ಕರ್ನಾಟಕ

karnataka

ETV Bharat / sukhibhava

Menstrual cup: ಮುಟ್ಟಿನ ಕಪ್​: ಮಹಿಳೆಯರು ತಿಳಿಯಲೇ ಬೇಕಿರುವ ವಿಚಾರಗಳಿವು..

Menstrual cup: ಮಹಿಳೆಯರ ಮುಟ್ಟಿನ ಕುರಿತು ಶಿಕ್ಷಣದ ಜೊತೆಗೆ ಪರಿಸರಸ್ನೇಹಿ ವಸ್ತುಗಳ ಬಳಕೆ ಕೂಡ ಹೆಚ್ಚಾಗಬೇಕಿದೆ. ಈ ಹಿನ್ನೆಲೆಯಲ್ಲಿ ಮುಟ್ಟಿನ ಕಪ್​ಗಳು ಹೇಗೆ ಸಹಾಯ ಮಾಡುತ್ತವೆ ಎಂಬ ಮಾಹಿತಿ ಓದಿ.

Menstrual cup is better than sanitary pad
Menstrual cup is better than sanitary pad

By

Published : Jul 27, 2023, 10:56 AM IST

ಮಹಿಳೆಯರ ಋತುಚಕ್ರದ ಮುಟ್ಟಿನ ಕಪ್​ಗಳು ಮರುಬಳಕೆ ಮಾಡಬಹುದಾದ ನೈರ್ಮಲ್ಯ ಸಾಧನ. ಸಿಲಿಕಾನ್​ನ ಈ ಕಪ್​ಗಳು ಬಳಕೆಗೆ ಸರಾಗವಾಗಿದ್ದು, ಕೊಳವೆ ಆಕಾರದಲ್ಲಿರುತ್ತವೆ. ಮುಟ್ಟಿನ ಕಪ್​ಗಳು ಬೇರೆ ರೀತಿಯ ಋತುಚಕ್ರದ ಸಾಧನಗಳಿಗಿಂತ ಹೆಚ್ಚಿನ ರಕ್ತವನ್ನು ಬೇರೆ ವಿಧಾನದಲ್ಲಿ ಸಂಗ್ರಹಿಸುತ್ತವೆ. ಇದು ಯೋನಿಯೊಳಗೇ ರಕ್ತ ಸಂಗ್ರಹಿಸುವ ಕಾರಣ ಬೇರೆ ವಸ್ತುಗಳ ಬಳಕೆಯಂತೆ ಹೆಚ್ಚು ಕಿರಿಕಿರಿ ನೀಡುವುದಿಲ್ಲ. ಇದರ ಜೊತೆಗೆ ಇದು ಪರಿಸರಸ್ನೇಹಿಯೂ ಆಗಿದ್ದು, ಟ್ಯಾಂಪೂನ್​ ಮತ್ತು ಸ್ಯಾನಿಟರಿ ಪ್ಯಾಡ್​ಗಳಿಗಿಂತ ಉತ್ತಮ ಆಯ್ಕೆಯೂ ಹೌದು. ಮುಟ್ಟಿನ ಕಪ್​ಗಳನ್ನು 10 ವರ್ಷಗಳ ಕಾಲ ಮರು ಬಳಕೆ ಮಾಡಬಹುದು. ಸಿರೊನ್​ ಹೈಜಿನ್​ ಸಹಸಂಸ್ಥಾಪಕ ಮತ್ತು ಸಿಇಒ ದೀಪ್​ ಬಜಾಜ್​ ಈ ಕುರಿತು ಮಾತನಾಡಿದ್ದಾರೆ.

ಪರಿಸರ ಸ್ನೇಹಿ: ಮಟ್ಟಿನ ಕಪ್​ಗಳು ಪರಿಸರಸ್ನೇಹಿ. ಸ್ಯಾನಿಟರಿ ಪ್ಯಾಡ್​ನಂತಹ ವಸ್ತುಗಳು ಕೊಳೆಯಲು (ಡಿಕಂಪೊಸ್​) 500 ವರ್ಷಗಳೇ ಬೇಕು. ಆದರೆ, ಇದು ಮರು ಬಳಕೆಯೊಂದಿಗೆ ದೀರ್ಘಾವಧಿ ಬಾಳಿಕೆ ಬರುತ್ತದೆ.

