ಹೈದರಾಬಾದ್: ಜರ್ಮನಿಯ ಮಾರ್ಬರ್ಗ , ಫ್ರಾಂಕ್‌ಫರ್ಟ್, ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ 1976ರಲ್ಲಿ ಪತ್ತೆಯಾದ ವೈರಸ್ ಅನ್ನು, ವೈರಾಣುಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ಇದು ಫಿಲೋವಿರಿಡೆ ಕುಟುಂಬದ ಸದಸ್ಯನಾಗಿದ್ದು, ಎಬೋಲಾ ವೈರಸ್‌ನಂತೆಯೇ ಮಾರಣಾಂತಿಕವಾಗಿದೆ. ಮಾರ್ಬರ್ಗ ವೈರಸ್ ಬಾವಲಿಗಳಿಂದ ಮತ್ತು ಮನುಷ್ಯರಿಂದ ಮನುಷ್ಯನಿಗೆ ಹರಡುತ್ತದೆ.
ಎರಡು ಪ್ರಕರಣ ಪತ್ತೆ: 2004 ರಲ್ಲಿ ಮಧ್ಯ ಆಫ್ರಿಕಾದ ಅಂಗೋಲಾದಲ್ಲಿ ಮಾರ್ಬರ್ಗ ವೈರಸ್ ಪತ್ತೆಯಾಗಿತ್ತು. ಇದು ಶೇ 90ರಷ್ಟು ಸಾವಿನ ಪ್ರಮಾಣವನ್ನು ಹೊಂದಿದೆ. 252 ಸೋಂಕಿತರಲ್ಲಿ 227 ಜನ ಸಾವಿಗೀಡಾಗಿದ್ದರು. ಜುಲೈ 2022 ರಲ್ಲಿ, ಸುಮಾರು 18 ವರ್ಷಗಳ ನಂತರ, ಪಶ್ಚಿಮ ಆಫ್ರಿಕಾದ ಘಾನಾದ ಪ್ರದೇಶದಲ್ಲಿ ಮಾರ್ಬರ್ಗ್ ವೈರಸ್‌ನ ಎರಡು ಪ್ರಕರಣಗಳು ಪತ್ತೆಯಾಗಿವೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಗಿನಿ ಪ್ರಾಂತ್ಯದಲ್ಲಿ ಎಬೋಲಾ ವೈರಸ್ ಸೋಂಕಿನ ಎರಡನೇ ಅಲೆಯು ಅಂತ್ಯಗೊಂಡಿದೆ ಎಂದು ಘೋಷಿಸಿದ ಎರಡು ತಿಂಗಳಿನಲ್ಲೇ ಅಪಾಯ ಹೆಚ್ಚಾಗಿದೆ. ಕಳೆದ ವರ್ಷ ಶುರುವಾಗಿದ್ದ ಈ ಸೋಂಕು 12 ಮಂದಿಯ ಪ್ರಾಣವನ್ನೇ ಕಿತ್ತುಕೊಂಡಿತ್ತು. ಜಿನೇವಾದ ವಿಶ್ವ ಆರೋಗ್ಯ ಸಂಸ್ಥೆಯು ರೋಗಾಣುವಿನ ಹರಡುವಿಕೆ ಬಗ್ಗೆ ಉಲ್ಲೇಖಿಸಿತ್ತು. ಈ ರೋಗವು ಪ್ರಾದೇಶಿಕ ಮತ್ತು ದೇಶೀಯ ಮಟ್ಟದಲ್ಲಿ ಹೆಚ್ಚಾಗಿದೆಯೇ ವಿನಃ ಅಂತಾರಾಷ್ಟ್ರೀಯ ಮಟ್ಟಕ್ಕೆ ಹರಡುವ ಅಪಾಯ ಅಷ್ಟಾಗಿಲ್ಲ ಎಂದು ಹೇಳಿತ್ತು.
ವೈರಸ್‌ನ ಅವಧಿ 3 ವಾರ:ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡುವ ಮೂಲಕ ರೋಗಿಯ ಕುಟುಂಬ ಸದಸ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಸೋಂಕಿಗೆ ಒಳಗಾಗಬಹುದು. ಮಾರ್ಬರ್ಗ ವೈರಸ್‌ನ ಅವಧಿಯು 3 ವಾರಗಳವರೆಗೆ ಇರಬಹುದು. ಹೆಚ್ಚುತ್ತಿರುವ ಜಾಗತೀಕರಣ ಮತ್ತು ಅಂತಾರಾಷ್ಟ್ರೀಯ ಪ್ರಯಾಣವು ಜಾಗತಿಕ ಹರಡುವಿಕೆಯ ಅಪಾಯ ಹೆಚ್ಚಿಸುತ್ತದೆ.