ನವದೆಹಲಿ: ಪ್ರತಿ ವರ್ಷ ಹೃದಯ ರಕ್ತನಾಳ (ಸಿವಿಡಿ), ಹೃದಯ ರೋಗದಿಂದಾಗಿ ಮಿಲಿಯನ್ಗಟ್ಟಲೆ ಜನರು ಅಕಾಲಿಕ ಸಾವನ್ನಪ್ಪುತ್ತಿದ್ದಾರೆ ಎಂದು ಹೊಸ ವರದಿ ಮಾಹಿತಿ ಬಹಿರಂಗ ಪಡಿಸಿದೆ. ಅಲ್ಲದೇ ಹೃದಯ ಆರೋಗ್ಯ ಸಂಬಂಧ ಜಗತ್ತಿನಾದ್ಯಂತ ತುರ್ತು ಕ್ರಮಕ್ಕೆ ಕರೆ ನೀಡಿದೆ.
ದಿ ನ್ಯೂ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಎಂಬ ಹೆಸರಿಯನಲ್ಲಿ ಜರ್ನಲ್ ಆಫ್ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಾಜಿಯನ್ನು ವಿಶೇಷ ಲೇಖನ ಪ್ರಕಟಿಸಲಾಗಿದೆ. ಈ ಲೇಖನದಲ್ಲಿ ಆರೋಗ್ಯದ ಅಂದಾಜಿನ ಮಾಹಿತಿ ಒದಗಿಸಲಾಗಿದೆ. 1990- 2022ರವರೆಗೆ 21 ಜಾಗತಿಕ ಪ್ರದೇಶದಲ್ಲಿ ಹೃದಯ ರಕ್ತನಾಳದ ಅಪಾಯದ ಅಂಶಗಳ ಪರಿಣಾಮ ಕುರಿತು ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಶ್ಲೇಷಣೆ ನಡೆಸಲಾಗಿದೆ.
ವರದಿಯಲ್ಲಿ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಆಹಾರದ ಅಪಾಯ ಮತ್ತು ವಾಯು ಮಾಲಿನ್ಯ ಅಧಿಕ ಪ್ರಮಾಣದ ಸಿವಿಡಿ ಪ್ರಕರಣಕ್ಕೆ ಕಾರಣವಾದ ಅಂಶವಾಗಿದೆ ಎಂದು ತಿಳಿಸಲಾಗಿದೆ. ಸಿವಿಡಿಯಿಂದ ಏಷ್ಯಾ, ಯುರೋಪ್, ಆಫ್ರಿಕಾ ಮತ್ತು ಮಿಡಲ್ ಈಸ್ಟ್ಗಳ ಹೆಚ್ಚಿನ ಪ್ರಮಾಣದ ಹೊರೆ ಹೊಂದಿರುವುದಾಗಿ ತಿಳಿಸಿದೆ.
ಹೃದಯ ರಕ್ತನಾಳ ಸಮಸ್ಯೆ ನಿರಂತರ ಸವಾಲನ್ನು ಹೊಂದಿದ್ದು, ಇದು ಅಕಾಲಿ ಮತ್ತು ತಡೆಗಟ್ಟಬಹುದಾದ ಸಾವಿನ ಪ್ರಕರಣವನ್ನು ಹೊಂದಿದೆ ಎಂದು ವಾಷ್ಟಿಂಗ್ಟನ್ ಯುನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಗ್ರೇಗೊರಿ ಎ ರೊತ್ ತಿಳಿಸಿದ್ದಾರೆ. ಹಲವು ದುಬಾರಿಯಲ್ಲದ, ಪರಿಣಾಮಕಾರಿ ಚಿಕಿತ್ಸೆ ಇದೆ. ನಾವು ಅಪಾಯದ ಅಂಶವನ್ನು ಪತ್ತೆ ಮತ್ತು ಚಿಕಿತ್ಸೆಯ ಬಗ್ಗೆ ತಿಳಿದಿರಬೇಕು. ಜನರು ತಮ್ಮ ಆರೋಗ್ಯ ಸುಧಾರಣೆ ಮಾಡಲು ಸರಳ ಆರೋಗ್ಯಕರ ಆಯ್ಕೆ ಮಾಡಬೇಕಾಗುತ್ತದೆ. ದೇಶವೂ ಹೃದಯರಕ್ತನಾಳದ ರೋಗವನ್ನು ತಡೆಯಬಹುದಾದ ಮತ್ತು ಚಿಕಿತ್ಸೆ ನೀಡುವ ಪ್ರಯತ್ನ ಕೂಡಾ ಹೊಂದಿದೆ.