ವೆಚ್ಚ ಕಡಿಮೆ: ದಶಕಗಳ ಕಾಲ ಮರು ಬಳಕೆ ಮಾಡುವ ಕಾರಣ ಇದು ಪಾಕೆಟ್‌ಸ್ನೇಹಿ ಕೂಡ. ಸ್ಯಾನಿಟರಿ ಪ್ಯಾಡ್​ಗಳು ಏಕಬಳಕೆ ವಸ್ತುಗಳಾಗಿದ್ದು, ವ್ಯಯ ಹೆಚ್ಚು.

ಹೆಚ್ಚು ಸುರಕ್ಷಿತ: ಮಾರುಕಟ್ಟೆಯಲ್ಲಿರುವ ಬಹುತೇಕ ಪ್ಯಾಡ್​, ಟ್ಯಾಂಪೂನ್​ಗಳು ವಿಷಕಾರಿ ರಾಸಾಯನಿಕ ಮತ್ತು ಸಿಂಥೆಟಿಕ್​ ವಸ್ತುಗಳನ್ನು ಹೊಂದಿವೆ. ಇದು ನಿಮ್ಮ ತ್ವಚೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ದೇಹ ಸೇರುವ ಸಾಧ್ಯತೆಯೂ ಇದೆ. ಉತ್ತಮ ಗುಣಮಟ್ಟದ ಮುಟ್ಟಿನ ಕಪ್​ಗಳನ್ನು ವೈದ್ಯಕೀಯ ಮಟ್ಟದ ಸಿಲಿಕಾನ್​ನಿಂದ ಮಾಡಲಾಗಿದೆ. ತ್ವಚೆ ಮತ್ತು ಒಳಾಂಗಕ್ಕೆ ಯಾವುದೇ ಹಾನಿ ಮಾಡುವುದಿಲ್ಲ.

ಆರಾಮದಾಯಕ: ಮುಟ್ಟಿನ ಕಪ್​ಗಳು 8 ಗಂಟೆಗಳ ಲೀಕ್​ ಪ್ರೂಫ್​ ಆಗಿರುತ್ತವೆ. ಪ್ಯಾಡ್​ ಅಥವಾ ಟ್ಯಾಂಪೂನ್​ ರೀತಿ ಪ್ರತಿ ಮೂರ್ನಾಲ್ಕು ಗಂಟೆಗೊಮ್ಮ ಬದಲಾಯಿಸುವ ಚಿಂತೆ ಇರದು. ತ್ವಚೆಯ ಮೇಲೆ ಯಾವುದೇ ಹಾನಿ ಮಾಡುವುದಿಲ್ಲ. ಇದರ ಬಳಕೆಯಿಂದ ನಿಶ್ಚಿಂತೆಯಾಗಿ ಈಜು ಸೇರಿದಂತೆ ಎಲ್ಲ ಚಟುವಟಿಕೆಯಲ್ಲೂ ಭಾಗಿಯಾಗಬಹುದು.

ಹೆಚ್ಚು ರಕ್ತ ಸಂಗ್ರಹಣೆ: ಮುಟ್ಟಿನ ಕಪ್​ಗಳು ಅದರ ಗಾತ್ರದ ಆಧಾರದ ಮೇಲೆ 15-25 ಎಮ್​​ಎಲ್​ ರಕ್ತ ಸಂಗ್ರಹಿಸುತ್ತವೆ. ಇದು ಟ್ಯಾಂಪೂನ್​, ಪ್ಯಾಡ್​ಗಳಿಗಿಂತ ಹೆಚ್ಚು. ಹೀಗಾಗಿ ಯಾವುದೇ ಚಿಂತೆಯಿಲ್ಲದೆ, ಇವುಗಳನ್ನು ಬಳಸಬಹುದು.

