ಕರ್ನಾಟಕ

karnataka

ETV Bharat / sukhibhava

ಬೆನ್ನು ಹುರಿಗಳ ಆರೋಗ್ಯದ ಬಗ್ಗೆಯೂ ಬೇಕಿದೆ ಕಾಳಜಿ.. ಏಕೆ ಗೊತ್ತಾ? - ಆಯೋಜಿಸಿದ ಕಾರ್ಯಕ್ರಮದಲ್ಲಿ

ಜಗತ್ತಿನಾದ್ಯಂತ ಅನೇಕ ಗಂಭೀರ ಸಮಸ್ಯೆ ಮತ್ತು ಅಂಗವೈಕಲ್ಯತೆಗೆ ಈ ಬೆನ್ನು ಹುರಿ ಮೂಳೆ ಸಮಸ್ಯೆಯೇ ಪ್ರಮುಖ ಕಾರಣವಾಗಿದೆ ಎಂದು ತಜ್ಞ ವೈದ್ಯರು ಹೇಳಿದ್ದರೆ.

More care should be taken about the health of the spinal cord; Doctor
More care should be taken about the health of the spinal cord; Doctor

By

Published : Aug 11, 2023, 12:43 PM IST

ನವದೆಹಲಿ: ಜನರು ಬೆನ್ನು ಮೂಳೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಅಸೋಸಿಯೇಷನ್​ ಆಫ್​ ಸ್ಪೈನ್​ ಸರ್ಜನ್​ ಆಫ್​​ ಇಂಡಿಯಾ -ಎಎಸ್​ಎಸ್​ಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಜ್ಞರು ಈ ಸಲಹೆ ನೀಡಿದ್ದಾರೆ. ಈ ವಿಷಯವಾಗಿ ಹೆಚ್ಚು ಒತ್ತು ಕೊಟ್ಟು ಅವರೆಲ್ಲ ಸಂವಾದ ನಡೆಸಿದ್ದಾರೆ.

ಶೇ 8ರಷ್ಟು ಜನರು ತಮ್ಮ ಜೀವಿತಾವಧಿಯ ಯಾವುದಾದರೂ ಸಮಯದಲ್ಲಿ ಈ ಬೆನ್ನು ಮೂಳೆ ನೋವನ್ನು ಅನುಭವಿಸುತ್ತಾರೆ. ಬೆನ್ನು ಮೂಳೆ ನೋವು ಜಾಗತಿಕವಾಗಿ ಅನೇಕ ಅಂಗವೈಕಲ್ಯತೆಗೆ ಕಾರಣವಾಗಿದೆ. ಈ ಹಿನ್ನೆಲೆ ಬೆನ್ನು ಮೂಳೆಯ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಿ, ಅದರ ಮೇಲೆ ಹೆಚ್ಚಿ ಹೊರೆ ಹಾಕದಂತೆ ಕಾಪಾಡಬೇಕಿದೆ ಎಂದು ಡಾ ಎಚ್​ಎಸ್​ ಛಬ್ರಾ ಸಲಹೆ ನೀಡಿದರು.

ಸ್ಪೈನ್​ 20 ಅಡ್ವಾಕಸಿ ಗುಂಪನ್ನು 2019ರಲ್ಲಿ ಜರ್ಮನ್​ ಸ್ಪೈನ್​ ಸೊಸೈಟಿ, ನಾರ್ಥ್​ ಅಮೆರಿಕನ್​ ಸ್ಪೈನ್​ ಸೊಸೈಟಿ ಮತ್ತು ಸೌದಿ ಸ್ಪೈನ್​ ಸೊಸೈಟಿ, ಯುರೋಸ್ಪೈನ್​ ಸ್ಥಾಪಿಸಿತು. ಜೊತೆಗೆ ಈ ಗುಂಪು 33 ಭಾಗಿದಾರ ಸೊಸೈಟಿಯನ್ನು ಜಗತ್ತಿನಾದ್ಯಂತ ಹೊಂದಿದೆ. ಎಎಸ್​ಎಸ್​ಐ ಕೂಡ ಈ ಸೊಸೈಟಿಯಲ್ಲಿ ಒಂದು ಭಾಗವಾಗಿದೆ. ಸ್ಪೈನ್​ 2023ರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಗತ್ತಿನಾದ್ಯಂತ ಅನೇಕ ಗಂಭೀರ ಸಮಸ್ಯೆ ಮತ್ತು ಅಂಗವೈಕಲ್ಯತೆ ಕಾರಣವಾಗುವಲ್ಲಿ ಬೆನ್ನು ಹುರಿ ಮೂಳೆ ಸಮಸ್ಯೆ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ದೇಶದಲ್ಲಿ ರಾಷ್ಟ್ರೀಯ ಸ್ಪೈನ್​ ಕೇರ್​ ಪ್ರೋಗಾಂ ಅನ್ನು ನಡೆಸಬೇಕಿದೆ ಎಂದು ಅವರು ತಿಳಿಸಿದರು.

