರೆ ಅಥವಾ ಕೋವಿಡ್-19 ಇರುವವರ ಅಂಪರ್ಕಕ್ಕೆ ಬಂದಿದ್ದರು ಎಂದು ತಿಳಿದಿದೆ.
ಎಂಐಎಸ್-ಸಿ ಗಂಭೀರವಾಗಬಹುದು ಮತ್ತು ಕೆಲವೊಮ್ಮೆ ಮಾರಣಾಂತಿಕವೂ ಆಗಬಹುದು., ಆದರೆ ಈ ಸ್ಥಿತಿಯನ್ನು ಪತ್ತೆಹಚ್ಚಿದ ಹೆಚ್ಚಿನ ಮಕ್ಕಳು ವೈದ್ಯಕೀಯ ಆರೈಕೆಯೊಂದಿಗೆ ಉತ್ತಮವಾಗಿದ್ದಾರೆ.
ಎಂಐಎಸ್-ಸಿಯ ನಿರ್ದಿಷ್ಟ ಲಕ್ಷಣಗಳು:
- ತುರಿಕೆ, ಎಲರ್ಜಿ, ಕೆಂಪಾಗುವ ಕಣ್ಣುಗಳು, ಊದಿಕೊಂಡ ಕೈ ಕಾಲುಗಳು, ಒಡೆದ ತುಟಿಗಳು ಮತ್ತು ಸ್ಟ್ರಾಬೆರಿಯಂತೆ ಕಾಣುವ ನಾಲಿಗೆ.
- ಅಧಿಕ ಜ್ವರದಿಂದ ತೀವ್ರವಾದ ಜ್ವರದ ಲಕ್ಷಣಗಳು, ಕಡಿಮೆ ರಕ್ತದೊತ್ತಡ ಮತ್ತು ಹೃದಯ ಬಡಿತ.
- ಅತಿಸಾರ, ವಾಂತಿ, ಹೊಟ್ಟೆ ನೋವು ಅಥವಾ ಹೊಟ್ಟೆ ಊದಿಕೊಳ್ಳುವುದು.
- ನಿರಂತರ ಕೆಮ್ಮು ಮತ್ತು ಉಸಿರಾಟದ ತೊಂದರೆ
ಅನಾರೋಗ್ಯವು ತುಂಬಾ ಹೊಸದಾದ ಕಾರಣ ರೋಗಲಕ್ಷಣಗಳನ್ನು ಇನ್ನೂ ದಾಖಲಿಸಲಾಗುತ್ತಿದೆ ಮತ್ತು ಅವು ಮಗುವಿನಿಂದ ಮಗುವಿಗೆ ಬದಲಾಗಬಹುದು. ಗಮನಿಸಬೇಕಾದ ಮುಖ್ಯ ವಿಷಯವೆಂದರೆ ನಿರಂತರ ಜ್ವರ (24 ಗಂಟೆಗಳಿಗಿಂತ ಹೆಚ್ಚು ಕಾಲ ಇರುತ್ತದೆ ಮತ್ತು ಸಾಮಾನ್ಯವಾಗಿ ಹಲವಾರು ದಿನಗಳವರೆಗೆ ಇರುತ್ತದೆ), ನಿಮ್ಮ ಮಗು ಆಯಾಸ ಮತ್ತು ಅನಾರೋಗ್ಯದಿಂದ ಬಳಲುತ್ತದೆ, ಹಸಿವು ಕಡಿಮೆಯಾಗುವುದು ಅಥವಾ ಸಾಕಷ್ಟು ನೀರು ಕುಡಿಯುವುದಿಲ್ಲ. ರೋಗಲಕ್ಷಣಗಳು ತ್ವರಿತವಾಗಿ ಉಲ್ಬಣಗೊಳ್ಳಬಹುದು. ಆದ್ದರಿಂದ ಲಕ್ಷಣಗಳು ಕಂಡುಬಂದರೆ ಸಮಯೋಚಿತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.