ಹೈದರಾಬಾದ್: ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವ ಮೂಲಕ ಪ್ರಾಸ್ಪೇಟ್ ಕ್ಯಾನ್ಸರ್ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಹೊಸ ಸಂಶೋಧನೆ ತಿಳಿಸಿದೆ. ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಈ ಸಂಬಂಧ ಅಧ್ಯಯನ ನಡೆಸಿದೆ. ವರ್ಣರಂಜಿತ ಆಹಾರಗಳು, ಸಮೃದ್ಧ ಪೋಷಕಾಂಶಗಳು ಪ್ರಾಸ್ಪೇಟ್ ಕ್ಸಾನ್ಸರ್ ತಡೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದು ಪುರುಷರು ರೋಗಗಳಿಂದ ವಿಕಿರಣ ಚಿಕಿತ್ಸೆಗೆ ಒಳಗಾಗಿದ್ದರೆ, ಅದರಿಂದ ಬೇಗ ಚೇತರಿಕೆಗೆ ಸಹಾಯ ಮಾಡುತ್ತದೆ. ಪೀರ್-ರಿವ್ಯೂಡ್ ಜರ್ನಲ್ ಕ್ಯಾನ್ಸರ್ಸ್‌ನಲ್ಲಿ ಪ್ರಕಟವಾದ ಎರಡು ಅಧ್ಯಯನಗಳಲ್ಲಿ ಇಂತಹ ಅಹಾರ ಹೊಂದಿರುವ ಮೆಡಿಟರೇನಿಯನ್ ಅಥವಾ ಏಷ್ಯನ್ ಆಹಾರದ ದಕ್ಷತೆಯನ್ನು ತೋರಿಸಿದೆ.
ಅಧ್ಯಯನದಲ್ಲಿ, ಪ್ರಾಸ್ಟೇಟ್ ಕ್ಯಾನ್ಸರ್ ರೋಗಿಗಳಲ್ಲಿ ಮೈಕ್ರೋನ್ಯೂಟ್ರಿಯಂಟ್ ಪ್ಲಾಸ್ಮಾ ಸಾಂದ್ರತೆಯನ್ನು ಆರೋಗ್ಯಕರ ನಿಯಂತ್ರಣ ಗುಂಪಿನೊಂದಿಗೆ ಹೋಲಿಸಿದ್ದಾರೆ. ಇದು ರೋಗಿಗಳಲ್ಲಿ ಕಡಿಮೆ ಮಟ್ಟದ ಲುಟೀನ್, ಲೈಕೋಪೀನ್, ಆಲ್ಫಾ-ಕ್ಯಾರೋಟಿನ್ ಮತ್ತು ಸೆಲೆನಿಯಮ್ ಅಂಶ ಹೊಂದಿರುವುದನ್ನು ಬಹಿರಂಗಪಡಿಸಿದೆ.
ರಕ್ತದ ಪ್ಲಾಸ್ಮಾದಲ್ಲಿನ ಕಡಿಮೆ ಲೈಕೋಪೀನ್ ಮತ್ತು ಸೆಲೆನಿಯಮ್ ವಿಕಿರಣಕ್ಕೆ ಒಡ್ಡಿಕೊಂಡ ಡಿಎನ್ಎ ಹಾನಿಗೆ ಆಗುವ ಸಂಭವ ಇರುತ್ತದೆ. ಲೈಕೋಪೀನ್ ಮಿಲಿಲೀಟರ್‌ಗೆ 0.25 ಮೈಕ್ರೊಗ್ರಾಂ ಗಿಂತ ಕಡಿಮೆ ಪ್ಲಾಸ್ಮಾ ಸಾಂದ್ರತೆಯನ್ನು ಹೊಂದಿರುವ ಪುರುಷರು ಮತ್ತು ಸೆಲೆನಿಯಂ 120 ಮೈಕ್ರೋ ಗ್ರಾಂ ಗಿಂತ ಕಡಿಮೆ ಇರುವವರು ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯವನ್ನು ಹೊಂದಿರುತ್ತಾರೆ. ಇವರು ವಿಕಿರಣದಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳಿಗೆ ಹೆಚ್ಚು ಸಂವೇದನಾಶೀಲರಾಗಿರುತ್ತಾರೆ.