ಇನ್ನು ಎಎಸ್​ಎಸ್​ಐ ಅಧ್ಯಕ್ಷರಾಗಿರುವ ಸೌಮ್ಯಜಿತ್​ ಬಸು ಮಾತನಾಡಿ, ಬೆನ್ನು ಹುರಿ ಮೂಳೆಯ ಕಾಳಜಿ ಬಗ್ಗೆ ವಿವರಣೆ ನೀಡಿದರು. ಜಾಗತಿಕವಾಗಿ ಅರ್ಥ ಬಿಲಿಯನ್​ಗೂ ಹೆಚ್ಚು ಮಂದಿ ಈ ಸಮಸ್ಯೆಗೆ ಗುರಿಯಾಗಿ ಬಳಲುತ್ತಿದ್ದಾರೆ ಎಂಬ ಅಂಶವನ್ನು ಹೇಳಿದರು. ಅಲ್ಲದೇ, ಪ್ರಮುಖ ಅಂಗವೈಕ್ಯಲತೆ ಸಮಸ್ಯೆಯಲ್ಲಿ ಬೆನ್ನು ನೋವು ಕೂಡ ಪ್ರಮುಖವಾಗಿದೆ ಎಂದು ಅವರು ಪ್ರತಿಪಾದಿಸಿದರು. ಇದಕ್ಕೆ ಸರಿಯಾದ ಕ್ರಮದಲ್ಲಿ ಚಿಕಿತ್ಸೆ ಪಡೆಯದೇ ಹೋದರೆ, ಶಾಶ್ವತವಾಗಿ ಇವು ಬದುಕಿನ ನಗುವನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ ಎಂದು ಇದೇ ವೇಳೆ ಎಚ್ಚರಿಕೆ ರವಾನಿಸಿದರು. ಮತ್ತೊಂದು ಕಡೆ ಬೆನ್ನು ನೋವಿನ ಸಮಸ್ಯೆ ಪರಿಹಾರ ಮಾಡುವಲ್ಲಿ ರೋಗಿ ಮತ್ತು ವೈದ್ಯರು ಸೇರಿ ಇಬ್ಬರ ಪ್ರಯತ್ನ ನಿರಂತವಾಗಿರಬೇಕು ಎಂದು ಸಲಹೆ ನೀಡಿದರು.

ಬೆನ್ನು ನೋವಿಗೆ ಕಾರಣಗಳೇನು?:ಬೆನ್ನು ನೋವಿನ ಸಮಸ್ಯೆಯಲ್ಲಿ ಭುಜದ ನೋವಿನ ಒತ್ತಡ, ಅಪಘಾತ, ಕುಳಿತುಕೊಳ್ಳುವ ಭಂಗಿ, ಒಸ್ಟಿಯೊಪೊರೊಸಿಸ್​​, ನರ ಸಮಸ್ಯೆ, ಅಧಿಕ ದೇಹ ತೂಕ, ಭಾರವಾದ ವಸ್ತುಗಳನ್ನು ಎತ್ತುವಿಕೆ, ಪೋಷಕಾಂಶ ಕೊರತೆ ಮತ್ತು ಜೀವನಶೈಲಿ ಸೇರಿದಂತೆ ಹಲವು ಕಾರಣಗಳು ಇರುತ್ತದೆ.

ಬೆನ್ನು ನೋವಿನ ಸಮಸ್ಯೆ ಎಂಬುದು ಗಂಭೀರ ವಿಷವಾಗಿದ್ದು, ಇವು ವ್ಯಕ್ತಿಯನ್ನು ದುರ್ಬಲವಾಗಿಸುತ್ತದೆ. ಈ ಸಮಸ್ಯೆ ಕಾಣಿಸಿಕೊಂಡಾಕ್ಷಣ ಈ ಕುರಿತು ವೈದ್ಯರ ಸಲಹನೆ ಪಡೆದು ಅದಕ್ಕೆ ಚಿಕಿತ್ಸೆ ಪಡೆಯುವುದ ಅವಶ್ಯವಾಗಿದೆ ಎನ್ನುತ್ತಾರೆ ವೈದ್ಯರು.

ಇನ್ನು ಈ ಕಾರ್ಯಕ್ರಮದ ಕುರಿತು ಮಾತನಾಡಿರುವ ವೈದ್ಯರು ಈ ರೀತಿಯ ಸ್ಪೈನ್​ ಸರ್ಜನ್​ಗಳು ಆರೋಗ್ಯಯುತವಾಗಿ ಈ ರೀತಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಸಂತಸ ತಂದಿದೆ. ಈ ರೀತಿಯ ಕಾರ್ಯಕ್ರಮಗಳಿಂದಾಗಿ ಬೆನ್ನು ಮೂಳೆಗಳ ಕಾಳಜಿ, ಚಿಕಿತ್ಸೆ ಮತ್ತು ಪುನರ್​ಸ್ಥಾನಪನೆ ಮತ್ತು ಸಂಶೋಧನೆ ಕುರಿತು ಮಾತನಾಡಲು ಸಾಧ್ಯ ಎಂದಿದ್ದಾರೆ.

ಇದನ್ನೂ ಓದಿ: ವಾಯು ಮಾಲಿನ್ಯದಿಂದ ಹೆಚ್ಚುತ್ತಿದೆ ಸಿವಿಡಿ ಸಾವು.. ಅಂಗವೈಕಲ್ಯತೆಯ ಅಪಾಯ

ABOUT THE AUTHOR

...view details