ಪುರುಷ ಲೈಂಗಿಕ ಸಾಮರ್ಥ್ಯವು ಸಂಕೀರ್ಣವಾದ ನ್ಯೂರೋಎಂಡೋಕ್ರೈನ್ ಪ್ರಕ್ರಿಯೆಯಾಗಿದೆ ಎಂದು ಬನರಾಸ್ ಹಿಂದೂ ವಿಶ್ವವಿದ್ಯಾಲಯ ಸೈಂಟಿಸ್ಟ್ ಆಫ್ ಇನ್ಸುಟಿಟ್ಯೂಟ್ ಸೈನ್ಸ್ನ ಜೀವಶಾಸ್ತ್ರ ವಿಭಾಗ ಹೊಸ ಅಧ್ಯಯನ ನಡೆಸಿದೆ. ಪುರುಷತ್ವದ ಪ್ರಮುಖ ಅಂಶವಾಗಿರುವ ಲೈಂಗಿಕ ಪರಾಕ್ರಮದ ಬಗ್ಗೆ ಅನಾದಿ ಕಾಲದ ಚಿಂತೆಗೆ ಸಂಬಂಧಿಸಿದಂತೆ ಈ ಅಧ್ಯಯನ ನಡೆಸಲಾಗಿದೆ.
ಪುರುಷರ ದುರ್ಬಲತೆಯ ಸುಮಾರು ಶೇ 50ರಷ್ಟು ಪ್ರಕರಣಗಳಿಗೆ ಅನೇಕ ಅಂಶಗಳು ಕಾರಣವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಜೀವನಶೈಲಿಯಲ್ಲಿನ ಬದಲಾವಣೆ, ಮಾನಸಿಕ ಒತ್ತಡ, ಪೋಷಣೆ, ಆಹಾರ ಮತ್ತು ಚಯಾಪಚಯ ಅಸ್ವಸ್ಥತೆಗಳು ದುರ್ಬಲತೆಯ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ ಎಂದು ಹಲವು ಅಧ್ಯಯನಗಳು ಸೂಚಿಸಿವೆ. ಮಾನಸಿಕ ಒತ್ತಡ ಮತ್ತು ದುರ್ಬಲತೆಯ ನಡುವಿನ ಸಂಬಂಧಗಳ ಕುರಿತು ಅನೇಕ ವರ್ಷಗಳಿಂದ ಚರ್ಚೆಯಲ್ಲಿದೆ. ಈ ಸಂಬಂಧ ಜಗತ್ತಿನಾದ್ಯಂತ ಅನೇಕ ಅಧ್ಯಯನಗಳು ಕೂಡ ನಡೆಯುತ್ತಿದೆ.
ದೀರ್ಘಕಾಲದ ಮಾನಸಿಕ ಒತ್ತಡ ಮತ್ತು ಪುರುಷ ಲೈಂಗಿಕ ಸಾಮರ್ಥ್ಯ ಮತ್ತು ಶಿಶ್ನದ ಚಟುವಟಿಕೆ ಮತ್ತು ಶರೀರಶಾಸ್ತ್ರದ ಮೇಲೆ ಅದರ ಪರಿಣಾಮಗಳನ್ನು ಅಧ್ಯಯನ ಮಾಡಿದ್ದಾರೆ. ಈ ಬಗೆಗಿನ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಇಲಿಗಳ ಮೇಲೆ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಮಾನಸಿಕ ಒತ್ತಡಕ್ಕೆ ಒಡ್ಡಿಕೊಂಡ ವಯಸ್ಕ ಪುರುಷ ಇಲಿಗಳ ಲೈಂಗಿಕ ಸಾಮರ್ಥ್ಯ ಮತ್ತು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಬಗ್ಗೆ ಪರೀಕ್ಷೆ ನಡೆಸಲಾಗಿದೆ. ಅಷ್ಟೇ ದೌರ್ಬಲ್ಯದ ಲಕ್ಷಣಗಳನ್ನು ಕಂಡುಕೊಳ್ಳಲಾಗಿದೆ ಎಂದು ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ನ ಜೈವಿಕ ವಿಜ್ಞಾನಗಳ ವಿಭಾಗದ ಡಾ ರಾಘವ್ ಕುಮಾರ್ ಮಿಶ್ರಾ, ಪಿಎಚ್ಡಿ ಅಭ್ಯರ್ಥಿ ಅನುಪಮ್ ಯಾದವ್ ತಿಳಿಸಿದ್ದಾರೆ.