ಲಂಡನ್:ಮಂಕಿಪಾಕ್ಸ್ ಬಗ್ಗೆ ಇತ್ತೀಚಿನ ಹೊಸ ಮಾಹಿತಿ ಅಲಭ್ಯತೆ ಮತ್ತು ಗುಣಮಟ್ಟದ ಕೊರತೆಯಿಂದಾಗಿ ವಿಶ್ವದಾದ್ಯಂತ ಸೋಂಕಿನ ಪರಿಣಾಮಕಾರಿ ಮತ್ತು ಸುರಕ್ಷಿತ ಚಿಕಿತ್ಸೆಗೆ ಅಡ್ಡಿಯಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಸಂಶೋಧಕರ ತಂಡದ ನೇತೃತ್ವದ ವಿಮರ್ಶೆಯಲ್ಲಿ ತಿಳಿಸಲಾಗಿದೆ.
ಅಸ್ತಿತ್ವದಲ್ಲಿರುವ ಮಾರ್ಗದರ್ಶಕ ಪಟ್ಟಿಯು ಸಾಕಷ್ಟು ವಿವರಗಳನ್ನು ಹೊಂದಿಲ್ಲ, ಇದು ವಿಭಿನ್ನ ಗುಂಪುಗಳನ್ನು ಸೇರಿಸಲು ವಿಫಲವಾಗಿದೆ ಮತ್ತು ವಿರೋಧಾಭಾಸಗಳಿಂದ ಕೂಡಿದೆ ಎಂದು ಯುನೈಟೆಡ್ ಕಿಂಗಡಮ್ನ ಆಕ್ಸ್‌ಫರ್ಡ್, ಆಸ್ಟ್ರೇಲಿಯಾದ ಬ್ರಿಸ್ಟಲ್ ಮತ್ತು ಲಿವರ್‌ಪೂಲ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್ ವಿಶ್ವವಿದ್ಯಾಲಯಗಳ ಸಂಶೋಧಕರು ಹೇಳಿದ್ದಾರೆ. ಮಾರ್ಗಸೂಚಿಗಳ ನಡುವಿನ ಸ್ಪಷ್ಟತೆಯ ಕೊರತೆಯು ಮಂಕಿಪಾಕ್ಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಅನಿಶ್ಚಿತತೆಯನ್ನು ಉಂಟುಮಾಡುತ್ತದೆ ಇದು ರೋಗಿಗಳ ಆರೈಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಹೊಸ ಪುರಾವೆಗಳು ಹೊರಹೊಮ್ಮುತ್ತಿರುವಂತೆ ಯಾವುದೇ ನಿರ್ದಿಷ್ಟ ಸಮಯದಲ್ಲಿ ಮಾರ್ಗಸೂಚಿಗಳನ್ನು ತ್ವರಿತವಾಗಿ ಪರಿಶೀಲಿಸಲು ಮತ್ತು ನವೀಕರಿಸಲು ಮಾನ್ಯತೆ ಪಡೆದ ವೇದಿಕೆ ಬೇಕಿದೆ. ಮಾನವರಲ್ಲಿನ ಮಂಕಿಪಾಕ್ಸ್ ಸೋಂಕು ಉತ್ತಮ ಸಂಪನ್ಮೂಲ ಆರೋಗ್ಯ ವ್ಯವಸ್ಥೆಗಳೊಂದಿಗೆ ಉನ್ನತ ಸಂಪನ್ಮೂಲಗಳನ್ನು ಹೊಂದಿರುವ ಆಸ್ಪತ್ರೆಗಳಿಗೂ ಸವಾಲಾಗಿ ಪರಿಣಮಿಸುತ್ತಿದೆ. ಮಾರ್ಗಸೂಚಿಗಳ ಕೊರತೆಯು ಮಂಕಿಪಾಕ್ಸ್ ರೋಗಿಗಳನ್ನು ನಿರ್ವಹಿಸುವಲ್ಲಿ ಸೀಮಿತ ಹಿಂದಿನ ಅನುಭವ ಹೊಂದಿರುವ ಕ್ಲಿನಿಕ್‌ಗಳ ಮೇಲೆ ವಿಶೇಷವಾಗಿ ಪರಿಣಾಮ ಬೀರಬಹುದು ಎಂದು ಸಂಶೋಧಕರು ಬಿಎಂಜೆ ಗ್ಲೋಬಲ್ ಹೆಲ್ತ್ ಜರ್ನಲ್ನಲ್ಲಿ ಪ್ರಕಟವಾದ ವರದಿಯಲ್ಲಿ ಬರೆದಿದ್ದಾರೆ.