ಹೈದರಾಬಾದ್:ಕನಿಷ್ಠ 60 ಪ್ರತಿಶತದಷ್ಟು ಜನರು ಮಾಸ್ಕ್ ಧರಿಸಲು ಪ್ರಾರಂಭಿಸಿದರೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡರೆ ಕೊರೊನಾ ವೈರಸ್ ಹರಡುವಿಕೆಯನ್ನು ತಪ್ಪಿಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
"ಒಟ್ಟು ಜನಸಂಖ್ಯೆಯ ಶೇ 60ರಷ್ಟು ಜನರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ನಿಯಮ ಪಾಲಿಸಿದರೆ ಸಾಮೂಹಿಕ ವ್ಯಾಕ್ಸಿನೇಷನ್ ಇಲ್ಲದೇ ವೈರಸ್ ಹರಡುವುದನ್ನು ತಡೆಯಬಹುದು" ಎಂದು ಯುಎಸ್ನ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಟಂಡನ್ ಸ್ಕೂಲ್ ಆಫ್ ಇಂಜಿನಿಯರಿಂಗ್ನ ಮೌರಿಜಿಯೊ ಪೊರ್ಫಿರಿ ಹೇಳಿದರು.