ಕರ್ನಾಟಕ

karnataka

ETV Bharat / sukhibhava

ಮಹಿಳೆಯರಲ್ಲಿ ಮೈಗ್ರೇನ್​ ಸಮಸ್ಯೆಗೆ ಕಡಿಮೆ ಈಸ್ಟ್ರೋಜನ್​ ಮಟ್ಟದ ಜೊತೆ ಸಿಜಿಆರ್​ಪಿ ಮಟ್ಟವೂ ಕಾರಣ - ಮಹಿಳೆಯರ ಪರೀಕ್ಷಾ ವಿಧಾನ

ಮಹಿಳೆಯರಲ್ಲಿ ಕಾಡುವ ಮೈಗ್ರೇನ್​ಗೆ ಅನೇಕ ಕಾರಣಗಳಿರುತ್ತವೆ. ಅದರಲ್ಲಿ ಒಂದು ಈಸ್ಟೋಮನ್​​ ಮಟ್ಟವೂ ಆಗಿರುತ್ತದೆ. ಈ ಹಾರ್ಮೋನ್​ಗಳಲ್ಲಿ ಉಂಟಾಗುವ ವ್ಯತ್ಯಯದಿಂದಾಗಿ ಅವರು ಈ ಮೈಗ್ರೇನ್​ ಸಮಸ್ಯೆ ಎದುರಿಸುತ್ತಾರೆ.

ಮಹಿಳೆಯರಲ್ಲಿ ಮೈಗ್ರೇನ್​ ಸಮಸ್ಯೆಗೆ ಕಡಿಮೆ ಈಸ್ಟ್ರೋಜನ್​ ಮಟ್ಟದ ಜೊತೆ ಸಿಜಿಆರ್​ಪಿ ಮಟ್ಟವೂ ಕಾರಣ
Migraines in women are caused by low estrogen levels and CGRP levels

By

Published : Feb 24, 2023, 12:27 PM IST

ಹೈದರಾಬಾದ್​: ಮೈಗ್ರೇನ್​ ಬಹುತೇಕರನ್ನು ಕಾಡುವ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಅನೇಕ ಕಾರಣಗಳೂ ಇವೆ. ಇನ್ನು ಮುಟ್ಟಿನ ವೇಳೆ ಅನೇಕರಿಗೆ ಮೈಗ್ರೇನ್​ ಸಮಸ್ಯೆ ಕಾಡುತ್ತದೆ. ಅದರಲ್ಲಿ ಮೈಗ್ರೇನ್​ ಹೊಂದಿರುವ ಸ್ತ್ರೀಯರಲ್ಲಿ ಈಸ್ಟ್ರೊಜೆನ್​ ಮಟ್ಟಗಳು ಏರಿಳಿತವಾಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಮೈಗ್ರೇನ್ ಪ್ರಕ್ರಿಯೆ ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರೋಟೀನ್ ಕ್ಯಾಲ್ಸಿಟೋನಿನ್ ಜೀನ್ - ಸಂಬಂಧಿತ ಪೆಪ್ಟೈಡ್​​​ನ ಮಟ್ಟಗಳು ಸಹ ಏರಿಳಿತಗೊಳ್ಳುತ್ತವೆ. ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಜಿಯ ವೈದ್ಯಕೀಯ ಜರ್ನಲ್ ನ್ಯೂರಾಲಜಿಯ ಆನ್‌ಲೈನ್ ಸಂಚಿಕೆಯಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ.

ಹಾರ್ಮೋನ್​ಗಳ ಏರಿಳಿತ: ಹಾರ್ಮೋನ್‌ನ ಏರಿಳಿತದ ನಂತರ ಈ ಉನ್ನತ ಮಟ್ಟದ ಸಿಜಿಆರ್​ಪಿ ಮುಟ್ಟಿನ ಸಮಯದಲ್ಲಿ ಮೈಗ್ರೇನ್ ದಾಳಿಗಳು ಏಕೆ ಹೆಚ್ಚು ಮತ್ತು ಋತುಬಂಧದ ನಂತರ ಮೈಗ್ರೇನ್ ದಾಳಿಗಳು ಕ್ರಮೇಣ ಕಡಿಮೆಯಾಗುತ್ತವೆ ಎಂಬುದನ್ನು ವಿವರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನದ ಲೇಖಕ ಬಿಯಾಂಕಾ ರಾಫೆಲ್ಲಿ ತಿಳಿಸಿದರು. ಈ ಅಧ್ಯಯನವು ಮೈಗ್ರೇನ್​ ಪ್ರಕ್ರಿಯೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವರು ನಮಗೆ ಸಹಾಯ ಮಾಡುತ್ತಾರೆ ಎಂದು ನಾವು ಭಾವಿಸುತ್ತವೆ. ಅಧ್ಯಯನದಲ್ಲಿ ಎಪಿಸೋಡಿಕ್ ಮೈಗ್ರೇನ್‌ ಹೊಂದಿರುವ ಮೂರು ಗುಂಪುಗಳಲ್ಲಿ ಭಾಗವಹಿಸಿದರು. ಋತುಚಕ್ರ, ಮೌಖಿಕ ಗರ್ಭ ನಿರೋಧಕ ಹೊಂದಿರುವವರು ಭಾಗವಹಿಸಿದ್ದರು. ಅಧ್ಯಯನದಲ್ಲಿ 180 ಜನರು ಭಾಗವಹಿಸಿದ್ದರು. ಇವರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ.

