ಲಂಡನ್: ಆಲ್ಕೋಹಾಲ್ ಸೇವನೆ ಎಂದಿಗೂ ಉತ್ತಮ ಅಭ್ಯಾಸವಲ್ಲ. ಅದರ ಪ್ರಮಾಣ ಕಡಿಮೆ ಇರಲಿ ಹೆಚ್ಚಿರಲಿ ಸೇವನೆ ಎಂದಿಗೂ ಆರೋಗ್ಯಕ್ಕೆ ಹಾನಿಯೇ ಎಂಬುದನ್ನು ಹೊಸ ಅಧ್ಯಯನ ತಿಳಿಸಿದೆ. ಆಲ್ಕೋಹಾಲ್ ಅನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೂ ಇದು 60 ರೋಗಗಳಿಗೆ ಕಾರಣವಾಗಿ ದೇಹವನ್ನು ದುರ್ಬಲಗೊಳಿಸುತ್ತದೆ. ಇದರಿಂದ ಕ್ಯಾಟರಾಕ್ಟ್ ಮತ್ತು ಗ್ಯಾಸ್ಟ್ರಿಕ್ ಹುಣ್ಣು ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.
ಪ್ರತಿವರ್ಷ ಜಾಗತಿಕವಾಗಿ 3 ಮಿಲಿಯನ್ ಸಾವಿಗೆ ಆಲ್ಕೋಹಾಲ್ ಕಾರಣವಾಗುತ್ತಿದೆ. ಆಲ್ಕೋಹಾಲ್ ಸೇವನೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಹೆಚ್ಚಾಗುತ್ತಿದೆ. ಬ್ರಿಟನ್ನ ಆಕ್ಸಫರ್ಡ್ ಯುನಿವರ್ಸಿಟಿ ಮತ್ತು ಚೀನಾದ ಪೆಕಿಂಗ್ ಈ ಅಧ್ಯಯನ ನಡೆಸಿದ್ದು, ಇದಕ್ಕಾಗಿ ಚೀನಾದ ನಗರ ಮತ್ತು ಗ್ರಾಮೀಣ ಪ್ರದೇಶದ 5,12,00 ವಯಸ್ಕರನ್ನು 12 ವರ್ಷಗಳ ಕಾಲ ಸಮೀಕ್ಷೆ ನಡೆಸಿದ್ದಾರೆ. ಈ ವೇಳೆ ಆರೋಗ್ಯ, 200 ರೋಗಗಳ ಮೇಲೆ ಆಲ್ಕೋಹಾಲ್ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿಶ್ಲೇಷಿಸಲಾಗಿದೆ.
60ಕ್ಕೂ ಹೆಚ್ಚು ರೋಗಕ್ಕೆ ಕಾರಣ: ನೇಚರ್ ಮೆಡಿಸಿಲ್ ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಆಲ್ಕೋಹಾಲ್ ಸೇವನೆಯಿಂದ ಪುರಷರ 61ರೋಗಗಳ ಮೇಲೆ ಹೆಚ್ಚಿನ ಪರಿಣಾಮ ಹೊಂದಿದೆ. ಈ ಅಧ್ಯಯನವೂ ಬಹುತೇಕ ಪುರುಷರ ಮೇಲೆ ನಡೆಸಲಾಗಿದ್ದು, ಕೇವಲ 2ರಷ್ಟು ನಿಯಮಿತವಾಗಿ ಮಹಿಳೆಯರು ಆಲ್ಕೋಹಾಲ್ ಸೇವನೆ ಮಾಡುವವರನ್ನು ಒಳಗೊಂಡಿದೆ.
ಇದರಲ್ಲಿ 1.1 ಮಿಲಿಯನ್ ಆಸ್ಪತ್ರೆಗೆ ಒಳಗಾದವರ ದಾಖಲೆಗಳಿವೆ. ಆಲ್ಕೋಹಾಲ್ ಸೇವಿಸದ ಪುರುಷರಿಗೆ ಹೋಲಿಸಿದರೆ, ನಿಯಮಿತವಾಗಿ ಆಲ್ಕೋಹಾಲ್ ಸೇವಿಸಿದ ಪುರುಷರು ಯಾವುದೇ ಕಾಯಿಲೆಗೆ ಒಳಗಾಗುವ ಅಪಾಯವನ್ನು ಹೊಂದಿರುತ್ತಾರೆ. ಜೊತೆಗೆ ಹೆಚ್ಚು ಆಸ್ಪತ್ರೆಗೆ ದಾಖಲಾಗುತ್ತಾರೆ.