ಕರ್ನಾಟಕ

karnataka

ETV Bharat / sukhibhava

ಕಿವುಡ ಮತ್ತು ಮೂಗ ದಂಪತಿಗಾಗಿ ಸನ್ನೆ ಭಾಷೆ ಕಲಿತ ವೈದ್ಯಕೀಯ ಸಿಬ್ಬಂದಿ.. ಯಾಕೆ ಗೊತ್ತಾ? - ಐವಿಎಫ್​ ಚಿಕಿತ್ಸೆಯಲ್ಲಿ ಜನಿಸಿದ ಮಗು

ಪೋಷಕರಿಗೆ ಮಗುವಿನ ಚಿಕಿತ್ಸೆ ಕುರಿತು ಅರ್ಥೈಸಿಕೊಳ್ಳಲು ಸನ್ನೆ ಭಾಷೆಯನ್ನು ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಕಲಿತಿದ್ದಾರೆ.

medical-staff-learned-sign-language-to-save-mute-couple-baby
medical-staff-learned-sign-language-to-save-mute-couple-baby

By ETV Bharat Karnataka Team

Published : Dec 27, 2023, 1:21 PM IST

ಹೈದರಾಬಾದ್​: ವರ್ಷಗಳು ಉರುಳಿದರೂ ಮಕ್ಕಳ ಭಾಗ್ಯದಿಂದ ವಂಚಿತವಾಗಿದ್ದ ಆ ದಂಪತಿ ಪ್ರಾರ್ಥನೆ ಕಡೆಗೂ ಫಲಿಸಿದೆ. ಐವಿಎಫ್​ ಮೂಲಕ ಅವಳಿ ಮಕ್ಕಳ ಪೋಷಕರಾಗಿದ್ದಾರೆ. ಆದರೆ ದುರದೃಷ್ಟವಶಾತ್​​ ಒಂದು ಮಗುವು ಅನಾರೋಗ್ಯದಿಂದ ಅಸುನೀಗಿದೆ. ಬದುಕಿದ ಮತ್ತೊಂದು ಮಗು ಕಡಿಮೆ ತೂಕದ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಯಿತು. 80 ದಿನಗಳ ಸುದೀರ್ಘ ಚಿಕಿತ್ಸೆಯ ಬಳಿಕ ವೈದ್ಯರು ಹೊಸ ಜೀವನವನ್ನು ಮಗುವಿಗೆ ನೀಡಿದ್ದಾರೆ.

ಈ ಕ್ಷಣ ಆ ಪೋಷಕರ ಖುಷಿಗೆ ಪಾರವೇ ಇರಲಿಲ್ಲ. ಈ 80 ದಿನಗಳ ಹೋರಾಟ ಪೋಷಕರಿಗೆ ಮಾತ್ರವಲ್ಲ, ಅಲ್ಲಿನ ವೈದ್ಯಕೀಯ ಸಿಬ್ಬಂದಿಗೂ ಸವಾಲುದಾಯಕವಾಗಿತ್ತು. ಕಾರಣ ಆ ಪೋಷಕರಿಗೆ, ಕಿವಿ ಕೇಳದು ಮತ್ತು ಮಾತುಗಳೂ ಬಾರದು. ಇದರಿಂದ ಪರಿಸ್ಥಿತಿ ಅರ್ಥೈಸುವುದು ಸುಲಭವಾಗಿರಲಿಲ್ಲ. ಇದಕ್ಕೆ ಅಲ್ಲಿನ ಸಿಬ್ಬಂದಿ ಕೂಡ ಸನ್ನೆ ಭಾಷೆಯನ್ನು (ಕಿವುಡ ಮತ್ತು ಮೂಗರ ಸಂಪರ್ಕಕ್ಕೆ ಬಳಕೆ ಮಾಡುವ ಅಂಗಿಂಕ ಚಿಹ್ನೆಗಳು) ಕಲಿತರು. ಈ ಅಪರೂಪದ ಘಟನೆ ನಡೆದಿದ್ದು ಹೈದರಾಬಾದ್​ನ ಕೆಐಎಂನ ಕುಡಲ್ಸ್​ ಆಸ್ಪತ್ರೆಯಲ್ಲಿ. ಈ ಕುರಿತು ಅಲ್ಲಿನ ನವಜಾತ ಶಿಶುಗಳ ವಿಭಾಗದ ಕ್ಲಿನಿಕಲ್​ ಡೈರೆಕ್ಟರ್​​ ಡಾ ಸಿ ಅಪರ್ಣಾ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು.