ಸೂಕ್ತ ಕಪ್​ ಆಯ್ಕೆ ಹೇಗೆ?:ಮುಟ್ಟಿನ ಕಪ್​ಗಳು ವಯಸ್ಸು, ಮಗುವಿನ ಜನನ ಇತಿಹಾಸ ಮತ್ತು ರಕ್ತಸ್ರಾವದ ತೀವ್ರತೆಯ ಮೇಲೆ ವಿವಿಧ ಗಾತ್ರಗಳಲ್ಲಿ ಲಭ್ಯವಿದೆ. ಉತ್ತಮ ಗುಣಮಟ್ಟದ ಕಪ್​ಗಳು ನಿಮಗೆ ಈ ಮಾರ್ಗದರ್ಶನದ ಆಧಾರದಡಿ ಆಯ್ಕೆ ಮಾಡುವ ಸೌಲಭ್ಯ ಒದಗಿಸುತ್ತವೆ.

ಬಳಕೆ ಹೇಗೆ?: ಮುಟ್ಟಿನ ಕಪ್​ಗಳ ಬಳಕೆಗೂ ಮುನ್ನ ಅವುಗಳನ್ನು ಚೆನ್ನಾಗಿ ಕುದಿಯುವ ನೀರಿನಲ್ಲಿ ಸ್ಟೇರಿಲೈಸ್​ ಮಾಡಬೇಕು. ಐದು ದಿನದ ಮುಟ್ಟಿನ ಅವಧಿಯಲ್ಲಿ ಬಳಕೆ ಮಾಡುವಾಗ ಅದು ತುಂಬಿದ ಕೂಡಲೇ ಅದನ್ನು ಚೆಲ್ಲಿ, ಸೋಪು, ನೀರಿನಿಂದ ಶುದ್ದಗೊಳಿಸಿ ಮತ್ತೆ ಬಳಕೆ ಮಾಡಬಹುದು. ಮುಟ್ಟಿನ ಅವಧಿ ಮುಗಿದ ಬಳಿಕ ಮತ್ತೊಮ್ಮೆ ಸ್ಟೈರಿಲೈಜ್​ ಮಾಡುವುದು ಅವಶ್ಯಕ.

ಮುಟ್ಟಿನ ಕಪ್​ ಬಳಕೆ ಮಾಡುವ ಬಗ್ಗೆ ಅನೇಕರಲ್ಲಿ ತಪ್ಪು ಕಲ್ಪನೆಯಿದ್ದು, ಇವು ಯೋನಿಯೊಳಗೆ ಸೇರಿಸುವುದು ಕಷ್ಟಸಾಧ್ಯ, ಯೋನಿಯೊಳಗೆ ಹಾನಿ ಮಾಡಿದರೆ ಏನು ಮಾಡುವುದು ಎಂಬ ಭಯವಿದೆ. ಆದರೆ, ಇದರಿಂದ ಯಾವುದೇ ಹಾನಿಯಾಗುವುದಿಲ್ಲ. ಇದರ ಬಳಕೆ ಕೂಡ ಸುಲಭ. ಇದರ ಮೇಲಿನ ತೆರೆದ ಭಾಗವನ್ನು ಸಿ ಆಕಾರದಲ್ಲಿ ಮಡಚಿ ಯೋನಿಯೊಳಗೆ ಸೇರಿಸಬೇಕು. ಈ ಸಂಬಂಧ ಅನೇಕ ವಿಡಿಯೋಗಳು ಯೂಟ್ಯೂಬ್​ನಲ್ಲಿ ಲಭ್ಯವಿದೆ.

ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ಬಳಸಬಹುದಾದ ಪರಿಸರ ಸ್ನೇಹಿ ಉತ್ಪನ್ನಗಳು ಯಾವುವು?

ABOUT THE AUTHOR

...view details