ಕರ್ನಾಟಕ

karnataka

ETV Bharat / sukhibhava

ಹೆಚ್ಚಿನ ಸಾಮಾಜಿಕ ಮಾಧ್ಯಮಗಳ ಫ್ಲಾಟ್​ಫಾರ್ಮ್​ಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರದು.. - ಫ್ಲಾಟ್​​ಫಾರ್ಮ್​ಗಳಲ್ಲಿ ಬಳಕೆದಾರ ಸಕ್ರಿಯ

ಒಂದಕ್ಕಿಂತ ಹೆಚ್ಚಿನ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಯಾವುದೇ ರೀತಿಯ ಆತಂಕ, ಒತ್ತಡ, ಖಿನ್ನತೆಗೆ ಕಾರಣವಾಗುವುದಿಲ್ಲ ಎಂದು ಅಧ್ಯಯನ ತಿಳಿಸಿದೆ.

Multiple social media platforms is not harm mental health
Multiple social media platforms is not harm mental health

By

Published : Jul 18, 2023, 12:04 PM IST

ಲಂಡನ್​: ಇಂದು ಸಾಮಾಜಿಕ ಮಾಧ್ಯಮಗಳ ಬಳಕೆ ಪ್ರಮಾಣ ಹೆಚ್ಚುತ್ತಿದ್ದು, ಅನೇಕ ಫ್ಲಾಟ್​​ಫಾರ್ಮ್​ಗಳಲ್ಲಿ ಬಳಕೆದಾರ ಸಕ್ರಿಯರಾಗಿರುತ್ತಾರೆ. ಈ ರೀತಿ ಒಂದಕ್ಕಿಂತ ಹೆಚ್ಚಿನ ಸಾಮಾಜಿಕ ಮಾಧ್ಯಮಗಳ ಫ್ಲಾಟ್​ಫಾರ್ಮ್​​ಗಳ ಬಳಕೆಯು ಬಳಕೆದಾರರ ಮಾನಸಿಕ ಆರೋಗ್ಯದ ಮೇಲೆ ಯಾವುದೇ ರೀತಿಯ ಗಮನಾರ್ಹ ಪರಿಣಾಮ ಬೀರುವುದಿಲ್ಲ ಎಂದು ಅಧ್ಯಯನ ತಿಳಿಸಿದೆ.

ಸಾಮಾಜಿಕ ಮಾಧ್ಯಮಗಳು ಇಂದಿನ ಜೀವನದಲ್ಲಿ ಪ್ರತಿಯೊಬ್ಬರ ಅವಿಭಾಜ್ಯ ಅಂಗವಾಗಿದೆ. ಆದಾಗ್ಯೂ, ಈ ಹಿಂದಿನ ಅನೇಕ ಅಧ್ಯಯನಗಳು, ಅಧಿಕ ಸಾಮಾಜಿಕ ಜಾಲತಾಣಗಳ ಬಳಕೆಯು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಒತ್ತಡ, ಆತಂಕವನ್ನು ಹೆಚ್ಚಿಸುತ್ತದೆ ಎಂಬ ಗೊಂದಲಕಾರಿ ಫಲಿತಾಂಶವನ್ನು ನೀಡಿವೆ.

ಹೊಸ ಅಧ್ಯಯನಗಳು ಹೇಳಿದ್ದೇನು?: ಈ ಕುರಿತು ಹೊಸ ಆಧ್ಯಯನದಲ್ಲಿ ವ್ಯಾಖ್ಯಾನಿಸಿರುವ ಸಂಶೋಧಕರು, ಈ ಹಿಂದಿನ ಅಧ್ಯಯನವೂ ಕೇವಲ ಬಳಕೆದಾರರ ಸಾಮಾನ್ಯ ಆರೋಗ್ಯ ಅಥವಾ ಖಿನ್ನತೆಯ ಆಧಾರದ ಮೇಲೆ ಮಾತ್ರ ಇದನ್ನು ಪರಿಗಣಿಸಿದೆ. ಅಥವಾ ಯಾವ ರೀತಿಯ ಸಾಮಾಜಿಕ ಮಾಧ್ಯಮದ ಬಳಕೆ ಅವರ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿಲ್ಲ ಎಂದು ಜರ್ಮನ್​ನ ಮ್ಯಾಕ್ಸ್​ ಪ್ಲಾಂಕ್​ ಇನ್ಸ್​​ಸ್ಟಿಟ್ಯೂಟ್​ ಫಾರ್​ ಡೆಮೊಗ್ರಾಫಿಕ್​ ರಿಸರ್ಚ್​​ ಸಂಶೋಧಕ ಸೋಫಿಯಾ ಲೊಹಮನ್ನಾ​ ತಿಳಿಸಿದ್ದಾರೆ.

ಈ ಹೊಸ ಅಧ್ಯಯನವನ್ನು ಪಿಎಲ್​ಒಎಸ್​ ಡಿಜಿಟಲ್​ ಹೆಲ್ತ್​​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಹೆಚ್ಚಿನ ಸಾಮಾಜಿಕ ಮಾಧ್ಯಮದ ಬಳಕೆಯು ಇತರರಿಗಿಂತ ಖುಷಿ ಆಥವಾ ಇತರರಿಗಿಂತ ಅಸಂತೋಷವನ್ನು ಉಂಟು ಮಾಡುವುದಿಲ್ಲ ಎಂದಿದೆ.