ಮೆಡಿಟರೇನಿಯನ್ ಡಯಟ್ ಆಹಾರಗಳು: ಟೊಮೆಟೊ, ಮೆಲನ್, ದ್ರಾಕ್ಷಿ, ಪೀಚಸ್, ಪಪ್ಪಾಯ, ಕಲ್ಲಂಗಡಿ ಮತ್ತು ಕ್ರಾನ್ಬೆರ್ರಿಯಲ್ಲಿ ಲೈಕೋಪೀನ್ ಸಮೃದ್ಧವಾಗಿರುತ್ತದೆ. ಬಿಳಿ ಮಾಂಸ, ಶೆಲ್ಫಿಶ್, ಮೀನು, ಮೊಟ್ಟೆ, ಒಣ ಹಣ್ಣುಗಳನ್ನು ಈ ಸೆಲೆನಿಯಂ ಹೆಚ್ಚಾಗಿರುತ್ತದೆ. ಇದನ್ನು ಪೂರಕ ಆಹಾರವಾಗಿ ಪಡೆಯುವುದರಿಂದ ಪ್ರಯೋಜನ ಪಡೆಯಬಹುದಾಗಿದೆ ಎಂದು ಅಧ್ಯಯನದ ಸಹ ಲೇಖಲಿ ಡಾ ಪೆರ್ಮಲ್ ತಿಳಿಸಿದ್ದಾರೆ. ಮೆಡಿಟೇರಿಯನ್ ಡಯಟ್ ಅಳವಡಿಸಿಕೊಂಡ ಬಳಿಕ ಈ ಬಗ್ಗೆ ವ್ಯತ್ಯಾಸಗಳನ್ನು ಕಾಣಬಹುದು. ಆಹಾರ, ಜೀರ್ಣಾಂಗ ವ್ಯವಸ್ಥೆ, ವ್ಯಕ್ತಿಯ ಜೀನೋಟೈಪ್ ಮತ್ತು ಅವರ ಸೂಕ್ಷ್ಮಜೀವಿಗಳ ಆಧಾರದ ಮೇಲೆ ಜನರು ವಿವಿಧ ರೀತಿಯಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವ ಹಿನ್ನಲೆ ಈ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಮುನ್ನ ವೈದ್ಯರ ಸಂಪರ್ಕಿಸುವುದು ಮುಖ್ಯವಾಗುತ್ತದೆ.
ಪುರುಷರಲ್ಲಿ ಸಾಮಾನ್ಯ ಮತ್ತು ಮಾರಾಣಾಂತಿಕ ಕ್ಯಾನ್ಸರ್ ಈ ಪ್ರಾಸ್ಪೇಟ್ ಕ್ಸಾನ್ಸರ್ ಆಗಿದೆ. ಪೋಷಕಾಂಶಗಳ ಕೊರತೆ ಕೂಡ ಇದಕ್ಕೆ ಪರೋಕ್ಷ ಸಂಬಂಧ ಹೊಂದಿದೆ. ಇದರ ಹೊರತಾಗಿ ಕುಟುಂಬದ ಇತಿಹಾಸ ಮತ್ತು ವಯಸ್ಸು ಕೂಡ ಈ ರೋಗದೊಂದಿಗೆ ಸಂಬಂದ ಹೊಂದಿದೆ. ಅತಿ ತೂಕ ಮತ್ತು ಎತ್ತರ ಬೆಳವಣಿಗೆಯು ಕೂಡ ಈ ಪ್ರಾಸ್ಪೇಟ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಡೈರಿ ಉತ್ಪನ್ನಗಳು ಮತ್ತು ಕಡಿಮೆ ಪ್ರಮಾಣದ ವಿಟಮಿನ್ ಇ ಸೇವನೆ ಕೂಡ ಪುರುಷರಲ್ಲಿ ಈ ಪಿಸಿಗೆ ಕಾರಣವಾಗಿದೆ ಎಂಬುದನ್ನು ಸಣ್ಣ ಸಾಕ್ಷ್ಯ ತಿಳಿಸಿದೆ. ವಿಟಮಿನ್ ಇ ಸಮೃದ್ದ ಆಹಾರ ಸೇವನೆ ಅಗತ್ಯವಾಗಿದ್ದು, ಈ ಆಹಾರಗಳು ಒಣ ಹಣ್ಣು, ತಾಜಾ ಹಣ್ಣು, ಸೀಡ್ಸ್, ಪ್ಲಾಟ್ ಬೇಸ್ಡ್ ಆಯಿಲ್ ಮತ್ತು ತರಕಾರಿಯಲ್ಲಿ ಸಮೃದ್ದವಾಗಿರುತ್ತದೆ.
ಇದನ್ನೂ ಓದಿ:ಪರೀಕ್ಷೆಗೆ ಮುನ್ನ ಯಾವ ರೀತಿ ಆಹಾರ ಸೇವನೆ ಮಾಡಬೇಕು: ಯಾಕೆ ಇದು ಮುಖ್ಯ?