ಮಹಿಳೆಯರ ಪರೀಕ್ಷಾ ವಿಧಾನ: ಸಂಶೋಧಕರು ಸಿಜಿಆರ್​ಪಿ ಮಟ್ಟವನ್ನು ನಿರ್ಧರಿಸಲು ರಕ್ತ ಮತ್ತು ಕಣ್ಣೀರಿನ ದ್ರವವನ್ನು ಪರೀಕ್ಷಿಸಲಾಗಿದೆ. ನಿಯಮಿತ ಮುಟ್ಟಿನ ಚಕ್ರಗಳನ್ನು ಹೊಂದಿರುವವರಲ್ಲಿ, ಈಸ್ಟ್ರೊಜೆನ್ ಮಟ್ಟಗಳು ಕಡಿಮೆಯಾದಾಗ ಮತ್ತು ಅಂಡೋತ್ಪತ್ತಿ ಸಮಯದಲ್ಲಿ, ಮಟ್ಟಗಳು ಅತ್ಯಧಿಕವಾಗಿದ್ದಾಗ ಹಾರ್ಮೊನ್​ ಮಾದರಿಗಳನ್ನು ತೆಗೆದುಕೊಳ್ಳಲಾಗುವುದು. ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವವರ ಹಾರ್ಮೋನ್​ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಮೈಗ್ರೇನ್ ಮತ್ತು ನಿಯಮಿತ ಮುಟ್ಟಿನ ಚಕ್ರ ಹೊಂದಿರುವ ಮಹಿಳೆಯರಿಗೆ ಹೋಲಿಕೆ ಮಾಡಿದರೆ, ಮೈಗ್ರೇನ್ ಇಲ್ಲದವರಿಗಿಂತ ಮುಟ್ಟಿನ ಸಮಯದಲ್ಲಿ ಹೆಚ್ಚಿನ ಸಿಜಿಆರ್​ಪಿ ಇದೆ ಎಂದು ಅಧ್ಯಯನ ತಿಳಿಸಿದೆ.

ಕಣ್ಣೀರಿನ ಮೂಲಕವೂ ಪರೀಕ್ಷೆ: ಕಣ್ಣೀರಿನ ಮೂಲಕ ಸಿಜಿಆರ್​ಪಿ ಮಟ್ಟವನ್ನು ಅಳೆಯುವುದು ಸಾಧ್ಯವಾಗಿದೆ. ಈ ವಿಧಾನವು ಇನ್ನೂ ಪರಿಶೋಧನಾತ್ಮಕವಾಗಿದ್ದು, ಆಕ್ರಮಣಕಾರಿಯಾಗಿಲ್ಲ ಎಂದಿದ್ದಾರೆ. ಅಂಡೋತ್ಪತ್ತಿ ಸಮಯದಲ್ಲಿ ಹಾರ್ಮೋನ್ ಮಟ್ಟವನ್ನು ತೆಗೆದುಕೊಂಡಾಗ, ಅಂಡೋತ್ಪತ್ತಿ ದಿನದಂದು ಅವುಗಳನ್ನು ನಿಖರವಾಗಿ ತೆಗೆದುಕೊಂಡಿಲ್ಲ, ಆದ್ದರಿಂದ ಈಸ್ಟ್ರೊಜೆನ್ ಮಟ್ಟದಲ್ಲಿನ ಏರಿಳಿತಗಳು ಸಂಪೂರ್ಣವಾಗಿ ಪ್ರತಿಫಲಿಸುವುದಿಲ್ಲ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ:ತಡರಾತ್ರಿ ಯಾವ ಆಹಾರ ಸೇವಿಸಬಾರದು ಗೊತ್ತಾ..?

ABOUT THE AUTHOR

...view details