ಸಾಮಾಜಿಕ ಮಾಧ್ಯಮ ಮತ್ತು ವೈಯಕ್ತಿಕ ಸಂಬಂಧ: ಈ ಸಾಮಾಜಿಕ ಜಾಲತಾಣಗಳ ಫ್ಲಾಟ್​ಫಾರ್ಮ್​ಗಳ ಬಳಕೆ ಸಂಬಂಧಗಳ ತೃಪ್ತಿ, ಆರ್ಥಿಕ ತೃಪ್ತಿ, ಸಾಮಾನ್ಯ ತೃಪ್ತಿ ನಡುವೆ ಬಹಳ ಕಡಿಮೆ ಸಂಬಂಧವನ್ನು ಹೊಂದಿದೆ. ನಂಬಿಕೆ ಎಂಬುದು ಮನಸ್ಥಿತಿ ಆಗಿದೆ. ನಾವು ಈ ಮಾದರಿಯನ್ನು ಅಳವಡಿಸಿಕೊಂಡಾಗ, ಎಲ್ಲಾ ನಕಾರಾತ್ಮಕತೆ ಸಂಪೂರ್ಣವಾಗಿ ಮಾಯವಾಗುತ್ತದೆ ಲೊಹಮನ್ನಾ ತಿಳಿಸಿದ್ದಾರೆ.

ಬಹು ಹಂತದ ಫ್ಲಾಟ್​​ಫಾರ್ಮ್​ಗಳ ಬಳಕೆಯೂ ಅಧಿಕವಾಗಿ ಓವರ್​ ಲೋಡ್​ಗೂ ಕಾರಣವಾಗುತ್ತದೆ ಎಂಬ ಊಹೆಯನ್ನು ಈ ಸಂಶೋಧನೆ ದೃಢೀಕರಿಸಿಲ್ಲ. ಈ ಬಹು ಸಾಮಾಜಿಕ ಮಾಧ್ಯಮಗಳ ಫ್ಲಾಟ್​ಫಾರ್ಮ್​ಗಳ ವಿಷಯಗಳು ವಿಶಾಲವಾಗಿದ್ದು, ಎಲ್ಲಕ್ಕಿಂತ ಮೀರಿದ್ದು, ಇದು ಸಂಕೀರ್ಣವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಎಲ್ಲಾ ಮಾಧ್ಯಮಗಳು ಒಂದೇ ಅಲ್ಲ: ಈ ಹಿನ್ನಲೆ ಸಾಮಾಜಿಕ ಮಾಧ್ಯಮಗಳ ಬಳಕೆ ಎಂದರೇನು ಎಂಬುದನ್ನು ಸರಿಯಾಗಿ ಅರ್ಥೈಸಬೇಕಿದೆ. ಜೊತೆಗೆ ಈ ಫ್ಲಾಟ್​ಫಾರ್ಮ್​ಗಳ ಸಂಕೀರ್ಣತೆಯನ್ನು ದೃಷ್ಟಿಯನ್ನು ಬಿಡಬಾರದು. ಟ್ವಿಟರ್​​ ಎಂಬುದು ಫೇಸ್​ಬುಕ್​ನಂತೆ ಅಲ್ಲ. ಅದೇ ರೀತಿ ಇದು ಟಿಕ್​ಟಾಕ್​ನಂತೆ ಕೂಡ ಅಲ್ಲ. ಜನರು ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡುವ ರೀತಿ ವಿಭಿನ್ನವಾಗಿದೆ. ಇದನ್ನು ಸಂಶೋಧನೆಯಲ್ಲಿ ನಿರ್ಲಕ್ಷಿಸಬಾರದು ಎಂದಿದ್ದಾರೆ.

ಭವಿಷ್ಯದಲ್ಲಿ ಸಾಮಾಜಿಕ ಮಾಧ್ಯಮಗಳ ಸಂಶೋಧನೆಯಲ್ಲಿ ಹೆಚ್ಚಿನ ಕಾರ್ಯಾಚರಣೆಗೆ ಗಮನ ಹರಿಸುವ ಅವಶ್ಯಕತೆ ಇದೆ. ಇದು ಯಾವ ರೀತಿಯ ಸಾಮಾಜಿಕ ಮಾಧ್ಯಮಗಳ ಬಳಕೆ ಎಂಬುದು ಯಾವ ರೀತಿಯ ಸಾಮಾಜಿಕ ಮಾಧ್ಯಮಗಳ ಪರಿಣಾಮ ಹೊಂದಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕಿದೆ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ಬಹಳ ಉಪಯುಕ್ತ; ಬಳಸುವ ಮಾರ್ಗ ಗೊತ್ತಿರಬೇಕು ಅಷ್ಟೇ

ABOUT THE AUTHOR

...view details