ಮಾರಿ ಭಾಗ್ಯಮ್ಮ ಮತ್ತು ರಾಜಶೇಖರ್​​ ದಂಪತಿಗಳಿಬ್ಬರಿಗೂ ಮಾತು ಬಾರದು. ಈ ಹಿಂದೆ ಮಗು ಕಳೆದುಕೊಂಡಿದ್ದ ಈ ಜೋಡಿ ಇತ್ತೀಚಿಗೆ ಅವಳಿ ಮಕ್ಕಳ ಪೋಷಕರಾದರು. ಇದರಲ್ಲಿ ಒಂದು ಗಂಡು ಮತ್ತೊಂದು ಹೆಣ್ಣು. ಗಂಡು ಮಗು ಅನಾರೋಗ್ಯದಿಂದ ಸಾವನ್ನಪ್ಪಿತು. ಉಳಿದ ಹೆಣ್ಣು ಮಗುವಿನ ತೂಕ ಕೇವಲ 540 ಗ್ರಾಂ ಇದ್ದು, ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್​ ಕುಡಲ್ಸ್​​ಗೆ ದಾಖಲು ಮಾಡಲಾಯಿತು. ಅಲ್ಲಿ ವೈದ್ಯರು 80 ದಿನಗಳು ನಡೆಸಿದ ಚಿಕಿತ್ಸೆಯಿಂದಾಗಿ 540 ಗ್ರಾಂ ಇದ್ದ ಮಗುವು 1642 ಗ್ರಾಂ ತೂಗಿತು. ಈ ವೇಳೆ, ಪೋಷಕರ ಖಷಿಗೆ ಪಾರಾವೇ ಇಲ್ಲದಂತೆ ಆಗಿ ವೈದ್ಯರಿಗೆ ಕೃತಜ್ಞತೆ ತೋರಿದರು.

ಯಾಗ ನಡೆಸಿದ ವೈದ್ಯಕೀಯ ಸಿಬ್ಬಂದಿ:ಈ ಪ್ರಯಾಣವೂ ಪೋಷಕರಿಗೆ ಮಾತ್ರವಲ್ಲ, ವೈದ್ಯಕೀಯ ಸಿಬ್ಬಂದಿಗೂ ಒಂದು ಯಜ್ಞ ಮಾಡಿದಂತಹ ಅನುಭವ. ಕಾರಣ ಮಗುವಿಗೆ ಯಾವ ರೀತಿ ಚಿಕಿತ್ಸೆ ನಡೆಸಲಾಗುತ್ತಿದೆ. ಇದರಿಂದ ಆಗುವ ಪರಿಣಾಮ ಕುರಿತು ಪೋಷಕರಿಗೆ ಹೇಳುವುದು ಬಲು ಕಷ್ಟವಾಗಿತ್ತು. ಮೂಗ - ಕಿವುಡ ದಂಪತಿಗಳಿಗೆ ಈ ಕುರಿತು ಪೇಪರ್​ನಲ್ಲಿ ಬರೆದು ಹೇಳಿ ಅರ್ಥೈಸುವ ಪ್ರಯತ್ನವೂ ನಡೆಯಿತು. ಈ ಸಮಯದಲ್ಲಿ ಅವರ ಸಹಾಯಕರೊಬ್ಬರು ಅವರ ಜೊತೆಗೆ ಬಂದು ವೈದ್ಯರ ಹೇಳುತ್ತಿದ್ದನ್ನು ತಿಳಿಸಿ ಹೇಳುವ ಪ್ರಯತ್ನ ಮಾಡುತ್ತಿದ್ದರು. ಅವರು ಬರದೆ ಇದ್ದಾಗ ಸಮಸ್ಯೆ ಆಗುತ್ತಿತ್ತು. ಇದಕ್ಕಾಗಿ ವೈದ್ಯರು ಮತ್ತು ಸಿಬ್ಬಂದಿಗಳು 16 ಚಿಹ್ನೆಯನ್ನು ಕಲಿತರು. ಈ ಮೂಲಕ ಅವರ ಸಂಭಾಷಣೆ ಸಾಗಿತು. ಇದೀಗ ವೈದ್ಯರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಮಗು ಜೀವಂತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗರ್ಭಿಣಿಯರಿಗೆ ಆರಂಭಿಕ ಗರ್ಭಾವಸ್ಥೆಯಲ್ಲಿ ವಾಂತಿಯಾಗುವುದೇಕೆ?

ABOUT THE AUTHOR

...view details